For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ಮತ್ತು ಮಹೇಶ್ ಬಾಬುಗೆ ಇಂದು ವಿಶೇಷವಾದ ದಿನ: ಭಾವುಕ ಸಂದೇಶ ರವಾನಿಸಿದ ಪ್ರಿನ್ಸ್

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಸ್ವೀಟಿ ಅನುಷ್ಕಾ ಶೆಟ್ಟಿಗೆ ಇಂದು ವಿಶೇಷವಾದ ದಿನ. ನಿಖರವಾಗಿ 10 ವರ್ಷಗಳ ಹಿಂದೆ ಮಹೇಶ್ ಬಾಬು ಮತ್ತು ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್ ಹಿಟ್ 'ಖಲೇಜಾ' ಸಿನಿಮಾ ರಿಲೀಸ್ ಆದ ದಿನವಿದು. ಅಕ್ಟೋಬರ್ 7, 2010ರಲ್ಲಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿತ್ತು. ಮಹೇಶ್ ಬಾಬು ಅಭಿಮಾನಿಗಳು ಈ ಸಿನಿಮಾ ನೋಡಿ ಹಬ್ಬ ಆಚರಣೆ ಮಾಡಿದ್ದರು.

  ಅನುಷ್ಕಾ ಶೆಟ್ಟಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರದ ಆಕ್ಷನ್ ಮತ್ತು ಹಾಸ್ಯ ದೃಶ್ಯಗಳು ತೆಲುಗು ಸಿನಿಮಾ ಪ್ರಿಯರ ಹೃದಯ ಗೆದ್ದಿತ್ತು. ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾವಿದು. ಈ ಸಿನಿಮಾಗೂ ಮೊದಲು 2005ರಲ್ಲಿ ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ 'ಅತಡು' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಮುಂದೆ ಓದಿ...

  ಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿಡ್ರಗ್ಸ್ ದಂಧೆಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ಇನ್ಸ್ಟಾಗ್ರಾಮ್ ಕಾಮೆಂಟ್ಸ್ ಲಿಮಿಟ್ ಮಾಡಿದ ಮಹೇಶ್ ಬಾಬು ಪತ್ನಿ

  'ಅತಡು' ಬಳಿಕ 'ಖಲೇಜಾ' ಸೂಪರ್ ಹಿಟ್

  'ಅತಡು' ಬಳಿಕ 'ಖಲೇಜಾ' ಸೂಪರ್ ಹಿಟ್

  ತ್ರಿವಿಕ್ರಮ್ ಮತ್ತು ಮಹೇಶ್ ಬಾಬು 'ಅತಡು' ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಆದ ಕಾರಣ 'ಖಲೇಜಾ' ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿತ್ತು. ಅದರಂತೆ ಸಿನಿಮಾ ಕೂಡ ಸೂಪರ್ ಹಿಟ್ ಆಗಿ ಹೊರಹೊಮ್ಮಿತು. ಮಹೇಶ್ ಬಾಬು ಮತ್ತು ಅನುಷ್ಕಾ ಯಶಸ್ವಿ ಸಿನಿ ಬದುಕಿಗೆ ಈ ಚಿತ್ರ ಮತ್ತೊಂದು ಗರಿಯಾಯಿತು. ಈ ಸಿನಿಮಾ ಮೂಲಕ ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ಅನುಷ್ಕಾ ಇಬ್ಬರು ಅಭಿಮಾನಿಗಳ ಮುಂದೆ ಬಂದಿದ್ದರು.

