For Quick Alerts
  ALLOW NOTIFICATIONS  
  For Daily Alerts

  ಆತ ನನಗೆ ಮೋಸ ಮಾಡಿದ: ಸ್ಟಾರ್ ನಟನ ವಿರುದ್ಧ ನಿರ್ದೇಶಕ ಗಂಭೀರ ಆರೋಪ

  |

  ಗೋಪಿಚಂದ್ ತೊಟ್ಟೆಂಪುಡಿ ತೆಲುಗಿನ ಸ್ಟಾರ್ ನಾಯಕ ನಟರಲ್ಲಿ ಒಬ್ಬರು. 'ಜಯಂ' ಸಿನಿಮಾದಲ್ಲಿ ನಿರ್ವಹಿಸಿದ್ದ ವಿಲನ್ ಪಾತ್ರದಿಂದ ದೊಡ್ಡ ಖ್ಯಾತಿ ಗಳಿಸಿದ ಗೋಪಿಚಂದ್ ಬಳಿಕ ನಾಯಕ ನಟರಾಗಿ ಬದಲಾಗಿ ದೊಡ್ಡ ಯಶಸ್ಸು ಗಳಿಸಿದರು.

  ಈಗಲೂ ಮಾಸ್ ನಾಯಕ ನಟರಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಗೋಪಿಚಂದ್ ಹೊಂದಿದ್ದಾರೆ. ವರ್ಷಕ್ಕೆ ಒಂದೆರಡು ಸಿನಿಮಾಗಳನ್ನು ಮಾಡುತ್ತಾ ಆರಕ್ಕೇರದ-ಮೂರಕ್ಕಿಳಿಯದ ಸ್ಥಾನದಲ್ಲಿದ್ದಾರೆ ಗೋಪಿಚಂದ್.

  ಆದರೆ ಇದೀಗ ತೆಲುಗಿನ ನಿರ್ದೇಶಕ ಅಮ್ಮಾ ರಾಜಶೇಖರ್, ನಟ ಗೋಪಿಚಂದ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ತೆಲುಗು ತಮಿಳಿನಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶಿಸಿರುವ ಅಮ್ಮಾ ರಾಜಶೇಖರ್ ಕೆಲವು ದಿನಗಳ ಹಿಂದೆ ನಟ ನಿತಿನ್ ವಿರುದ್ಧ ಹರಿಹಾಯ್ದಿದ್ದರು ಇದೀಗ ಗೋಪಿಚಂದ್ ವಿರುದ್ಧ ಬಿದ್ದಿದ್ದಾರೆ.

  ಗೋಪಿಚಂದ್‌ಗೆ ಕತೆ ಹೇಳಿದ್ದೆ: ಅಮ್ಮಾ ರಾಜಶೇಖರ್

  ಗೋಪಿಚಂದ್‌ಗೆ ಕತೆ ಹೇಳಿದ್ದೆ: ಅಮ್ಮಾ ರಾಜಶೇಖರ್

  'ಗೋಪಿಚಂದ್ ಜೊತೆಗೆ 'ರಣಂ' ಸಿನಿಮಾ ಮಾಡಿದ ಬಳಿಕ ಇನ್ನೊಂದು ಸಿನಿಮಾ ಮಾಡೋಣ ಎಂದು ಹೇಳಿದ್ದರು. ನಾನು, ಸರಿ ಎಂದು ಸಿನಿಮಾದ ಕತೆಯೊಂದನ್ನು ಗೋಪಿಚಂದ್‌ಗೆ ಹೇಳಿದ್ದೆ. ಅದೇ ಸಮಯಕ್ಕೆ ನನಗೆ ಸುರೇಶ್‌ಬಾಬು ಪ್ರೊಡಕ್ಷನ್‌ನಿಂದ ವೆಂಕಟೇಶ್‌ ಅವರಿಗೆ ಸಿನಿಮಾ ಮಾಡುವ ಅವಕಾಶ ಲಭಿಸಿತು. ವೆಂಕಟೇಶ್ ಸಹ ಕತೆ ಒಪ್ಪಿದರು, ಅಡ್ವಾನ್ಸ್ ಸಹ ನೀಡಿದರು. ಸಿನಿಮಾಕ್ಕಾಗಿ ಸೆಟ್‌ ಸಹ ಹಾಕಿದೆವು'' ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ ಅಮ್ಮಾ ರಾಜಶೇಖರ್.

