For Quick Alerts
  ALLOW NOTIFICATIONS  
  For Daily Alerts

  ಹಿರಿಯರಿಗೇ ಮಾದರಿಯಾದ ತೆಲುಗು ಸ್ಟಾರ್ ಜೋಡಿ

  |

  ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿಆರ್, ಆಶ್ಚರ್ಯವೆಂಬಂತೆ ಸ್ನೇಹಿತರಾಗಿದ್ದಾರೆ. ಇತ್ತೀಚಿಗೆ ನಡೆದ ಜೂ. ಎನ್ ಟಿಆರ್ ಅವರ 'ಬಾದ್ ಶಾ' ಚಿತ್ರದ ಮುಹೂರ್ತದ ವೇಳೆ ಬಂದಿದ್ದ ರಾಮ್ ಚರಣ್ ತೇಜ, ರಾಕಿ ನಟನಿಗೆ ಹಸ್ತಲಾಘವ ಮಾಡಿ ಶುಭ ಹಾರೈಸಿದರು. ಈ ಅಪರೂಪದ ಕ್ಷಣಕ್ಕೆ ಸೇರಿದ್ದ ಅಪಾರ ಜನಸ್ತೋಮ ಸಾಕ್ಷಿಯಾಯಿತು.

  ಈ ಇಬ್ಬರು ನಟರ ಕುಟುಂಬದಲ್ಲಿ ಬಿರುಕು ತುಂಬಾ ವರ್ಷಗಳಿಂದ ಇತ್ತು. ಮೊನ್ನೆ ಮೊನ್ನೆ ತೆಲುಗು ಮೆಗಾ ಸ್ಟಾರ್ ಚಿರಂಜೀವಿ, ಜೂ. ಎನ್ ಟಿಆರ್ ಚಿಕ್ಕಪ್ಪ ಬಾಲಕೃಷ್ಣ ಕುರಿತು ಸಾವರ್ಜನಿಕ ಸಮಾರಂಭದ ವೇದಿಕೆಯೊಂದರಲ್ಲಿ ಲಘುವಾಗಿ ಮಾತನಾಡಿದ್ದರು. ಅವರು ಚಿಕ್ಕ ಮಗು ಎಂದು ಲೇವಡಿ ಮಾಡಿದ್ದರು. ನಂತರ ಅವರ ಇನ್ನೊಂದು ಮುಖವನ್ನು ತಾವು ತೋರಿಸುವುದಾಗಿ ಕಾಲೆಳೆದಿದ್ದರು.

  ಆದರೆ ಅದೇ ಕುಟುಂಬಗಳ ಬೆಳೆಯುತ್ತಿರುವ ಕುಡಿಗಳಾದ ಈ ಇಬ್ಬರು ನಟರು, ಅವೆಲ್ಲವನ್ನೂ ಪಕ್ಕಕ್ಕೆ ಎಸೆದು ವೃತ್ತಿಧರ್ಮ ಮೆರೆದಿದ್ದಾರೆ. ವೃತ್ತಿಗೂ, ವೈಯಕ್ತಿಕಕ್ಕೂ ಇರುವ ನಡುವಿನ ಅಂತರವನ್ನು ಹಾಗೂ ಸಾಧಿಸಬೇಕಾದದ್ದು ಮಿತ್ರುತ್ವವನ್ನು ಹೊರತೂ ಶತ್ರುತ್ವವನ್ನಲ್ಲ ಎಂಬುದನ್ನು ಹಿರಿಯರಿಗಿಂತ ಬೇಗ ಅರ್ಥಮಾಡಿಕೊಂಡು ಮಾದರಿ ಎನಿಸಿದ್ದಾರೆ. ಈ ಬಾಂಡ್ ಇನ್ನಷ್ಟು ಗಟ್ಟಿಯಾಗಲಿ ಎಂಬುದು ಸಿನಿಮಾಪ್ರಿಯರ ಹಾರೈಕೆ. (ಏಜೆನ್ಸೀಸ್)

  English summary
  Ram Charan Teja and Junior NTR surprised the onlookers at the muhrat of the latters upcoming film Baadshah. Well, putting their family rivalries aside.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X