For Quick Alerts
  ALLOW NOTIFICATIONS  
  For Daily Alerts

  ತಮಿಳುನಾಡಿನಲ್ಲಿ ಯಶ್ ಅಭಿಮಾನಿಗಳು ಮಾಡಿದ ಮಾನವೀಯ ಕಾರ್ಯ

  |

  ಕೆಜಿಎಫ್ ಸಿನಿಮಾದ ನಂತರ ದೇಶದೆಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ನಟ ಯಶ್. ಕೆಜಿಎಫ್ ಸಿನಿಮಾ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿ ಎಲ್ಲ ಭಾಷೆಗಳಲ್ಲಿಯೂ ಹಿಟ್ ಆಗಿತ್ತು. ಹಾಗಾಗಿ ಎಲ್ಲ ರಾಜ್ಯಗಳಲ್ಲಿಯೂ ಯಶ್ ಅಭಿಮಾನಿಗಳು ಆಗಲೇ ಹುಟ್ಟಿಕೊಂಡಿದ್ದರು.

  ತಮಿಳುನಾಡಿನ ಯಶ್ ಅಭಿಮಾನಿಗಳಿಗೆ ಪ್ರತೀ ತಿಂಗಳು 8 ನೇ ತಾರೀಖು ವಿಶೇಷ ದಿನ | Yash

  'ಕೆಜಿಎಫ್-2' ಸಿನಿಮಾವನ್ನು ವಿದೇಶದಲ್ಲಿ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿರುವ ವಿತರಕರು; ಕಾರಣವೇನು?

  ಇದೀಗ ತಮಿಳುನಾಡಿನ ಯಶ್ ಅಭಿಮಾನಿಗಳು ಯಶ್ ಹೆಸರಲ್ಲಿ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಅಭಿಮಾನಿ ನಟನ ಹುಟ್ಟುಹಬ್ಬ ಅಭಿಮಾನಿಗೆ ಹಬ್ಬದಂತೆ. ಹಾಗೆಯೇ ಯಶ್ ಹುಟ್ಟುಹಬ್ಬದ ದಿನವಾದ ಜನವರಿ 8 ಅನ್ನು ತಮಿಳುನಾಡು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ. ಆದರೆ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ತಿಂಗಳ ಎಂಟನೇ ತಾರೀಖಿನಂದು ಅನ್ನದಾನ ಮಾಡುತ್ತಿದ್ದಾರೆ ಯಶ್ ಅವರ ತಮಿಳು ಅಭಿಮಾನಿಗಳು.

  ಕೆಜಿಎಫ್ 2: ಪ್ರಧಾನಿ ಮೋದಿ ಬಳಿ ಯಶ್ ಅಭಿಮಾನಿಗಳ ವಿಶೇಷ ಮನವಿ

  ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಯಶ್ ಅಭಿಮಾನಿಗಳು ಯಶ್ ಹೆಸರಲ್ಲಿ ಪ್ರತಿ ತಿಂಗಳ 8 ನೇ ತಾರೀಖಿನಂದು ಅನ್ನದಾನ ಮಾಡುತ್ತಿದ್ದಾರೆ. ನಿನ್ನೆ (ಫೆಬ್ರವರಿ 08) ರಂದು ಅಭಿಮಾನಿಗಳು ಅನ್ನದಾನ ಮಾಡಿದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಟ್ವಿಟ್ಟರ್ ಖಾತೆಯಲ್ಲಿ ಹಲವಾರು ಚಿತ್ರಗಳು

  ಟ್ವಿಟ್ಟರ್ ಖಾತೆಯಲ್ಲಿ ಹಲವಾರು ಚಿತ್ರಗಳು

  ಯಶ್ ಅವರ ಚಿತ್ರಗಳೊಂದಿಗೆ ತಮ್ಮ ಚಿತ್ರಗಳ ಪೋಸ್ಟರ್, ಬ್ಯಾನರ್‌ಗಳನ್ನು ಹಲವು ಕಡೆ ಅಂಟಿಸಿರುವ ಚಿತ್ರಗಳನ್ನು ಸಹ ಈ ಅಭಿಮಾನಿ ಸಂಘ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

  ಸೂಪರ್ ಹಿಟ್ ಆಗಿರುವ ಟೀಸರ್

  ಸೂಪರ್ ಹಿಟ್ ಆಗಿರುವ ಟೀಸರ್

  ಯಶ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಕೆಜಿಎಫ್ 2 ಟೀಸರ್ ಬಿಡುಗಡೆ ಆಗಿದ್ದು, ಭಾರಿ ಸೂಪರ್ ಹಿಟ್ ಆಗಿದೆ. ಸಿನಿಮಾದ ಮೇಲೆ ನಿರೀಕ್ಷೆಯನ್ನು ಸಾವಿರ ಪಟ್ಟು ಹೆಚ್ಚು ಮಾಡಿದೆ ಟೀಸರ್.

  ಜುಲೈ 16 ಕ್ಕೆ ಸಿನಿಮಾ ಬಿಡುಗಡೆ

  ಜುಲೈ 16 ಕ್ಕೆ ಸಿನಿಮಾ ಬಿಡುಗಡೆ

  ಕೆಜಿಎಫ್ 2 ಇದೇ ಜುಲೈ 16 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವು ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಇತರ ಭಾಷೆಗಳ ಡಬ್ಬಿಂಗ್ ಹಾಗೂ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟ ಸಹ ಆಗಿವೆ.

  ಅಧೀರನಾಗಿ ಸಂಜಯ್ ದತ್

  ಅಧೀರನಾಗಿ ಸಂಜಯ್ ದತ್

  ಕೆಜಿಎಫ್ 2 ನಲ್ಲಿ ಅಧೀರನಾಗಿ ಸಂಜಯ್ ದತ್ ನಟಿಸಿರುವುದು ಸಿನಿಮಾದ ವಿಶೇಷ. ಕೆಜಿಎಫ್ 2 ನಲ್ಲಿ ಪ್ರಕಾಶ್ ರೈ, ರವೀನಾ ಟಂಡನ್ ಸೇರಿದಂತೆ ಇನ್ನೂ ಕೆಲವು ಹೊಸ ನಟರು ಇದ್ದಾರೆ. ಸಿನಿಮಾದಲ್ಲಿ ನಟಿ ಆಶಾ ಭಟ್ ನಾಯಕಿಯಾಗಿದ್ದು, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಣ ವಿಜಯ್ ಕಿರಗಂದೂರ್ ಅವರದ್ದು.

  English summary
  Yash fans in Tamil Nadu's Dharmapuri did Social work in the name of Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X