  'ಶಂಖಂ' ಸಿನಿಮಾದ ಕತೆ ನನ್ನದು: ಅಮ್ಮಾ ರಾಜಶೇಖರ್

  'ಶಂಖಂ' ಸಿನಿಮಾದ ಕತೆ ನನ್ನದು: ಅಮ್ಮಾ ರಾಜಶೇಖರ್

  ''ಅದೇ ಸಮಯಕ್ಕೆ ಗೋಪಿಚಂದ್ ನಟನೆಯ 'ಶಂಖಂ' ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾ ನೋಡಿ ನಾನು ಶಾಕ್ ಆಗಿಬಿಟ್ಟೆ. ಏಕೆಂದರೆ ಅದು ನಾನೇ ಗೋಪಿಚಂದ್‌ಗೆ ಹೇಳಿದ್ದ ಕತೆ. ನಾನು ಹೇಳಿದ್ದ ಕತೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದರು. ನಂಬಿ ಕತೆ ಹೇಳಿದರೆ ಗೋಪಿಚಂದ್ ನನಗೆ ಮೋಸ ಮಾಡಿದರು'' ಎಂದಿದ್ದಾರೆ ಅಮ್ಮಾ ರಾಜಶೇಖರ್. ಇದರ ಬೆನ್ನಲ್ಲೆ ಸುರೇಶ್ ಪ್ರೊಡಕ್ಷನ್‌ನಿಂದ ಮಾಡಬೇಕಾದ ಸಿನಿಮಾ ಸಹ ನಿಂತು ಹೋಯಿತು'' ಎಂದಿದ್ದಾರೆ.

  ಫ್ಲಾಪ್ ನಿರ್ದೇಶಕ ಅಮ್ಮಾ ರಾಜಶೇಖರ್

  ಫ್ಲಾಪ್ ನಿರ್ದೇಶಕ ಅಮ್ಮಾ ರಾಜಶೇಖರ್

  ಅಸಲಿಗೆ ಅಮ್ಮಾ ರಾಜಶೇಖರ್ ನಿರ್ದೇಶನದ ಸಿನಿಮಾಗಳಲ್ಲಿ 'ರಣಂ' ಒಂದೇ ಹೆಚ್ಚು ಹಿಟ್ ಆಗಿದ್ದು, ಇನ್ನೆಲ್ಲವೂ ಬಹುತೇಕ ಫ್ಲಾಪ್ ಆದವು. ಕೊರಿಯಾಗ್ರಾಫರ್ ಸಹ ಆಗಿರುವ ಅಮ್ಮಾ ರಾಜಶೇಖರ್, ನಿರ್ದೇಶಕನಾಗಿ ಗೆಲುವು ಸಾಧಿಸುವ ಪ್ರಯತ್ನವನ್ನು ಇನ್ನೂ ನಿಲ್ಲಿಸಿಲ್ಲ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳನ್ನು ನಿರ್ದೇಶಿಸಿ ಬಿಡುಗಡೆ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ 'ಹೈ ಫೈವ್' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ.

  ನಟ ನಿತಿನ್ ವಿರುದ್ಧವೂ ವಾಗ್ದಾಳಿ

  ನಟ ನಿತಿನ್ ವಿರುದ್ಧವೂ ವಾಗ್ದಾಳಿ

  ತಮ್ಮ ಹೊಸ ಸಿನಿಮಾ 'ಹೈ ಫೈವ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತೆಲುಗಿನ ಮತ್ತೊಬ್ಬ ನಟ ನಿತಿನ್‌ ವಿರುದ್ಧ ವೇದಿಕೆ ಮೇಲೆಯೇ ಹರಿಹಾಯ್ದಿದ್ದರು. ನಿತಿನ್‌ ನಮ್ಮ ಕಾರ್ಯಕ್ರಮಕ್ಕೆ ಬರುತ್ತೇನೆಂದು ಹೇಳಿ ಕೈಕೊಟ್ಟಿದ್ದಾನೆ. ಆತನಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದೇ ನಾನು, ಗುರುವಿಗೆ ನೀಡಬೇಕಾದ ಕನಿಷ್ಟ ಗೌರವವನ್ನು ನಿತಿನ್ ನೀಡಿಲ್ಲ' ಎಂದಿದ್ದರು. ನಿತಿನ್‌ ನಟನೆಯ 'ಠಕ್ಕರಿ' ಹೆಸರಿನ ಸಿನಿಮಾವನ್ನು ಅಮ್ಮಾ ರಾಜಶೇಖರ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಫ್ಲಾಪ್ ಆಗಿತ್ತು.

  Recommended Video

  Vikrant Rona | Anup Bhandari |Salman Khan| ಎಸ್.ಪಿ.ಬಾಲಸುಬ್ರಹ್ಮಣ್ಯಂರನ್ನು ನೆನೆದ ಸಲ್ಮಾನ್ ಖಾನ್ *PressMeet
  English summary
  Telugu movie director Amma Rajashekhar alleged that actor Gopichand stolen his story and made Shankam movie.
  Tuesday, July 26, 2022, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X