For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ಜೊತೆ ನಟ ನಾಗಾರ್ಜುನ್ ಡೇಟಿಂಗ್ ವದಂತಿ: ಸ್ಟಾರ್ ನಟ ಹೇಳಿದ್ದೇನು?

  |

  ಟಾಲಿವುಡ್ ನ ಸ್ಟಾರ್ ನಟ, ಅಕ್ಕಿನೇನಿ ನಾಗೇಶ್ವರ್ ರಾವ್ ಪುತ್ರ ಅಕ್ಕಿನೇನಿ ನಾಗಾರ್ಜುನ್ 61ನೇ ವಯಸ್ಸಿನಲ್ಲಿಯೂ ಸ್ಟಾರ್ ನಟನಾಗಿ ಮೆರೆಯುತ್ತಿದ್ದಾರೆ. ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿಮಾರಂಗದಲ್ಲಿ ಲಿಂಕ್ ಅಪ್, ಲವ್, ಬ್ರೇಕ್ ಎನ್ನುವ ಗಾಸಿಪ್ ಗಳು ಸರ್ವೇಸಾಮಾನ್ಯ.

  ಈ ವದಂತಿಗಳಿಂದ ನಾಗಾರ್ಜುನ್ ಕೂಡ ಹೊರತಾಗಿಲ್ಲ. ಒಂದು ಕಾಲದಲ್ಲಿ ನಾಗಾರ್ಜುನ್ ಬಗ್ಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡುತ್ತಿತ್ತು. ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ಸುದ್ದಿ ಅಂದರೆ ನಾಗಾರ್ಜುನ್ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ. ಮುಂದೆ ಓದಿ...

  ತೆಲುಗು ಬಿಗ್‌ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರತೆಲುಗು ಬಿಗ್‌ಬಾಸ್-4 ಆರಂಭ: ಇಲ್ಲಿದೆ ಸ್ಪರ್ಧಿಗಳ ವಿವರ

  3 ನಟಿಯರ ಜೊತೆ ನಾಗಾರ್ಜುನ್ ಹೆಸರು ಲಿಂಕ್ ಅಪ್

  3 ನಟಿಯರ ಜೊತೆ ನಾಗಾರ್ಜುನ್ ಹೆಸರು ಲಿಂಕ್ ಅಪ್

  ಒಂದು ಕಾಲದಲ್ಲಿ ನಾಗಾರ್ಜುನ್ ಹೆಸರು ಖ್ಯಾತ ನಟಿಯರ ಜೊತೆ ಕೇಳಿಬರುತ್ತಿತ್ತು. ಚಾರ್ಮಿ ಕೌರ್, ಟಬು ಮತ್ತು ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಡೇಟಿಂಗ್ ವದಂತಿ ಬಗ್ಗೆ ನಟ ನಾಗಾರ್ಜುನ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದರು.

  ಚಾರ್ಮಿ ಕೌರ್ ಬಗ್ಗೆ ನಾಗಾರ್ಜುನ್ ಹೇಳಿದ್ದೇನು?

  ಚಾರ್ಮಿ ಕೌರ್ ಬಗ್ಗೆ ನಾಗಾರ್ಜುನ್ ಹೇಳಿದ್ದೇನು?

  2017ರಲ್ಲಿ ನಾಗಾರ್ಜುನ್ ಸಂದರ್ಶನವೊಂದರಲ್ಲಿ ಮಾತನಾಡಿ, "ನಾನು ಈ ಸುದ್ದಿ ತುಂಬಾ ನಕ್ಕಿದ್ದೇನೆ. ಚಾರ್ಮಿ ಅವಳು ತುಂಬಾ ಚಿಕ್ಕವಳು. ಮೂರು ನಟಿಯರ ಜೊತೆ ನನ್ನ ಹೆಸರು ಕೇಳಿ ಬರುತ್ತಿದೆ. ಚಾರ್ಮಿ, ಪೂನಮ್ ಕೌರ್ ಮತ್ತು ಅನುಷ್ಕಾ ಶೆಟ್ಟಿ. ಇವರೆಲ್ಲರೂ ಪ್ರಾರಂಭದಲ್ಲಿ ನನ್ನ ಜೊತೆ ಸಿನಿಮಾ ಮಾಡಿದವರು. ಎಂದು ಹೇಳಿದ್ದಾರೆ.

