For Quick Alerts
  ALLOW NOTIFICATIONS  
  For Daily Alerts

  ಅಬ್ಬಾ..! RRR ಸಿನಿಮಾ ಸೆಟ್ ಗೆ ಇಷ್ಟು ಕೋಟಿ ಖರ್ಚು ಮಾಡುತ್ತಿದ್ದಾರಾ?

  By ಫಿಲ್ಮ್ ಡೆಸ್ಕ್
  |

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾಗಳಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಲಾಕ್ ಡೌನ್ ಕಾರಣ ಚಿತ್ರೀಕರಣ ಸ್ಥಿಗಿತವಾಗಿದೆ.

  ಲಾಕ್ ಡೌನ್ ನಲ್ಲಿಯೂ ಚಿತ್ರದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರತಂಡ ಚಿತ್ರದ ಸೆಟ್ ಗೆ ಖರ್ಚು ಮಾಡುತ್ತಿರುವ ಹಣ ಕೇಳಿ ಅಚ್ಚರಿ ಪಡುತ್ತಿದ್ದಾರೆ. ಅಂದ್ಹಾಗೆ ರಾಜಮೌಳಿ ಸಿನಿಮಾ ಅಂದ್ಮೇಲೆ ಅದ್ದೂರಿ ಸೆಟ್, ದೃಶ್ಯ ವೈಭವ, ಗ್ರಾಫಿಕ್ಸ್ ನೋಡುಗರ ಕಣ್ಣು ಕುಕ್ಕುತ್ತೆ. ಇದಕ್ಕೆ ಸಾಕ್ಷಿ ಬಾಹುಬಲಿ ಸಿನಿಮಾ.ಸಿನಿಮಾ ಆದರೆ ಆರ್ ಆರ್ ಆರ್ ಸೆಟ್ ಬಾಹುಬಲಿ ಸಿನಿಮಾವನ್ನು ಮೀರಿಸುವಂತಿದೆಯಂತೆ. ಮುಂದೆ ಓದಿ...

  ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ ರಾಜಮೌಳಿಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ ರಾಜಮೌಳಿ

  ಆರ್ ಆರ್ ಆರ್ ಸಿನಿಮಾ ಸೆಟ್ ಗೆ 18 ಕೋಟಿ?

  ಆರ್ ಆರ್ ಆರ್ ಸಿನಿಮಾ ಸೆಟ್ ಗೆ 18 ಕೋಟಿ?

  ಆರ್ ಆರ್ ಆರ್ ಸಿನಿಮಾ ಸೆಟ್ ಗಾಗಿ ರಾಜಮೌಳಿ ಮತ್ತು ತಂಡ ಬರೋಬ್ಬರಿ 18 ಕೋಟಿ ಖರ್ಚು ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸೆಟ್ ಗಳು ಸಹ ಅಷ್ಟೆ ಅದ್ದೂರಿಯಾಗಿರಲಿದೆ. ಲಾಕ್ ಡೌನ್ ಚಿತ್ರೀಕರಣ ಸ್ಥಗಿತವಾಗಿದ್ದರು ಸಹ ಸಿನಿಮಾತಂಡ ಚಿತ್ರದ ಉಳಿದೆಲ್ಲ ಕೆಲಸಗಳನ್ನು ಮಾಡುತ್ತಿದೆ.

  ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರೀಕರಣ

  ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರೀಕರಣ

  18 ಕೋಟಿಯಲ್ಲಿ ಒಂದು ಸುಂದರವಾದ ಹಳ್ಳಿಯನ್ನು ನಿರ್ಮಾಣ ಮಾಡಿದ್ದಾರೆ. ಹೌದು, ಚಿತ್ರಕ್ಕಾಗಿ ಹಳ್ಳಿಯ ಸೆಟ್ ತಯಾರಾಗುತ್ತಿದೆ. ಹೈದರಾಬಾದ್ ನ ಗಾಂಧಿಪೇಟ್ ನಲ್ಲಿ ಹಳ್ಳಿಯ ಸೆಟ್ ನಿರ್ಮಾಣವಾಗಿದೆ. ಚಿತ್ರೀಕರಣಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿರುವ ಚಿತ್ರತಂಡ ಲಾಕ್ ಡೌನ್ ಮುಗಿದು ಅನುಮತಿ ಸಿಗುತ್ತಿದ್ದಂತೆ ಶೂಟಿಂಗ್ ಪ್ರಾರಂಭಿಸಲಿದೆ.

  'ಈ' ಕಾರಣಕ್ಕಾಗಿ ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡುವುದಿಲ್ಲವಂತೆ ರಾಜಮೌಳಿ'ಈ' ಕಾರಣಕ್ಕಾಗಿ ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡುವುದಿಲ್ಲವಂತೆ ರಾಜಮೌಳಿ

  ಮೂರನೆ ಬಾರಿ ರಿಲೀಸ್ ಡೇಟ್ ಮುಂದಕ್ಕೆ

  ಮೂರನೆ ಬಾರಿ ರಿಲೀಸ್ ಡೇಟ್ ಮುಂದಕ್ಕೆ

  'ಆರ್.ಆರ್.ಆರ್' ಚಿತ್ರದ ಬಿಡುಗಡೆ ಮತ್ತೆ ಪೋಸ್ಟ್ ಪೋನ್ ಆಗಿದೆ ಎಂದು ಹೇಳಲಾಗುತ್ತಿದೆ. ಕೊರೊನಾ ಹಾವಳಿಯ ಪರಿಣಾಮ ಚಿತ್ರೀಕರಕಣ ತಡವಾಗಿದ್ದು, ರಿಲೀಸ್ ಸಹ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಜುಲೈ 30 ರಿಂದ ಮುಂದಿನ ವರ್ಷ ಜನವರಿಗೆ ಶಿಫ್ಟ್ ಆಗಿದ್ದ 'ಆರ್ ಆರ್ ಆರ್' ರಿಲೀಸ್ ಈಗ ಮತ್ತೆ ಮೂರನೆ ಬಾರಿ ಮುಂದಕ್ಕೆ ಹೋಗುತ್ತಿದೆ.

  ಮುಂದಿನ ಸಿನಿಮಾ ಸೂಪರ್ ಸ್ಟಾರ್ ಜತೆ: ಖಚಿತಪಡಿಸಿದ ನಿರ್ದೇಶಕ ರಾಜಮೌಳಿಮುಂದಿನ ಸಿನಿಮಾ ಸೂಪರ್ ಸ್ಟಾರ್ ಜತೆ: ಖಚಿತಪಡಿಸಿದ ನಿರ್ದೇಶಕ ರಾಜಮೌಳಿ

  ಜನವರಿ 8ಕ್ಕೆ ರಿಲೀಸ್ ಆಗಬೇಕಿತ್ತು

  ಜನವರಿ 8ಕ್ಕೆ ರಿಲೀಸ್ ಆಗಬೇಕಿತ್ತು

  ಇತ್ತೀಚಿಗೆ ಜುಲೈಯಿಂದ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದ್ದ ಸಿನಿಮಾತಂಡ ಹೊಸ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿತ್ತು. ಮುಂದಿನ ವರ್ಷ 2021 ಜನವರಿ 8ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದರು.

  English summary
  18 crores has been spent on the village set of RRR Cinema in Hyderabad Gandipet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X