twitter
    For Quick Alerts
    ALLOW NOTIFICATIONS  
    For Daily Alerts

    ಇಪ್ಪಟಂ ಗ್ರಾಮದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ಪವನ್ ಕಲ್ಯಾಣ್! ಕಾರಿನ ಮೇಲೆ ಕೂತು ಎಂಟ್ರಿ!

    |

    ಸಿನಿಮಾಗಳಲ್ಲಿ ಭರ್ಜರಿ ಮಾಸ್ ಎಂಟ್ರಿ ಸೀನ್‌ಗಳು, ಮಾಸ್ ಡೈಲಾಗ್‌ಗಳನ್ನು ಹೇಳುವ ನಟ ಪವನ್ ಕಲ್ಯಾಣ್, ರಾಜಕೀಯದಲ್ಲಿಯೂ ಅದೇ ಸಿನಿಮೀಯತೆಯ ಪ್ರಯೋಗ ಮಾಡುತ್ತಿದ್ದಾರೆ.

    ಕೆಲವು ದಿನಗಳ ಹಿಂದಷ್ಟೆ ಆಂಧ್ರದ ಆಡಳಿತ ಪಕ್ಷದ ವಿರುದ್ಧ ಅಸಾಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಲ್ಲದೆ, ಬಹಿರಂಗ ಯುದ್ಧಕ್ಕೆ ಪಂಥಾಹ್ವಾನ ನೀಡಿದ್ದ ಪವನ್ ಕಲ್ಯಾಣ್ ಇದೀಗ ಹಠಾತ್ತನೆ ಇಪ್ಪಟಂ ಎಂಬ ಹಳ್ಳಿಗೆ ನುಗ್ಗಿ ಅಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದ್ದಾರೆ!

    ಆಂಧ್ರದ ಇಪ್ಪಟಂ ಗ್ರಾಮದಲ್ಲಿ, ಪ್ರತಿಭಟನೆಯ ನಡುವೆಯೂ ಹೈವೇ ನಿರ್ಮಾಣಕ್ಕಾಗಿ ಕೆಲವು ಮನೆಗಳನ್ನು ಒಡೆಯಲಾಗಿದೆ. ಗ್ರಾಮದಲ್ಲಿ ಮನೆ ಕಳೆದುಕೊಂಡವರನ್ನು ಭೇಟಿಯಾಗಲೆಂದು ಪವನ್ ಕಲ್ಯಾಣ್ ಗ್ರಾಮಕ್ಕೆ ಪ್ರವೇಶಿಸಿದ್ದರು. ಅದೂ ಥೇಟ್ ಸಿನಿಮೀಯ ಶೈಲಿಯಲ್ಲಿ ಗ್ರಾಮಕ್ಕೆ ಬಂದು, ಸುಮಾರು ಎರಡು ಮೂರು ಗಂಟೆಗಳ ಕಾಲ ಗ್ರಾಮದಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದರು.

    ಕಾರಿನ ತಾರಸಿ ಮೇಲೆ ಕೂತು ಬಂದ ಪವನ್

    ಕಾರಿನ ತಾರಸಿ ಮೇಲೆ ಕೂತು ಬಂದ ಪವನ್

    ದೊಡ್ಡ ಸಂಖ್ಯೆಯ ಬೆಂಬಲಿಗರೊಟ್ಟಿಗೆ ಇಪ್ಪಟಂ ಗ್ರಾಮವನ್ನು ಪವನ್ ಕಲ್ಯಾಣ್ ಪ್ರವೇಶಿಸಿದರು. ಅವರನ್ನು ತಡೆಯುವ ಯತ್ನವನ್ನು ಪೊಲೀಸರು ಮೊದಲೇ ಮಾಡಿದರಾದರೂ ಸಾಧ್ಯವಾಗಲಿಲ್ಲ. ಪವನ್ ಕಲ್ಯಾಣ್ ತಮ್ಮ ಕಾರಿನ ರೂಫ್‌ ಮೇಲೆ ಏರಿ ಹಲವು ಕಿ.ಮೀ ಕಾರಿನ ತಾರಸಿ ಮೇಲೆ ಕೂತೇ ಪ್ರಯಾಣ ಮಾಡಿ ಸಿನಿಮೀಯ ರೀತಿಯಲ್ಲಿ ಇಪ್ಪಟಂ ಗ್ರಾಮ ತಲುಪಿದರು. ಪವನ್ ಅವರನ್ನು ತಡೆಯಲು ಪೊಲೀಸರು ಎಷ್ಟು ಯತ್ನಿಸಿದರು ಪವನ್ ಕಲ್ಯಾಣ್ ನಿಲ್ಲದೆ ಗ್ರಾಮ ಪ್ರವೇಶಿಸಿದರು.

