For Quick Alerts
  ALLOW NOTIFICATIONS  
  For Daily Alerts

  'ಐಕಾನ್' ಸಿನಿಮಾದಿಂದ ಹೊರನಡೆದ ಅಲ್ಲು ಅರ್ಜುನ್!

  |

  'ಪುಷ್ಪ' ಸಿನಿಮಾದ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. 2019 ರಲ್ಲಿ 'ಪುಷ್ಪ' ಸಿನಿಮಾ ಪ್ರಾರಂಭವಾದ ಬಳಿಕ ಈವರೆಗೆ ಬೇರೆ ಸಿನಿಮಾಗಳನ್ನೇ ಒಪ್ಪಿಕೊಂಡಿಲ್ಲ ಅಲ್ಲು ಅರ್ಜುನ್.

  'ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡ ಹಿಟ್ ಆಗಿರುವ ಕಾರಣ ಮುಂದಿನ ಸಿನಿಮಾಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಿದ್ದಾರೆ ಅಲ್ಲು ಅರ್ಜುನ್.

  ಪುಷ್ಪ 2 ಗೆ ಸೇರುತ್ತಾರಾ ಸಾಯಿ ಪಲ್ಲವಿ? ತೂಕದ ಪಾತ್ರ.. ಶೀಘ್ರದಲ್ಲೇ ಅಧಿಸೂಚನೆ!ಪುಷ್ಪ 2 ಗೆ ಸೇರುತ್ತಾರಾ ಸಾಯಿ ಪಲ್ಲವಿ? ತೂಕದ ಪಾತ್ರ.. ಶೀಘ್ರದಲ್ಲೇ ಅಧಿಸೂಚನೆ!

  'ಪುಷ್ಪ' ಸಿನಿಮಾ ದೊಡ್ಡ ಹಿಟ್ ಆಗಿರುವ ಕಾರಣ ಇನ್ನು ಮುಂದೆಯೂ ಅದೇ ರೀತಿ ಗುಣಮಟ್ಟದ ಸಿನಿಮಾಗಳಲ್ಲಿ ಮಾತ್ರವೇ ನಟಿಸುವ ನಿರ್ಧಾರ ಮಾಡಿದಂತಿದೆ ಹಾಗಾಗಿ ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಈಗಾಗಲೇ ಒಪ್ಪಿಕೊಂಡಿದ್ದ ಒಂದು ಸಿನಿಮಾದಿಂದಲೂ ಇದೇ ಕಾರಣಕ್ಕೆ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

  ಅಲ್ಲು ಅರ್ಜುನ್, 'ಐಕಾನ್' ಹೆಸರಿನ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ ಇದೀಗ ಆ ಸಿನಿಮಾದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ನಿರ್ದೇಶಕ ವೇಣು ಶ್ರೀರಾಮ್ ಜೊತೆಗೆ ಉಂಟಾದ ಕೆಲವು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಅಲ್ಲು ಅರ್ಜುನ್ ಸಿನಿಮಾದಿಂದ ಹೊರಗೆ ನಡೆದಿದ್ದಾರೆ.

  'ಐಕಾನ್' ಸಿನಿಮಾವನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಲಿದ್ದರು. ಆದರೆ ಈಗ ಅಲ್ಲು ಅರ್ಜುನ್ ಸಿನಿಮಾದಿಂದ ಹೊರಗೆ ನಡೆದಿರುವ ಕಾರಣಕ್ಕೆ ರಾಮ್ ಪೋತಿನೇನಿಗೆ ಅದೇ ಕತೆಯನ್ನು ಹೇಳಿದ್ದಾರಂತೆ ನಿರ್ದೇಶಕ ವೇಣು ಶ್ರೀರಾಮ್.

  ಅಲ್ಲು ಅರ್ಜುನ್ ಇದೀಗ 'ಪುಷ್ಪ 2' ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಇದೇ ತಿಂಗಳ 22 ರಿಂದ ಪ್ರಾರಂಭವಾಗಲಿದೆ. ಮೊದಲ ಸಿನಿಮಾ ದೊಡ್ಡ ಹಿಟ್ ಆಗಿರುವ ಕಾರಣ ಎರಡನೇ ಸಿನಿಮಾಕ್ಕೂ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

  'ಪುಷ್ಪ 2' ಸಿನಿಮಾದ ಬಳಿಕ ಅಲ್ಲು ಅರ್ಜುನ್ ಮತ್ತೊಮ್ಮೆ ಬೊಯಪಾಟಿ ಶ್ರೀನು ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಬೊಯಪಾಟಿ ನಿರ್ದೇಶಿಸಿದ್ದ 'ಸರೈನೋಡು' ಸಿನಿಮಾದಲ್ಲಿ ಅಲ್ಲು ಅರ್ಜುನ್ ನಟಿಸಿದ್ದರು.

  ಆ ಬಳಿಕ ಹಿಂದಿ ಸಿನಿಮಾದಲ್ಲಿಯೂ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಾತ್ರಿ ಇಲ್ಲ.

  English summary
  Actor Allu Arjun walked out from ICON Telugu movie which is to be directed by Venu Sriram. Now he is acting in Pushpa 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X