For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಚಿತ್ರದಲ್ಲಿ ಚಿಯಾನ್ ವಿಕ್ರಂ: ಅಚ್ಚರಿ ಮೂಡಿಸುತ್ತೆ ವಿಕ್ರಂ ನಿರ್ಧಾರ!

  |

  ಸದ್ಯ ರಾಜಮೌಳಿ ಅವರು RRR ಚಿತ್ರದ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಚಿತ್ರ ರಿಲೀಸ್‌ಗೆ ರೆಡಿ ಇದ್ದು, ಎಲ್ಲರೂ ತೆರೆಯ ಮೇಲೆ ಆರ್‌ಆರ್‌ಆರ್‌ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಾ ಇದ್ದಾರೆ.

  ಇದರ ಮಧ್ಯೆ ರಾಜಮೌಳಿಯ ಮುಂದಿನ ಸಿನಿಮಾದ ಸುದ್ದಿ ಕೂಡ ಬಂದು ಹೋಗತ್ತೆ. ಮುಂದಿನ ಚಿತ್ರಕ್ಕಾಗಿ ರಾಜಮೌಳಿ ತೆರೆಮರೆಯಲ್ಲಿ ತಯಾರಿ ನಡೆಸಿದ್ದಾರೆ. ಆರ್‌ಆರ್‌ಆರ್ ಸಿನಿಮಾ ರಿಲೀಸ್‌ಗೂ ಮುನ್ನವೇ ರಾಜಮೌಳಿ ನಿರ್ದೇಶನ ಮಾಡಲಿರುವ ಸಿನಿಮಾ ಸದ್ದು ಮಾಡೋಕೆ ಶುರು ಮಾಡಿ ಬಿಟ್ಟಿದೆ.

  ಇನ್ನೂ ಸೆಟ್ಟೇರದ ಈ ಚಿತ್ರದಿಂದ ಸದ್ಯ ಮಹತ್ತರ ಸುದ್ದಿ ಒಂದು ಹೊರ ಬಿದ್ದಿದೆ. ರಾಜಮೌಳಿಯ ಬಳಗಕ್ಕೆ ತಮಿಳಿನ ಸ್ಟಾರ್‌ ನಟ ಎಂಟ್ರಿ ಕೊಟ್ಟಿದ್ದಾರೆ.

  ಚಿಯಾನ್‌ ವಿಕ್ರಂಗೆ ರಾಜಮೌಳಿಯ ಅದೃಷ್ಟ ರೇಖೆ!

  ಚಿಯಾನ್‌ ವಿಕ್ರಂಗೆ ರಾಜಮೌಳಿಯ ಅದೃಷ್ಟ ರೇಖೆ!

  ಇಡೀ ಇಂಡಿಯಾಗೆ ರಾಜಮೌಳಿ ಅನ್ನೋ ಹೆಸರು ಒಂದೇ ಸಾಕು. ಆರಂಭದಲ್ಲೇ ಇದು ಮತ್ತೊಂದು ಹಿಟ್‌ ಎಂದು ನಿರ್ಧರಿಸಲಾಗುತ್ತದೆ. ಯಾಕೆಂದರೆ ರಾಜಮೌಳಿ ಅಂಥ ಪ್ರತಿಭಾನ್ವಿತ ನಿರ್ದೇಶಕ. ರಾಜಮೌಳಿಯ ಸಾಲು ಸಾಲು ಸಿನಿಮಾಗಳ ಸಕ್ಸಸ್ ನೋಡಿದ್ರೆ ಅವರಲ್ಲಿ ಏನೋ ವಿಶೇಷ ಶಕ್ತಿ ಇರಬಹುದೇನೋ ಎಂದು ಕೊಳ್ಳುವವರೂ ಇದ್ದಾರೆ. ಅಷ್ಟರ ಮಟ್ಟಿಗೆ ನಿರ್ದೇಶನದಲ್ಲಿ ಪಳಗಿದ್ದಾರೆ ರಾಜಮೌಳಿ.

  ಸದ್ಯ ಎಲ್ಲರಿಗೂ ಕಾಡುತ್ತಾ ಇದ್ದ ಪ್ರಶ್ನೆ ರಾಜಮೌಳಿ ಮುಂದಿನ ಸಿನಿಮಾ ಯಾವುದು ಎನ್ನುವುದು. ಅದಕ್ಕೆ ಉತ್ತರ ಸಿಕ್ಕಾಗಿದೆ. ರಾಜಮೌಳಿ ನಟ ಮಹೇಶ್‌ ಬಾಬುಗೆ ನಿರ್ದೇಶನ ಮಾಡಲು ಸಜ್ಜಾಗುತ್ತಲಿದ್ದಾರೆ. ಆರ್‌ಆರ್‌ಆರ್‌ ಬಳಿಕ ರಾಜಮೌಳಿ ಮತ್ತು ಮಹೇಶ್‌ ಬಾಬು ಒಟ್ಟಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಮಾತ್ರ ಹೊರ ಬಂದಿತ್ತು. ಈಗ ಈ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್‌ ನಟ ಎಂಟ್ರಿ ಕೊಟ್ಟಿದ್ದಾನೆ. ಅದು ಮತ್ಯಾರು ಅಲ್ಲ ತಮಿಳಿನ ಸ್ಟಾರ್ ನಟ ಚಿಯಾನ್‌ ವಿಕ್ರಂ.

  ರಾಜಮೌಳಿ ಚಿತ್ರದಲ್ಲಿ ಚಿಯಾನ್‌ ವಿಕ್ರಂ ವಿಲನ್!

  ರಾಜಮೌಳಿ ಚಿತ್ರದಲ್ಲಿ ಚಿಯಾನ್‌ ವಿಕ್ರಂ ವಿಲನ್!