    ವೈಎಸ್‌ಆರ್‌ ವಿಗ್ರಹಕ್ಕೆ ಬಿಗಿ ಭದ್ರತೆ!

    ವೈಎಸ್‌ಆರ್‌ ವಿಗ್ರಹಕ್ಕೆ ಬಿಗಿ ಭದ್ರತೆ!

    ಪವನ್ ಕಲ್ಯಾಣ್, ಇಪ್ಪಟಂ ಗ್ರಾಮ ಪ್ರವೇಶಿಸಿದ ಕೂಡಲೇ ಅಲ್ಲಿದ್ದ ಸಿಎಂ ಜಗನ್ ತಂದೆ ವೈಎಸ್‌ಆರ್‌ ಅವರ ಪ್ರತಿಮೆ ಸುತ್ತ ಮುಳ್ಳಿನ ತಂತಿ ಬೇಲಿ ಹಾಕಿ ಬಿಗಿ ಬಂದೋಬಸ್ತ್ ನೀಡಲಾಯ್ತು. ಪವನ್ ಹಾಗೂ ಅವರ ಬೆಂಬಲಿಗರು ಆ ವಿಗ್ರಹವನ್ನು ಒಡೆಯುತ್ತಾರೆಂದು ಪೊಲೀಸರು ಈ ನಿರ್ಣಯ ತೆಗೆದುಕೊಂಡಿದ್ದರು. ರಸ್ತೆ ನಿರ್ಮಾಣ ಮಾಡಲು ಜನ ವಾಸವಿದ್ದ ಮನೆ ಕೆಡವಿದ್ದಾರೆ, ಎಲ್ಲರೂ ಪೂಜಿಸುವ ನಂದಿ ವಿಗ್ರಹ ಕೆಡವಿದ್ದಾರೆ, ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಪಿವಿ ನರಸಿಂಹರಾವ್ ಇನ್ನಿತರರ ಮೂರ್ತಿಗಳನ್ನು ಒಡೆದಿದ್ದಾರೆ ಆದರೆ ವೈಎಸ್‌ಆರ್‌ ವಿಗ್ರಹ ಮಾತ್ರ ಹಾಗೆಯೇ ಉಳಿಸಿಕೊಂಡಿದ್ದಾರೆ ಇದು ಪಕ್ಷಪಾತ ವಾದಿ ಸರ್ಕಾರ'' ಎಂದಿದ್ದಾರೆ ಪವನ್.

    ಈ ಸರ್ಕಾರವನ್ನು ಜೀವಂತ ಹೂಳೋಣ: ಪವನ್

    ಈ ಸರ್ಕಾರವನ್ನು ಜೀವಂತ ಹೂಳೋಣ: ಪವನ್

    ಇಪ್ಪಟಂ ಗ್ರಾಮದಲ್ಲಿಯೂ ವೀರಾವೇಶದ ಭಾಷಣ ಮಾಡಿರುವ ಪವನ್ ಕಲ್ಯಾಣ್, ಇದು ಅತ್ಯಂತ ಅನೈತಿಕ ಸರ್ಕಾರ. ಈ ಸರ್ಕಾರದ ಹಣೆಯ ಮೇಲೆ ಮೊಳೆ ಹೊಡೆಯಬೇಕಿದೆ ಎಂದಿದ್ದಾರೆ. ಇಪ್ಪಟಂ ಒಂದು ಸಣ್ಣ ಗ್ರಾಮ, ಇದೇನು ರಾಜಮಂಡ್ರಿಯಾ ಅಥವಾ ವಿಶಾಖಪಟ್ಟಣವಾ ರಸ್ತೆ ಅಗಲ ಮಾಡಲು. ಮನೆಗಳಲ್ಲಿ ಮಹಿಳೆಯರು, ಮಕ್ಕಳು ಇದ್ದಾರೆನ್ನುವುದು ಸಹ ನೋಡದೇ ಮನೆಗಳನ್ನು ಒಡೆದಿದ್ದಾರೆ. ಜನಸೇನಾ ಪಕ್ಷಕ್ಕೆ ದೊಡ್ಡ ಸಂಖ್ಯೆಯಲ್ಲಿ ಇಪ್ಪಟಂ ಗ್ರಾಮದ ಜನ ಬಂದಿದ್ದರು ಎಂಬ ಕಾರಣಕ್ಕೆ ಸರ್ಕಾರ ಈಗ ಅವರನ್ನು ಟಾರ್ಗೆಟ್ ಮಾಡುತ್ತಿದೆ'' ಎಂದು ಅಬ್ಬರಿಸಿದ್ದಾರೆ ಪವನ್ ಕಲ್ಯಾಣ್.

