For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಯ ಅಂತಿಮ ಆಸೆ ಈಡೇರಿಸಿದ ಪವನ್ ಕಲ್ಯಾಣ್: ವಿಡಿಯೋ ವೈರಲ್

  |

  ತೆಲುಗು ಚಿತ್ರರಂಗದ ಸ್ಟಾರ್ ನಟ ಪವನ್ ಕಲ್ಯಾಣ್ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ. ಅದೇ ಅಭಿಮಾನಿಗಳ ಬಲ ಹಾಗೂ ಬೆಂಬಲದಿಂದ ರಾಜಕಾರಣಕ್ಕೂ ಧುಮುಕಿರುವ ನಟ ಪವನ್ ಕಲ್ಯಾಣ್, ಆಂಧ್ರದಲ್ಲಿ ಆಡಳಿತ ಪಕ್ಷದ ಎದುರು ಗುಟುರು ಹಾಕುತ್ತಿದ್ದಾರೆ.

  ಅಭಿಮಾನಿಗಳು ಪವನ್ ಅನ್ನು ಅತಿಯಾಗಿ ಆರಾಧಿಸುವಂತೆ, ಪವನ್ ಸಹ ಅಭಿಮಾನಿಗಳನ್ನು ಅಷ್ಟೇ ಪ್ರೀತಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೆಂದರೆ, ಪವನ್ ಕಲ್ಯಾಣ್, ತಮ್ಮ ಅಭಿಮಾನಿಯೊಬ್ಬನ ಕೊನೆಯಾಸೆಯನ್ನು ಈಡೇರಿಸಿರುವುದು.

  ಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನ

  ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದು, ತಾನು ಪವನ್ ಕಲ್ಯಾಣ್ ಅನ್ನು ನೋಡಬೇಕು ಎಂದಿದ್ದ. ಆ ವಿಡಿಯೋ ವೈರಲ್ ಆಗಿತ್ತು, ಬಳಿಕ ಆ ಯುವಕನ ಬಗ್ಗೆ ಮಾಹಿತಿ ಪಡೆದಿದ್ದ ಪವನ್ ಕಲ್ಯಾಣ್, ಯುವಕನನ್ನು ಭೇಟಿಯಾಗಿ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.

  ಆಂಬುಲೆನ್ಸ್‌ ಕಳಿಸಿ ಯುವಕನನ್ನು ಕರೆಸಿಕೊಂಡಿದ್ದ ಪವನ್ ಕಲ್ಯಾಣ್, ಯುವಕನ ಬಳಿ ಬಂದು ಮಾತನಾಡಿ, ಧೈರ್ಯ ತುಂಬಿದ್ದಾರೆ. ಆತನ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಪವನ್ ಕಲ್ಯಾಣ್ ಅವರು ಯುವಕನ್ನು ಮಾತನಾಡಿಸಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಪವನ್‌ ಕಲ್ಯಾಣ್‌ರ ಮಾನವೀಯ ಗುಣವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.

  ಆದರೆ ವಿರೋಧಿಗಳು ಈ ವಿಡಿಯೋ ಬಗ್ಗೆ ಕೊಂಕು ನುಡಿಯುತ್ತಿದ್ದು, ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಇದು ಎನ್ನುತ್ತಿದ್ದಾರೆ. ವಿಡಿಯೋದಲ್ಲಿ ಪವನ್ ಕಲ್ಯಾಣ್ ಕ್ಯಾಮೆರಾಗೆ ಕಾಣುವಂತೆ ಯುವಕನ ಕೈ ಎತ್ತಿ ಹಿಡಿದಿರುವುದು, ಯುವಕನ ತಲೆ ತಡವಿರುವುದನ್ನು ಟ್ರೋಲ್ ಮಾಡುತ್ತಿದ್ದಾರೆ.

  English summary
  Actor Pawan Kalyan full fills his fan's last wish. He met his fan who id bed ridden due to serious illness.
  Friday, November 4, 2022, 15:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X