  ಮಹೇಶ್ ಬಾಬು ಭಾವುಕ ಸಂದೇಶ

  ಮಹೇಶ್ ಬಾಬು ಭಾವುಕ ಸಂದೇಶ

  'ಖಲೇಜಾ' ಸಿನಿಮಾದ 10 ವರ್ಷಗಳ ಸಂಭ್ರಮವನ್ನು ಸಿನಿಮಾತಂಡ ಆಚರಿಸುತ್ತಿದೆ. ಈ ಸಂತಸವನ್ನು ನಟ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಪ್ರಿನ್ಸ್ ಭಾವುಕ ಸಂದೇಶ ರವಾಸಿನಿದ್ದಾರೆ. ಚಿತ್ರದ ವಿಡಿಯೋ ಶೇರ್ ಮಾಡಿ, "ಖಲೇಜಾ ಸಿನಿಮಾ 10 ವರ್ಷ ಪೂರೈಸಿದೆ. ನಟನಾಗಿ ನನ್ನನ್ನು ಮರುಶೋಧಿಸಿದ ಸಿನಿಮಾವಿದು. ವಿಶೇಷವಾದದ್ದು ಉಳಿಯುತ್ತೆದೆ. ನನ್ನ ಸ್ನೇಹಿತ ಮತ್ತು ಅದ್ಭುತ ನಿರ್ದೇಶಕ ತ್ರಿವಿಕ್ರಮ್ ಗೆ ಧನ್ಯವಾದಗಳು. ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ. ಶೀಘ್ರದಲ್ಲೇ" ಎಂದು ಬರೆದುಕೊಂಡಿದ್ದಾರೆ.

  ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿ ಎಂಟ್ರಿಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿ ಎಂಟ್ರಿ

  ಮತ್ತೊಂದು ಸಿನಿಮಾದ ಸುಳಿವು ನೀಡಿದ ಮಹೇಶ್ ಬಾಬು

  ಮತ್ತೊಂದು ಸಿನಿಮಾದ ಸುಳಿವು ನೀಡಿದ ಮಹೇಶ್ ಬಾಬು

  ಈ ಮೂಲಕ ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಜೊತೆ ಸಿನಿಮಾ ಮಾಡುವ ಸುಳಿವನ್ನು ನೀಡಿದ್ದಾರೆ. ಸದ್ಯದಲ್ಲೇ ಇಬ್ಬರ ಕಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮೂಡಿಬರುವ ನಿರೀಕ್ಷೆ ಇದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ನಿರ್ದೇಶಕ ತ್ರಿವಿಕ್ರಮ್ ಇತ್ತೀಚಿಗೆ ತೆರೆಕಂಡ 'ಅಲಾ ವೈಕುಂಠಪುರಂಲೋ' ಸಿನಿಮಾ ಮೂಲಕ ದೊಡ್ಡ ಸಕ್ಸಸ್ ಕಂಡಿದ್ದಾರೆ. ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದಾರೆ.

  'ಖಲೇಜಾ' ಸಿನಿಮಾದ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?

  'ಖಲೇಜಾ' ಸಿನಿಮಾದ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?

  'ಖಲೇಜಾ' ಸಿನಿಮಾದ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. 10 ವರ್ಷದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಸಾಕಷ್ಟು ನೆನಪುಗಳಿವೆ. ಮಹೇಶ್ ಬಾಬು, ತ್ರಿವಿಕ್ರಮ್ ಅವರಿಗೆ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ನಟ ಪ್ರಕಾಶ್ ರಾಜ್, ಅಮಿತ್ ತಿವಾರಿ, ಶಫಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

  ಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿ

  ಕಣ್ಣಿಲ್ಲದೆ ಅರಳಿತು ರಶ್ಮಿಕಾ ಸುಂದರ ಚಿತ್ರ | Filmibeat Kannada
  'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಮಹೇಶ್ ಬಾಬು

  'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಮಹೇಶ್ ಬಾಬು

  ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಸರಿಲೇರು ನೀಕೇವ್ವರು' ಸಿನಿಮಾದ ಬಳಿಕ ಮಹೇಶ್ ಅಭಿನಯಿಸುತ್ತಿರುವ ಸಿನಿಮಾವಿದು. ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ ಸಿನಿಮಾತಂಡ. ಇನ್ನೂ ನಟಿ ಅನುಷ್ಕಾ ಇತ್ತೀಚಿಗೆ 'ನಿಶಬ್ದಂ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಜಯ್ ದೇವರಕೊಂಡ ಮತ್ತು ಅನುಷ್ಕಾ ಮುಂದಿನ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Mahesh Babu and Anushka Shetty starrer Khaleja movie completes 10 years. Mahesh Babu hints at reunion with director Trivikram Srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X