  ನನ್ನ ಜೀವನದಲ್ಲಿ ಈ 2 ದಿನಗಳನ್ನು ಮರೆಯಲು ಸಾಧ್ಯವಿಲ್ಲ: ನಟ ನಾಗಾರ್ಜುನನನ್ನ ಜೀವನದಲ್ಲಿ ಈ 2 ದಿನಗಳನ್ನು ಮರೆಯಲು ಸಾಧ್ಯವಿಲ್ಲ: ನಟ ನಾಗಾರ್ಜುನ

  ಅನುಷ್ಕಾ ನಮ್ಮ ಕುಟುಂಬದ ಒಂದು ಭಾಗವಾಗಿದ್ದಾರೆ

  ಅನುಷ್ಕಾ ನಮ್ಮ ಕುಟುಂಬದ ಒಂದು ಭಾಗವಾಗಿದ್ದಾರೆ

  ಅನುಷ್ಕಾ ಶೆಟ್ಟಿ ಬಗ್ಗೆ ಮಾತನಾಡಿದ ನಾಗಾರ್ಜುನ್, ಅನುಷ್ಕಾ ಶೆಟ್ಟಿ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರು. ನಮ್ಮ ಕುಟುಂಬದ ಭಾಗವಾಗಿದ್ದಾರೆ. ನನ್ನ ಪೋಷಕರು ಅವಳನ್ನು ತುಂಬಾ ಇಷ್ಟ ಪಡುತ್ತಾರೆ. ಅವಳು ತುಂಬಾ ಒಳ್ಳೆಯ ಹುಡುಗಿ. ಎಂದಿದ್ದಾರೆ. ಚಾರ್ಮಿ ಕೌರ್ ನನ್ನನ್ನು 'ಮನಿ' ಎಂದು ಕರೆಯುತ್ತಾರೆ. ಯಾಕೆಂದರೆ ಅವಳು ಪಡೆದ ಮೊದಲ ದೊಡ್ಡ ಸಂಭಾವನೆಯನ್ನು ನಾನು ನೀಡಿದ್ದೇನೆ ಎಂದಿದ್ದಾರೆ.

  ಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆಸೊಸೆ ಸಮಂತಾಗೆ ಮಾವ ನಾಗಾರ್ಜುನ ನೀಡಿದ ಉಡುಗೊರೆ ಇದೆ

  ತೀರಾ ಅಸಮಾಧಾನವುಂಟು ಮಾಡಿದ ಸಂಗತಿ ಇದು

  ತೀರಾ ಅಸಮಾಧಾನವುಂಟು ಮಾಡಿದ ಸಂಗತಿ ಇದು

  ಇದ್ಯಾವುದಕ್ಕು ಹೆಚ್ಚು ತಲೆಕೆಡಿಸಿಕೊಳ್ಳದ ನಾಗಾರ್ಜುನ್, ಅನುಷ್ಕಾ ಶೆಟ್ಟಿ ವಿಚಾರದಲ್ಲಿ ಹರಿದಾಡಿದ್ದ ವದಂತಿ ಬಗ್ಗೆ ತುಂಬಾ ನೋವುತಂದಿತ್ತಂತೆ. ಅನುಷ್ಕಾ ಮತ್ತು ನನ್ನ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಾರೆ. ನಂತರ ಅನುಷ್ಕಾ ಮತ್ತು ನನ್ನ ಮಗನ ಬಗ್ಗೆ ಬರೆಯುತ್ತಾರೆ. ಇದು ಅಸಹ್ಯಕರವಾದ ಸಂಗತಿ. ಇದು ನನಗೆ ತೀವ್ರ ಅಸಮಾಧಾನವುಂಟು ಮಾಡಿತ್ತು ಎಂದು ನಾಗಾರ್ಜುನ್ ಹೇಳಿದ್ದಾರೆ.

  10ಕ್ಕು ಹೆಚ್ಚು ಸಿನಿಮಾಗಳಲ್ಲಿ ಅನುಷ್ಕಾ-ನಾಗಾರ್ಜುನ್ ಅಭಿನಯ

  10ಕ್ಕು ಹೆಚ್ಚು ಸಿನಿಮಾಗಳಲ್ಲಿ ಅನುಷ್ಕಾ-ನಾಗಾರ್ಜುನ್ ಅಭಿನಯ

  ನಾಗಾರ್ಜುನ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸುಮಾರು 10ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸೂಪರ್, ಡಾನ್, ರಗಡ, ತಾಂಡವಂ, ಓಂ ನಮೋ, ಕೇಡಿ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರು 10ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಇಬ್ಬರ ನಡುವೆ ಗಾಸಿಪ್ ಕೂಡ ಹೆಚ್ಚಾಗಿತ್ತು. ಬಳಿಕ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದನ್ನು ನಿಲ್ಲಿಸಿದರು.

  English summary
  Actor Akkineni Nagarjuna reaction to rumours of dating with anushka Shetty. Nagarjuna upset about son and me to the same girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X