For Quick Alerts
  ALLOW NOTIFICATIONS  
  For Daily Alerts

  RRR ಚಿತ್ರದ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯ ಗೂಗಲ್ ಗೆ ಗೊತ್ತು.!

  |

  ತೆಲುಗು ಸಿನಿ ಅಂಗಳದ ಬಹು ಬೇಡಿಕೆಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.?! 'ಸ್ಟೂಡೆಂಟ್ ನಂ.1', 'ಸಿಂಹಾದ್ರಿ', 'ಸೈ', 'ಛತ್ರಪತಿ', 'ವಿಕ್ರಮಾರ್ಕುಡು', 'ಯಮದೊಂಗ', 'ಮಗಧೀರ', 'ಈಗ', 'ಬಾಹುಬಲಿ: ದಿ ಬಿಗಿನ್ನಿಂಗ್', 'ಬಾಹುಬಲಿ 2: ದಿ ಕನ್ ಕ್ಲೂಶನ್' ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಸಕ್ಸಸ್ ಫುಲ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ.

  'ಬಾಹುಬಲಿ' ಸರಣಿಯ ಯಶಸ್ಸಿನ ಬಳಿಕ ರಾಜಮೌಳಿ 'ಆರ್.ಆರ್.ಆರ್' ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕುರಿತ ಚಿತ್ರಕಥೆಯನ್ನಿಟ್ಟುಕೊಂಡು 'ಆರ್.ಆರ್.ಆರ್' ಚಿತ್ರಕ್ಕೆ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ ವಿಷಯ ಸಿನಿ ಪ್ರಿಯರೆಲ್ಲರಿಗೂ ಗೊತ್ತಿರೋದೇ.

  ಆದ್ರೆ, 'ಆರ್.ಆರ್.ಆರ್' ಚಿತ್ರದ ಬಗ್ಗೆ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಗೂಗಲ್ ಗೆ ಗೊತ್ತಿದೆ. ಏನದು ಅಂತೀರಾ.? ನೀವೇ ನೋಡಿ...

  ಆರ್.ಆರ್.ಆರ್ ಚಿತ್ರಕ್ಕೆ ಇಬ್ಬರು ನಿರ್ದೇಶಕರು.?

  ಆರ್.ಆರ್.ಆರ್ ಚಿತ್ರಕ್ಕೆ ಇಬ್ಬರು ನಿರ್ದೇಶಕರು.?

  ತೆಲುಗಿನಲ್ಲಿ ತಯಾರಾಗುತ್ತಿರುವ 'ಆರ್.ಆರ್.ಆರ್' ಚಿತ್ರಕ್ಕೆ ಇಬ್ಬರು ನಿರ್ದೇಶಕರಿದ್ದಾರಂತೆ. ಎಸ್.ಎಸ್.ರಾಜಮೌಳಿ ಜೊತೆಗೆ ಸಂಜಯ್ ಪಾಟಿಲ್ ಎಂಬುವರು ಕೂಡ 'ಆರ್.ಆರ್.ಆರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಹಾಗಂತ ನಾವು ಹೇಳುತ್ತಿಲ್ಲ. ಬದಲಾಗಿ ಗೂಗಲ್ ಇಡೀ ಜಗತ್ತಿಗೆ ಸಾರುತ್ತಿದೆ.!

  ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಜಮೌಳಿ.!ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಜಮೌಳಿ.!

  ಗೂಗಲ್ ನಲ್ಲಿ ಚೆಕ್ ಮಾಡಿದರೆ...

  ಗೂಗಲ್ ನಲ್ಲಿ ಚೆಕ್ ಮಾಡಿದರೆ...

  'ಆರ್.ಆರ್.ಆರ್' ನಿರ್ದೇಶಕ ಅಂತ ಗೂಗಲ್ ನಲ್ಲಿ ಟೈಪ್ ಮಾಡಿದರೆ, ಎಸ್.ಎಸ್.ರಾಜಮೌಳಿ ಹೆಸರು ಮತ್ತು ಫೋಟೋ ಕಾಣುತ್ತದೆ. ಜೊತೆಗೆ ಸಂಜಯ್ ಪಾಟಿಲ್ ಹೆಸರನ್ನೂ ಗೂಗಲ್ ತೋರಿಸುತ್ತದೆ. ಆದ್ರೆ, ಸಂಜಯ್ ಪಾಟಿಲ್ ಫೋಟೋ ಮತ್ತು ಹಿನ್ನಲೆ ಕುರಿತಾದ ಮಾಹಿತಿ ಗೂಗಲ್ ನಲ್ಲಿ ಲಭ್ಯವಿಲ್ಲ.

  RRR: ನಿಮ್ಮ ಊಹೆಗೂ ಮೀರಿದೆ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್.!RRR: ನಿಮ್ಮ ಊಹೆಗೂ ಮೀರಿದೆ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್.!

  ನಿರ್ಮಾಪಕರ ವಿಷಯದಲ್ಲೂ ಅಷ್ಟೇ.!

  ನಿರ್ಮಾಪಕರ ವಿಷಯದಲ್ಲೂ ಅಷ್ಟೇ.!

  ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ 'ಆರ್.ಆರ್.ಆರ್' ಚಿತ್ರಕ್ಕೆ ಡಿ.ವಿ.ವಿ.ದಾನಯ್ಯ ಬಂಡವಾಳ ಹಾಕುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ, ಗೂಗಲ್ ತೋರಿಸುತ್ತಿರುವ ಪ್ರಕಾರ, 'ಆರ್.ಆರ್.ಆರ್' ಚಿತ್ರಕ್ಕೆ ಡಿ.ವಿ.ವಿ.ದಾನಯ್ಯ ಜೊತೆಗೆ Prasanna Deochake ಮತ್ತು Ranjeet Satre ಕೂಡ ನಿರ್ಮಾಪಕರಂತೆ. ಆದ್ರೆ, ಇವರಿಬ್ಬರು ಯಾರು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.!

  RRR ಚಿತ್ರಕ್ಕಾಗಿ ಅಜಯ್ ದೇವ್ಗನ್ ಸಂಭಾವನೆ ಬಗ್ಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡ್ತೀರಾ.!RRR ಚಿತ್ರಕ್ಕಾಗಿ ಅಜಯ್ ದೇವ್ಗನ್ ಸಂಭಾವನೆ ಬಗ್ಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡ್ತೀರಾ.!

  ಏಕ್ದಂ ಟ್ರೆಂಡಿಂಗ್ ಆದ ಸಂಜಯ್ ಪಾಟಿಲ್.!

  ಏಕ್ದಂ ಟ್ರೆಂಡಿಂಗ್ ಆದ ಸಂಜಯ್ ಪಾಟಿಲ್.!

  ಗೂಗಲ್ ಮಾಡಿರುವ ಎಡವಟ್ಟಿನಿಂದಾಗಿ, ಗೊತ್ತು ಪರಿಚಯವೇ ಇಲ್ಲದ ಸಂಜಯ್ ಪಾಟಿಲ್ ಏಕ್ದಂ ಟ್ರೆಂಡಿಂಗ್ ಆಗಿದ್ದಾರೆ. ''ಯಾರು ಈ ಸಂಜಯ್ ಪಾಟಿಲ್.?'' ಅಂತ ಎಲ್ಲರೂ ಗೂಗಲ್ ನಲ್ಲಿ ಹುಡುಕಾಡುತ್ತಿದ್ದಾರೆ.

  ಇದೇ ಮೊದಲೇನಲ್ಲ.!

  ಇದೇ ಮೊದಲೇನಲ್ಲ.!

  ಅಸಲಿಗೆ, ರಾಜಮೌಳಿ ಜೊತೆಗೆ ಸಂಜಯ್ ಪಾಟಿಲ್ 'ಆರ್.ಆರ್.ಆರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿಲ್ಲ. ಹಾಗೇ, ಚಿತ್ರತಂಡದ ಅಧಿಕೃತ ಮಾಹಿತಿ ಪ್ರಕಾರ, 'ಆರ್.ಆರ್.ಆರ್' ಚಿತ್ರಕ್ಕೆ ಡಿ.ವಿ.ವಿ.ದಾನಯ್ಯ ಮಾತ್ರ ನಿರ್ಮಾಪಕ. ಹೀಗಿರುವಾಗ, ಸುಮ್ಮನೆ ಸಿನಿ ಪ್ರಿಯರ ತಲೆಗೆ ಗೂಗಲ್ ಹುಳ ಬಿಟ್ಟಿದೆ. ಗೂಗಲ್ ನಿಂದಾದ ಎಡವಟ್ಟಿಗೆ 'ಆರ್.ಆರ್.ಆರ್' ನಿರ್ದೇಶಕನ ಬಗ್ಗೆ ಪ್ರಶ್ನೆ ಎದ್ದಿದೆ. ಅಷ್ಟಕ್ಕೂ, ಗೂಗಲ್ ನಿಂದ ಈ ತರಹ ಎಡವಟ್ಟು ಆಗಿರುವುದು ಇದೇ ಮೊದಲೇನಲ್ಲ. ಸರ್ಚ್ ಎಂಜಿನ್ ನಲ್ಲಿ ಇಂತಹ ತಪ್ಪುಗಳು ಆಗಾಗ ಕಾಣಿಸುತ್ತಲೇ ಇರುತ್ತದೆ.

  ಶೂಟಿಂಗ್ ಹಂತದಲ್ಲಿ ಇರುವ ಚಿತ್ರ.!

  ಶೂಟಿಂಗ್ ಹಂತದಲ್ಲಿ ಇರುವ ಚಿತ್ರ.!

  ಅಂದ್ಹಾಗೆ, 'ಆರ್.ಆರ್.ಆರ್' ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲೇ ಇದೆ. ಜೂ.ಎನ್.ಟಿ.ಆರ್, ರಾಮ್ ಚರಣ್ ತೇಜಾ, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರ ಅಭಿನಯ ಇರುವ 'ಆರ್.ಆರ್.ಆರ್' ಚಿತ್ರ ಮುಂದಿನ ವರ್ಷದ ಜನವರಿಯಲ್ಲಿ ತೆರೆಗೆ ಬರಲಿದೆ.

  English summary
  According to Google Telugu Movie RRR is directed by Rajamouli and Sanjay Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X