Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡದಲ್ಲಿ ಸಿನಿಮಾ ಬಿಡುಗಡೆ ಮಾಡಲ್ಲ: ನಟ ನಾನಿ ಕೊಟ್ಟ ಕಾರಣ ಒಪ್ಪಬಹುದೇ?
ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಬಹಳ ಸಾಮಾನ್ಯ ಎಂಬಂತಾಗಿವೆ. ಕೆಲ ದೊಡ್ಡ ಬಜೆಟ್ ಸಿನಿಮಾಗಳು ಹಿಟ್ ಆದ ಬೆನ್ನಲ್ಲೆ ಬಹುತೇಕ ನಟರು ಪ್ಯಾನ್ ಇಂಡಿಯಾದತ್ತ ಹೊರಳಿದ್ದಾರೆ.
ಸಣ್ಣ-ಪುಟ್ಟ ಸಿನಿಮಾಗಳು ಸಹ ಈಗ ಬಹುಭಾಷೆಗಳಲ್ಲಿ ಬಿಡುಗಡೆ ಆಗುತ್ತಿವೆ. ಅದರಲ್ಲಿಯೂ ಆಂಧ್ರದಲ್ಲಿ ಟಿಕೆಟ್ ದರ ಕಡಿಮೆ ಆದ ಬಳಿಕ ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪರಿಪಾಠ ತೆಲುಗು ಚಿತ್ರರಂಗದವರಿಗೆ ಹೆಚ್ಚಾಗಿದೆ.
Dubbing
movies
in
kannada
:
ಕನ್ನಡಕ್ಕೆ
ಡಬ್
ಮಾಡಿದರೆ
ಪ್ಯಾನ್
ಇಂಡಿಯಾ
ಸಿನಿಮಾಗಳು
ವರ್ಕೌಟ್
ಆಗಲ್ವೇ?
ಇತ್ತೀಚೆಗಷ್ಟೆ ಬಿಡುಗಡೆ ಆದ 'RRR' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಿತ್ತು. ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆಲುಗಿನಲ್ಲಿಯೇ ಸಿನಿಮಾ ಬಿಡುಗಡೆ ಆಗಿತ್ತು, ನಾಮ್ ಕೆ ವಾಸ್ತೆ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿಯೂ ಸಿನಿಮಾ ಬಿಡುಗಡೆ ಆಗಿತ್ತು.
ಇದೀಗ ನಟ ನಾನಿ ತಮ್ಮ ಮುಂದಿನ ಸಿನಿಮಾವನ್ನು ಕರ್ನಾಟಕದಲ್ಲಿ ತೆಲುಗಿನಲ್ಲಿಯೇ ಬಿಡುಗಡೆ ಮಾಡುತ್ತೀನಿ, ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ತಮ್ಮ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡದೇ ಇರಲು ಕಾರಣವನ್ನೂ ಸಹ ಅವರು ನೀಡಿದ್ದಾರೆ.
ನಾನಿ 'ಅಲಾ ಸುಂದರಾನಿಕಿ' ಹೆಸರಿನ ಪ್ರೀತಿ ಕಾಮಿಡಿ ಬೆರೆತ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾವನ್ನು ತೆಲುಗು ಸೇರಿದಂತೆ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡದಲ್ಲಿ ಬಿಡುಗಡೆ ಮಾಡದೆ ತೆಲುಗಿನಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ನಿನ್ನೆಯಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಕನ್ನಡದಲ್ಲಿ ಸಿನಿಮಾವನ್ನು ಡಬ್ ಮಾಡದೇ ಇರುವ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿರುವ ನಾನಿ, ''ನಾನು ನಟರು ನಮ್ಮ ಸಿನಿಮಾದ ಮೂಲ ರೂಪವನ್ನೇ ಹೆಚ್ಚು ಜನರಿಗೆ ತೋರಿಸಲು ಇಷ್ಟಪಡುತ್ತೇವೆ. ನಮ್ಮ ಭಾಷೆಯಲ್ಲಿ ನಾವೇ ಡೈಲಾಗ್ ಹೇಳಿದ ಮೂಲ ಸಿನಿಮಾವನ್ನು ತೋರಿಸುವುದೇ ನಮಗಿಷ್ಟ'' ಎಂದಿದ್ದಾರೆ.
