For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಲೋಕದಲ್ಲಿ ರಾಮ್ ಚರಣ್: 'ಸಿಂಹವನ್ನು ಅನುಸರಿಸಿದ ಮರಿ ಸಿಂಹ'

  |

  ತೆಲುಗು ಖ್ಯಾತ ನಟ ರಾಮ್ ಚರಣ್ ಸದ್ಯ RRR ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ವೈರಸ್ ಅಟ್ಟಹಾಸದ ಕಾರಣ ಸದ್ಯ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದೆ. ಮನೆಯಲ್ಲೆ ಇರುವ ಮಗದೀರ ನಟ ಈಗ ಅಭಿಮಾನಿಗಳ ಜೊತೆ ಮಾತನಾಡಲು, ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರಲು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಹೌದು, ನಟ ರಾಮ್ ಚರಣ್ ಟ್ವಿಟ್ಟರ್ ಗೆ ಪಾದಾರ್ಪಣೆ ಮಾಡಿದ್ದಾರೆ. ಮೆಗಾ ಸ್ಟಾರ್ ಸಾಮಾಜಿಕ ಜಾಲತಾಣಕ್ಕೆ ಕಾಲಿಡುತ್ತಿದ್ದಂತೆ ಅಪ್ಪನ ಬೆನ್ನಲ್ಲೆ ಮಗ ಕೂಡ ಎಂಟ್ರಿ ಕೊಟ್ಟಿದ್ದಾರೆ. ಅನೇಕ ಸಮಯದಿಂದ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದರು. ಆದರೆ ರಾಮ್ ಚರಣ್ ಟ್ವಿಟ್ಟರ್ ಲೋಕದ ಕಡೆ ಬಂದಿರಲಿಲ್ಲ. ಆದರೀಗ ಯುಗಾದಿ ಹಬ್ಬದ ಸಮಯದಲ್ಲಿ ರಾಮ್ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದಾರೆ.

  ರಾಮ್ ಚರಣ್ ಮೊದಲ ಟ್ವೀಟ್

  ರಾಮ್ ಚರಣ್ ಮೊದಲ ಟ್ವೀಟ್

  ರಾಮ್ ಚರಣ್ ಟ್ವಿಟ್ಟರ್ ಖಾತೆ ತೆರೆದು ಮೊದಲ ಟ್ವೀಟ್ ಮಾಡಿದ್ದಾರೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಪವನ್ ಕಲ್ಯಾಣ್ ಅವರಿಂದ ಪ್ರೇರೆಪಿತನಾದ ನಾನು, ಸರ್ಕಾರದ ಶ್ಲಾಘನೀಯ ಪ್ರಯತ್ನಗಳಿಗೆ ನೆರವಾಗಲು ನಾನು ಕೂಡ ಕೊಡುಗೆ ಕೊಡಲು ಬಯಸುತ್ತೇನೆ. ಎಲ್ಲರು ಮನೆಯಲ್ಲಿ ಸುರಕ್ಷಿತರಾಗಿ ಇದ್ದೀರಿ ಎಂದು ಭಾವಿಸುತ್ತೇನೆ" ಎಂದು ರಾಮ್ ಚರಣ್ ಚೊಚ್ಚಲ ಟ್ವೀಟ್ ಮಾಡಿದ್ದಾರೆ.

  ಮಗನನ್ನು ಸ್ವಾಗತಿಸಿದ ಅಪ್ಪ

  ಮಗನನ್ನು ಸ್ವಾಗತಿಸಿದ ಅಪ್ಪ

  ರಾಮ್ ಚರಣ್ ಟ್ವಿಟ್ಟರ್ ಗೆ ಎಂಟ್ರಿ ಕೊಡುತ್ತದ್ದಂತೆ ಅಭಿಮಾನಿಗಳ ಜೊತೆ ಚಿತ್ರರಂಗದ ಗಣ್ಯರು ಸ್ವಾಗತ ಕೋರಿದ್ದಾರೆ. ವಿಶೇಷವಾಗಿ ರಾಮ್ ಚರಣ್ ತಂದೆ ಮೆಗಾ ಸ್ಟಾರ್ ಚಿರಂಜೀವಿ ಮಗನನ್ನು ವಿಶೇಷವಾಗಿ ಸ್ವಾಗತ ಮಾಡಿದ್ದಾರೆ. "ಟ್ವಿಟ್ಟರ್ ಲೋಕಕ್ಕೆ ಸ್ವಾಗತ ಸ್ವಾಗತ, ಸಿಂಹವನ್ನು ಮರಿ ಸಿಂಹ ಅನುಸರಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.

