For Quick Alerts
  ALLOW NOTIFICATIONS  
  For Daily Alerts

  ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ; ಸೋನು ಸೂದ್ ಗೆ ಮೆಗಾಸ್ಟಾರ್ ಹೀಗೆ ಹೇಳಿದ್ದೇಕೆ?

  |

  ನಟ ಸೋನು ಸೂದ್ ಈಗ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಲಾಕ್ ಡೌನ್ ಬಳಿಕ ಸೋನು ಸೂದ್ ಮಾಡಿದ ಮಾನವೀಯ ಕೆಲಸ ಮೆಚ್ಚಿ, ಜನರು ಅವರನ್ನು ದೇವರಂತೆ ಪೂಜಿಸುತ್ತಾರೆ. ತೆಲಂಗಾಣದಲ್ಲಿ ಇತ್ತೀಚಿಗೆ ಸೋನು ಸೂದ್ ಗಾಗಿ ದೇವಸ್ಥಾನವನ್ನೇ ನಿರ್ಮಿಸಿ ಪೂಜಿಸುತ್ತಿದ್ದಾರೆ.

  ಇದೇ ಈಗ ಸೋನು ಸೂದ್ ಗೆ ದೊಡ್ಡ ಸಮಸ್ಯೆಯಾಗಿದೆ. ರಿಯಲ್ ಹೀರೋ ಆಗಿ ಹೊರಹೊಮ್ಮಿರುವ ಸೋನು ಸೂದ್ ಖ್ಯಾತಿಗಳಿಸಿದ್ದು ಖಳನಟನಾಗಿ. ಸಿನಿಮಾದಲ್ಲಿ ಹೀರೋಗಳ ಮುಂದೆ ಅಬ್ಬರಿಸುತ್ತಿದ್ದ ಸೋನು ಸೂದ್ ರಿಯಲ್ ಲೈಫ್ ನಲ್ಲಿ ಹೀರೋ ಆದಮೇಲೆ ವಿಲನ್ ಆಗಿ ಕಾಣಿಸಿಕೊಳ್ಳುವುದು ಕಷ್ಟವಾಗಿದೆ. ಅಲ್ಲದೆ ಸ್ಟಾರ್ ನಟರು ಸೋನು ಸೂದ್ ವಿರುದ್ಧ ನಟಿಸಲು ಭಯಪಡುತ್ತಿದ್ದಾರೆ. ಇದೇ ಕಾರಣಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಸೋನು ಸೂದ್ ಅವರಿಗೆ ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ ಎಂದು ಹೇಳಿದ್ದಾರೆ.

  'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ'ರಿಯಲ್ ಹೀರೋ' ಸೋನು ಸೂದ್ ಗೆ ದೇವಾಲಯ ಕಟ್ಟಿದ ತೆಲಂಗಾಣ ಜನತೆ

  ಸೋನು ಸೂದ್ ಮೇಲೆ ಕೈ ಮಾಡಲು ಹಿಂದೇಟು ಹಾಕಿದ ಚಿರಂಜೀವಿ

  ಸೋನು ಸೂದ್ ಮೇಲೆ ಕೈ ಮಾಡಲು ಹಿಂದೇಟು ಹಾಕಿದ ಚಿರಂಜೀವಿ

  ಸೋನು ಸೂದ್ ಸದ್ಯ ಆಚಾರ್ಯ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಎದುರು ನಟಿಸುತ್ತಿದ್ದಾರೆ. ಆದರೆ ಸೋನು ಸೂದ್ ಎದುರು ನಟಿಸುವುದು ಚಿರಂಜೀವಿಗೂ ದೊಡ್ಡ ಸಮಸ್ಯೆಯಾಗಿದೆ. ಸಿನಿಮಾದಲ್ಲಿ ಸೋನು ಸೂದ್ ಮೇಲೆ ಕೈ ಮಾಡಿದರೆ ಜನ ನಮಗೆ ಶಾಪ ಹಾಕುತ್ತಾರೆ ಎಂದು ಚಿರಂಜೀವಿ ಕೆಲವು ದೃಶ್ಯಗಳನ್ನು ಮಾಡಲು ಹಿಂದೇಟು ಹಾಕಿದ್ದಾರಂತೆ.