    ನಿಮ್ಮ ತಲೆಯ ಮೇಲೆ ರೋಡು ಹಾಕ್ತೀನಿ: ಪವನ್ ಎಚ್ಚರಿಕೆ

    ನಿಮ್ಮ ತಲೆಯ ಮೇಲೆ ರೋಡು ಹಾಕ್ತೀನಿ: ಪವನ್ ಎಚ್ಚರಿಕೆ

    ''ವೈಎಸ್‌ಆರ್‌ಸಿಪಿ ಗೂಂಡಾಗಳು ನೀವು ಹೀಗೆ ಗೂಂಢಾಗಿರಿ ಮಾಡುತ್ತಿರಿ. ನಾವು ಮುಂದೊಂದು ದಿನ ನಿಮ್ಮ ತಲೆಗಳ ಮೇಲೆ ಹೈ ವೇ ರಸ್ತೆ ನಿರ್ಮಾಣ ಮಾಡುತ್ತೇವೆ'' ಎಂದು ನೇರ ಎಚ್ಚರಿಕೆ ಕೊಟ್ಟಿದ್ದಾರೆ ಪವನ್ ಕಲ್ಯಾಣ್. ''ಇದು ನೈತಿಕತೆ ಇಲ್ಲದ ಸರ್ಕಾರ. ಪೊಲೀಸರು ಸಹ ಜನ ಸಾಮಾನ್ಯರಿಗೆ ಭದ್ರತೆ ನೀಡುವ ಬದಲು, ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಭದ್ರತೆ ನೀಡುತ್ತಿದ್ದಾರೆ. ಈ ಸರ್ಕಾರವನ್ನು ಮಣ್ಣಿನಲ್ಲಿ ಜೀವಂತ ಹೂಳದ ಹೊರತು ರಾಜ್ಯದ ಜನರಿಗೆ ನೆಮ್ಮದಿ ಇಲ್ಲ'' ಎಂದಿದ್ದಾರೆ.

    ಪವನ್ ಕಲ್ಯಾಣ್ ವಿರುದ್ಧ ಹಲವು ಪ್ರಕರಣ

    ಪವನ್ ಕಲ್ಯಾಣ್ ವಿರುದ್ಧ ಹಲವು ಪ್ರಕರಣ

    ಈ ಘಟನೆ ಬಳಿಕ ಪವನ್ ಕಲ್ಯಾಣ್ ವಿರುದ್ಧ ಹಲವು ಪ್ರಕರಣಗಳನ್ನು ಪೊಲೀಸರು ಹಾಗೂ ಗುಂಟೂರು ಜಿಲ್ಲಾಡಳಿತ ದಾಖಲಿಸಿದೆ. ಬೇಜವಾಬ್ದಾರಿಯುತ ಚಾಲನೆ, ಅಶಾಂತಿ ಸೃಷ್ಟಿಸುವ ಯತ್ನ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ನಿಯಮ ಬಾಹಿರ ಗುಂಪು ಗೂಡುವಿಕೆ ಇನ್ನಿತರೆ ಪ್ರಕರಣಗಳನ್ನು ದಾಖಲಿಸಿರುವುದಲ್ಲದೆ. ಪವನ್ ಕಲ್ಯಾಣ್ ಎಲ್ಲಿಯೂ ಬಹಿರಂಗ ಸಭೆ ಮಾಡದಂತೆ ನಿಬಂಧನೆ ವಿಧಿಸಲಾಗಿದೆ. ಕೆಲವು ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿಬಂಧನೆಯನ್ನೂ ವಿಧಿಸಲಾಗಿದೆ. ಕೆಲವು ದಿನಗಳ ಹಿಂದೆ ಪವನ್ ಕಲ್ಯಾಣ್ ಮಾಡಿರುವ ಭಾಷಣದ ಬಗ್ಗೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಪವನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

    English summary
    Telugu actor and politician Pawan Kalyan creates high drama in Ippattam village Andhra Pradesh. He entered village on roof top of his car.
    Tuesday, November 8, 2022, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X