For Quick Alerts
  ALLOW NOTIFICATIONS  
  For Daily Alerts

  ತೆಲುಗು-ತಮಿಳಿನಲ್ಲಿ ರೀಮೇಕ್ ಆಗಲಿದೆ ಕನ್ನಡದ ಹಿಟ್ ಚಿತ್ರ 'ಆ ಕರಾಳ ರಾತ್ರಿ'

  |

  ಕನ್ನಡದ ಹಿಟ್ ಚಿತ್ರ ಆ ಕರಾಳ ರಾತ್ರಿ ಪರಭಾಷೆಗೆ ಕಾಲಿಡುತ್ತಿದೆ. 2018ರಲ್ಲಿ ಬಿಡುಗಡೆಯಾದ ಈ ಚಿತ್ರ ವಿಮರ್ಶಾತ್ಮಕವಾಗಿ ಪ್ರಶಂಸೆ ಪಡೆದುಕೊಂಡಿತ್ತು. ಈ ಚಿತ್ರಕ್ಕೆ 'ಅತ್ಯುತ್ತಮ ಸಿನಿಮಾ' ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿತ್ತು.

  ವೈರಲ್ ಆಯ್ತು Prashanth Sambaragi ಪಾರ್ಟಿ ಫೋಟೋ | Oneindia Kannada

  ನಿರ್ದೇಶಕ ದಯಾಳ್ ಪದ್ಮನಾಭನ್‌ಗೂ ಅತ್ಯುತ್ತಮ ನಿರ್ದೇಶಕ ರಾಜ್ಯ ಪ್ರಶಸ್ತಿ ಲಭಿಸಿತ್ತು. ಅನುಪಮಾ ಗೌಡ, ಕಾರ್ತಿಕ್ ಜಯರಾಂ, ವೀಣಾ ಸುಂದರ್, ರಂಗಾಯಣ ರಘು, ನವೀನ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ, ಈ ಚಿತ್ರ ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗುತ್ತಿದೆ. ಮುಂದೆ ಓದಿ...

  'ಆ ಕರಾಳ ರಾತ್ರಿ' ವಿಮರ್ಶೆ: ಚಿಕ್ಕ ಹಾಗೂ ಚೊಕ್ಕ ಚಿತ್ರ

  ಅಲ್ಲು ಅರವಿಂದ್ ನಿರ್ಮಾಣ

  ಅಲ್ಲು ಅರವಿಂದ್ ನಿರ್ಮಾಣ

  ಟಾಲಿವುಡ್ ಇಂಡಸ್ಟ್ರಿಯ ಖ್ಯಾತ ಹಾಗೂ ಯಶಸ್ವಿ ನಿರ್ಮಾಪಕ ಅಲ್ಲು ಅರವಿಂದ್ ತೆಲುಗಿನಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ದಯಾಳ್ ಪದ್ಮನಾಭನ್ ಅವರೇ ಖುದ್ದು ತೆಲುಗಿನಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಪಾತ್ರಗಳು ಬದಲಾಗಲಿದೆ

  ಪಾತ್ರಗಳು ಬದಲಾಗಲಿದೆ

  ದಯಾಳ್ ನಿರ್ದೇಶನದ ಜೊತೆಗೆ ನವೀನ್ ಕೃಷ್ಣ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನುಪಮಾ ಗೌಡ ಅವರ ತಾಯಿ ಪಾತ್ರ ನಿಭಾಯಿಸಿದ್ದ ವೀಣಾ ಸುಂದರ್ ಸಹ ತೆಲುಗಿನಲ್ಲಿ ಮುಂದುವರಿಯಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ತೆಲುಗೂ ಚಿತ್ರದಲ್ಲೂ ಇರಲಿದೆ. ಉಳಿದಂತೆ ಪಾತ್ರಗಳು ಬದಲಾಗಲಿದೆ.

  ಸ್ಟಾರ್ ನಟಿಗೆ ಆಫರ್!

  ಸ್ಟಾರ್ ನಟಿಗೆ ಆಫರ್!

  ಅನುಪಮಾ ಗೌಡ ನಟಿಸಿದ್ದ ಪಾತ್ರಕ್ಕಾಗಿ ತೆಲುಗಿನ ಸ್ಟಾರ್ ನಟಿಯರಿಗೆ ಆಫರ್ ಮಾಡಲಾಗಿದೆಯಂತೆ. ಶ್ರುತಿ ಹಾಸನ್, ತ್ರಿಷಾ ಕೃಷ್ಣನ್ ಅಥವಾ ಅಮಲಾ ಪೌಲ್ ಅವರನ್ನು ಕರೆತರುವ ಚಿಂತನೆ ಇದೆಯಂತೆ. ಆದರೆ, ಜೆಕೆ ಪಾತ್ರದ ಬಗ್ಗೆ ಮಾಹಿತಿ ಇಲ್ಲ.

  ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಶುರು

  ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಶುರು

  ತೆಲುಗು ವರ್ಷನ್ ಸಿನಿಮಾದ ಚಿತ್ರೀಕರಣ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಲಿದೆ. ತಮಿಳಿನಲ್ಲೂ ದಯಾಳ್ ಪದ್ಮನಾಭನ್ ಅವರೇ ನಿರ್ದೇಶನ ಮಾಡಲಿದ್ದು, ರಮೇಶ್ ಪಿಳ್ಳೈ ಸಿನಿಮಾ ನಿರ್ಮಿಸಲಿದ್ದಾರೆ. ತೆಲುಗು ಬಳಿಕ ತಮಿಳಿನಲ್ಲಿ ಸಿನಿಮಾ ಆರಂಭವಾಗಲಿದೆ ಎಂದು ಹೇಳಲಾಗಿದೆ.

  English summary
  Aa Karala Ratri to be remade in Telugu and Tamil. dayal padmanabhan to direct both. Allu Aravind behind Telugu project. Shooting starts in September.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X