For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಜೋಡಿಯಾಗಿ ಕನ್ನಡಕ್ಕೆ ಸಮೀರಾ ರೆಡ್ಡಿ

  |

  ಬಾಲಿವುಡ್ ನಲ್ಲೂ ಮಿಂಚುತ್ತಿರುವ ದಕ್ಷಿಣ ಭಾರತದ ಸುಂದರಿ 'ಸಮೀರಾ ರೆಡ್ಡಿ', ಇದೀಗ ಕನ್ನಡ ಚಿತ್ರವೊಂದರಲ್ಲಿ ನಟಿಸಲಿರುವುದು ಪಕ್ಕಾ ಆಗಿದೆ. ಇಷ್ಟು ದಿನ ನಟಿಸುತ್ತೇನೆ, ನಟಿಸುವುದಿಲ್ಲ ಎಂದು ಉಲ್ಟಾಸೀದಾ ಮಾತನಾಡಿಕೊಂಡು ಬಂದಿದ್ದ ಸಮೀರಾ, ಇದೀಗ 'ವರದನಾಯಕ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ನಟಿಸಲಿರುವ ವಿಷಯ ಬಹಿರಂಗವಾಗಿದೆ. ಕೊನೆಗೂ, ಕನ್ನಡ ಪ್ರೇಕ್ಷಕರ 'ರಾ...ರಾ'ಕ್ಕೆ ಸಮೀರಾ 'ಅಸ್ತು' ಎಂದಿದ್ದಾರೆ.

  "ನನ್ನ ಅಮ್ಮ ಕರ್ನಾಟಕದವರು. ಹಾಗಾಗಿ ನಾನು ಅರ್ಧ ಕನ್ನಡಿಗಳು. ನನ್ನ ಅಮ್ಮ ಯಾವಾಗಲೂ ನೀನು ಕನ್ನಡ ಬಿಟ್ಟು ಉಳಿದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿದ್ದೀಯಾ, ಕನ್ನಡದಲ್ಲೂ ಅಭಿನಯಿಸು ಎಂದು ಹೇಳುತ್ತಿರುತ್ತಾರೆ. ಆದರೆ ಡೇಟ್ಸ್ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ" ಎಂದಿದ್ದರು. ಅದೀಗ ನಿಜವಾಗಲಿದೆ.

  'ವರದ ನಾಯಕ' ತೆಲುಗಿನ ರಿಮೇಕ್. ಶಂಕರೇಗೌಡ ನಿರ್ಮಾಣ ಹಾಗೂ ಅಯ್ಯಪ್ಪ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ನಾಯಕರಲ್ಲ, ಆದರೆ ನಾಯಕನ್ನೂ ಮೀರಿದ ಪ್ರಮುಖ ಪಾತ್ರ. ಅವರ ಜತೆ ಬಾಲಿವುಡ್ ಸುಂದರಿ ಸಮೀರಾ ರೆಡ್ಡಿ ಹೆಜ್ಜೆ ಹಾಕಲಿದ್ದಾರಂತೆ. ನಾಯಕ ಚಿರಂಜೀವಿ ಸರ್ಜಾ. ಅವರಿಗೆ ನಿಕಿಶಾ ಪಟೇಲ್ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿದಿದೆ. ಬಾಕಿ ಉಳಿದಿರುವುದು ಸುದೀಪ್ ಪಾಲಿನದ್ದು ಮಾತ್ರ.

  ಸಮೀರಾ ರೆಡ್ಡಿ ಬರುತ್ತಿದ್ದಂತೆ ಸುದೀಪ್ ಕೂಡ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಸುದ್ದಿಮೂಲಗಳ ಪ್ರಕಾರ ಮಾರ್ಚ್ 12ರಿಂದ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ಒಟ್ಟಿನಲ್ಲಿ ಸಮೀರಾ ಅಂದುಕೊಂಡಂತೆ ಕನ್ನಡಕ್ಕೆ ಬರಲಿದ್ದಾರೆ. ಆ ಮೂಲಕ ದಕ್ಷಿಣಭಾರತದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಅವರ ಅಭಿಮಾನಿಗಳು ಧನ್ಯತೆ ಅನುಭವಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actress Sameera Reddy acts in a Kannada movie. She told, her mother is from Karnataka. She already acted all other Southern languages except Kannada. Now she acts in Kannada movie Sudeep Satrer Varadanayaka, for her mother's wishes.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X