  ತಮಿಳು ಚಿತ್ರರಂಗದಲ್ಲಿ ಬಹು ದೊಡ್ಡ ಹೆಸರು ಮಾಡಿದ್ದಾರೆ ಸ್ಟಾರ್‌ ನಟ ಚಿಯಾನ್ ವಿಕ್ರಮ್​. ವಿಕ್ರಮ್ ನೀರು ಕುಡಿದಷ್ಟೇ ಸುಲಭವಾಗಿ ನಟನೆ ಮಾಡುತ್ತಾರೆ. ಕರಗತವಾಗಿರುವ ಅಭಿನಯ ಅವರಿಂದ ಎಂಥ ಪಾತ್ರವನ್ನಾದರು ಮಾಡಿಸುತ್ತದೆ. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಈಗ ರಾಜಮೌಳಿ ಸಿನಿಮಾಗೆ ವಿಕ್ರಮ್​ ಪ್ರಮುಖ ಖಳನಾಯಕ​ ಆಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಭಿನ್ನ ಗೆಟಪ್​ ಕಾಣಿಸಿಕೊಳ್ಳಲಿದ್ದಾರಂತೆ. ಈಗ ವಿಕ್ರಮ್ ಕೂಡ ಈ ತಂಡ ಸೇರಿಕೊಳ್ಳುತ್ತಿದ್ದಾರೆ. ಹಾಗಾಗಿ ವಿಕ್ರಂ ಪಾತ್ರದ ಬಗ್ಗೆಯೂ ಸಾಕಷ್ಟು ಕುತೂಹಲ ಹುಟ್ಟಿವೆ.

  ರಾಜಮೌಳಿ ಚಿತ್ರದಲ್ಲಿ ಖಳನಾದರೂ ಅದೃಷ್ಟವೇ!

  ರಾಜಮೌಳಿ ಚಿತ್ರದಲ್ಲಿ ಖಳನಾದರೂ ಅದೃಷ್ಟವೇ!

  ನಟ ಚಿಯಾನ್‌ ವಿಕ್ರಂ ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್. ಸಾಕಷ್ಟು ಹಿಟ್‌ ಸಿನಿಮಾಗಳನ್ನ ಕೊಟ್ಟು ಸೈ ಎನಿಸಿಕೊಂಡಿರುವ ನಟ. ವಿಕ್ರಂಗೆ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಹೀಗಿರೋವಾಗ ವಿಕ್ರಂ ಈಗ ಖಳನಾಯಕನ ಪಾತ್ರ ಮಾಡಲು ಒಪ್ಪಿದ್ದು ಹೇಗೆ ಎನ್ನು ಪ್ರಶ್ನೆಗಳು ಮೂಡುತ್ತವೆ.

  ಆದರೆ ಇಲ್ಲಿ ನಾಯಕನಾ ಅಥವಾ ಖಳನಾಯಕನಾ ಎನ್ನುವ ಪ್ರಶ್ನೆ ಬರುವುದಿಲ್ಲ. ಯಾಕೆಂದರೆ ರಾಜಮೌಳಿ ಸಿನಿಮಾಗಳಲ್ಲಿ ವಿಲನ್‌ ಪಾತ್ರ ಹೀರೋ ಪಾತ್ರದಷ್ಟೇ ಮುಖ್ಯ ಆಗಿರುತ್ತದೆ. ಜೊತೆಗೆ ಹೀರೋ, ವಿಲನ್‌ ಎನ್ನುವುದಕ್ಕಿಂದ ಹೆಚ್ಚಾಗಿ ಒಂದು ಪಾತ್ರವಾಗಿ ಮನಸ್ಸಲ್ಲಿ ಉಳಿದು ಬಿಡುತ್ತದೆ. ಇದಕ್ಕೆ ಬಾಹುಬಲಿಯ ರಾಣ ಸಾಕ್ಷಿ.

  ಖಳನಾಕನಾದರೂ ಬಲ್ಲಾಳ ದೇವನ ಪಾತ್ರದಲ್ಲಿ ರಾಣ ದಗ್ಗುಬಾಟಿ ಅಬ್ಬರಿಸಿದ ರೀತಿ ಅದ್ಭುತ, ಅತ್ಯದ್ಭುತ. ಈಗ ಚಿಯಾನ್‌ ವಿಕ್ರಂ ಮಹೇಶ್ ಬಾಬು ಎದುರು ನಿಂತು ಹೋರಾಡಲು ಸಜ್ಜಾಗಿದ್ದಾರೆ.

  ಆರ್‌ಆರ್‌ಆರ್‌ ರಿಲೀಸ್ ಬಳಿಕ ಮುಂದಿನ ಮಾಹಿತಿ!

  ಆರ್‌ಆರ್‌ಆರ್‌ ರಿಲೀಸ್ ಬಳಿಕ ಮುಂದಿನ ಮಾಹಿತಿ!

  ರಾಜಮೌಳಿ ಸದ್ಯ ಆರ್‌ಆರ್‌ಆರ್‌ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. 2022 ಜನವರಿ 7ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ದುಬೈನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ. ಇನ್ನು ಈ ಚಿತ್ರದ ರಿಲೀಸ್ ಬಳಿಕ ರಾಜಮೌಳಿ ಕೊಂಚ ಗ್ಯಾಪ್‌ ತೆಗೆದುಕೊಳ್ಳಲಿದ್ದಾರೆ. ಆ ಬಳಿಕ ಮಹೇಶ್ ಬಾಬು ಜೊತೆಗಿನ ಸಿನಿಮಾ ಆರಂಭಿಸಲಿದ್ದಾರೆ.

  English summary
  Is Tamil Actor Chiyaan Vikram Joining Hands With S.S. Rajamouli know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X