  ಸಾವಿರಾರು ಫಾಲೋವರ್ಸ್

  ಸಾವಿರಾರು ಫಾಲೋವರ್ಸ್

  ನಟ ರಾಮ್ ಚರಣ್ ಯಾವುದೆ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ವೀವ್ ಆಗಿರಲಿಲ್ಲ. ರಾಮ್ ಟ್ವಿಟ್ಟರ್ ಗೆ ಬರಲಿ ಎನ್ನುವುದು ಅಭಿಮಾನಿಗಳ ದೊಡ್ಡ ಆಸೆಯಾಗಿತ್ತು. ಆದರೆ ಇದುವರೆಗೂ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಸದ್ಯ ಎಂಟ್ರಿ ಕೊಡುತ್ತಿದ್ದಂತೆ ಸಾವಿರಾರು ಮಂದಿ ಫಾಲೋ ಮಾಡುತ್ತಿದ್ದಾರೆ.

  ಚಿರಂಜೀವಿ ಕೂಡ ಟ್ವಿಟ್ಟರ್ ಗೆ ಎಂಟ್ರಿ

  ಚಿರಂಜೀವಿ ಕೂಡ ಟ್ವಿಟ್ಟರ್ ಗೆ ಎಂಟ್ರಿ

  ನಟ ಚಿರಂಜೀವಿ ಕೂಡ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯುಗಾದಿ ಹಬ್ಬದ ದಿನ ಮೆಗಾ ಸ್ಟಾರ್ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಚಿರು ಕೂಡ ಇದುವಾರೆಗೂ ಸಾಮಾಜಿಕ ಜಾಲತಾಣ ಬಳಸುತ್ತರಲಿಲ್ಲ. ಆದರೀಗ ಪಾದಾರ್ಪಣೆ ಮಾಡಿದ್ದಾರೆ.

  ಚಿರಂಜೀವಿ ಕುಟುಂಬದಿಂದ ಸರ್ಕಾರಕ್ಕೆ ನೆರವು

  ಚಿರಂಜೀವಿ ಕುಟುಂಬದಿಂದ ಸರ್ಕಾರಕ್ಕೆ ನೆರವು

  ನಟ ಚಿರಂಜೀವಿ ಮತ್ತು ಮಗ ರಾಮ್ ಚರಣ್ ಇಬ್ಬರು ಟ್ವಿಟ್ಟರ್ ಗೆ ಎಂಟ್ರಿ ಕೊಡುತ್ತದ್ದಂತೆ ಕೊರೊನಾ ವೈರಸ್ ಬಗ್ಗೆ ಸುರಕ್ಷತೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೊತೆಗೆ ಸರ್ಕಾರಕ್ಕೆ ಚಿರಂಜೀವಿ ೧ ಕೋಟಿ ನೆರವು ನೀಡುದ್ದಾರೆ. ರಾಮ್ ಚರಣ್ ೭೦ ಲಕ್ಷ ನೆರವು ನೀಡಿದ್ದಾರೆ. ಇನ್ನು ನಟ ಪವನ್ ಕಲ್ಯಾಣ್ ಕೂಡ ಆಂಧ್ರ ಸಿಎಂ ನಿಧಿಗೆ ಕೋಟಿ ನೆರವು ಕೊಟ್ಟಿದ್ದಾರೆ.

  English summary
  Telugu Actor Ram Charan enter to twitet world. Ram Charan first tweet viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X