ಮುಂದುವರೆದು, ''ಆದರೆ ಭಾಷೆಯ ಸಮಸ್ಯೆ ಇರುವ ಕಾರಣ ನಾವು ಸಿನಿಮಾಗಳನ್ನು ವಿವಿಧ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಭಿನ್ನ. ಅಲ್ಲಿ ನಮಗೆ ಭಾಷೆಯ ಸಮಸ್ಯೆ ಇಲ್ಲ. ಅಲ್ಲಿನ ಜನರಿಗೆ ತೆಲುಗು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಹಲವು ತೆಲುಗು ಸಿನಿಮಾಗಳನ್ನು ಮೂಲ ಭಾಷೆಯಲ್ಲಿಯೇ ಅವರು ನೋಡುತ್ತಾ ಬಂದಿದ್ದಾರೆ. ಹಾಗಾಗಿ ಅವರು ನಮ್ಮ ಸಿನಿಮಾವನ್ನು ಮೂಲ ಭಾಷೆಯಲ್ಲಿಯೇ ನೋಡಲೆಂದು ಕನ್ನಡಕ್ಕೆ ಡಬ್ ಮಾಡಿಲ್ಲ'' ಎಂದಿದ್ದಾರೆ ನಟ ನಾನಿ.
ಆದರೆ ನಾನಿ, ತಮ್ಮ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡುವುದಿಲ್ಲ ಎಂದಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಕನ್ನಡದಲ್ಲಿ ಡಬ್ ಮಾಡುವವರೆಗೆ ನಾವು ನಿಮ್ಮ ಸಿನಿಮಾ ನೋಡುವುದಿಲ್ಲ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕೆಲವು ತೆಲುಗರು ಸಹ ನಾನಿ ಹೇಳಿಕೆಯನ್ನು ಟೀಕಿಸಿದ್ದಾರೆ. ''ನಿಮ್ಮದು ಇದೆಂತಾ ಲಾಜಿಕ್, ತಮಿಳಿನ ಜನರಿಗೂ ತೆಲುಗು ಚೆನ್ನಾಗಿ ಬರುತ್ತದೆ ಅಲ್ಲೂ ತೆಲುಗಿನಲ್ಲೆಯೇ ಬಿಡುಗಡೆ ಮಾಡಿ. ಒಂದು ಭಾಷೆಯಲ್ಲಿ ಡಬ್ ಮಾಡದೆ ಇತರೆ ಭಾಷೆಗಳಲ್ಲಿ ಡಬ್ ಮಾಡುತ್ತಿರುವುದು ಸರಿ ಅಲ್ಲ ಎಂದು ಖಂಡಿಸಿದ್ದಾರೆ.
ಇನ್ನೊಬ್ಬರು, ಈತನ ಸತತ ಮೂರು ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆದವು, ಆದರೆ ಎಲ್ಲವೂ ಫ್ಲಾಪ್ ಆದವು. ಅದೇ ಕಾರಣಕ್ಕೆ ಈತ ತನ್ನ ಹೊಸ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುತ್ತಿಲ್ಲ ಎಂದಿದ್ದಾರೆ. ನಾನಿಯ ಈ ಹಿಂದಿನ 'ವಿ', 'ಶ್ಯಾಮ್ ಸಿಂಘ ರಾಯ್', 'ಟಕ್ ಜಗದೀಶ್' ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿದ್ದವು. ಆದರೆ ಎಲ್ಲವೂ ಫ್ಲಾಪ್ ಆದವು.