  ಸೋನು ಸೂದ್ ಮತ್ತು ಶ್ರದ್ಧಾ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್' ಸೆಲೆಬ್ರಿಟಿಗಳು

  ನೀವು ದೊಡ್ಡ ಸಮಸ್ಯೆ ಆಗಿದ್ದೀರಿ ಎಂದ ಚಿರಂಜೀವಿ

  ನೀವು ದೊಡ್ಡ ಸಮಸ್ಯೆ ಆಗಿದ್ದೀರಿ ಎಂದ ಚಿರಂಜೀವಿ

  ಈ ಬಗ್ಗೆ ಸೋನು ಸೂದ್ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. 'ಆಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಚಿರಂಜೀವಿ ಅವರು ನನಗೆ ಹೊಡೆಯಬೇಕಿತ್ತು. ಆದರೆ ಚಿರಂಜೀವಿ ಹೊಡಯೆಲು ಹಿಂದೇಟು ಹಾಕಿದರು. ಯಾಕೆ ಅಂತ ಕೇಳಿದರೆ, ನೀವು ನಮ್ಮ ಚಿತ್ರದ ಭಾಗವಾಗಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಒಂದು ವೇಳೆ ನಿಮಗೆ ಹೊಡೆದರೆ ಜನ ನಮಗೆ ಶಾಪ ಹಾಕುತ್ತಾರೆ' ಎಂದು ಚಿರಂಜೀವಿ ಹೇಳದರು ಅಂತ ಸೋನು ಸೂದ್ ನೆನಪಿಸಿಕೊಂಡಿದ್ದಾರೆ.

  ಸಿನಿಮಾದ ದೃಶ್ಯ ಬದಲಾಯಿಸಿದ ಚಿತ್ರತಂಡ

  ಸಿನಿಮಾದ ದೃಶ್ಯ ಬದಲಾಯಿಸಿದ ಚಿತ್ರತಂಡ

  ಚಿತ್ರದ ಮತ್ತೊಂದು ದೃಶ್ಯದಲ್ಲಿ ಚಿರಂಜೀವಿ, ಸೋನು ಸೂದ್ ಮೇಲೆ ಕಾಲು ಇಡುವ ದೃಶ್ಯವಿತ್ತಂತೆ. ಈ ದೃಶ್ಯವನ್ನು ಮಾಡಲು ಒಪ್ಪಲಿಲ್ಲವಂತೆ. ಹಾಗಾಗಿ ಆ ದೃಶ್ಯವನ್ನು ಬದಲಾಯಿಸಿ ಚಿತ್ರೀಕರಿಸಲಾಗಿದೆ ಎಂದು ಸೋನು ಸೂದ್ ಹೇಳಿದ್ದಾರೆ. ರಿಯಲ್ ಹೀರೋ ಆಗಿರುವ ಸೋನು ಸೂದ್ ಗೆ ಹೊಡೆದರೆ ಜನರಿಂದ ತೆಗಳಿಸಿಕೊಳ್ಳಬೇಕಾಗುತ್ತೆ ಎಂದು ಸ್ಟಾರ್ ಕಲಾವಿದರು ಸಹ ಭಯಪಡುತ್ತಿದ್ದಾರೆ.

  ವಿಲನ್ ಆಗಿ ನಟಿಸದಿರಲು ನಿರ್ಧರಿಸಿರುವ ಸೋನು ಸೂದ್

  ವಿಲನ್ ಆಗಿ ನಟಿಸದಿರಲು ನಿರ್ಧರಿಸಿರುವ ಸೋನು ಸೂದ್

  ಹಾಗಾಗಿ ಸೋನು ಸೂದ್ ಈಗ ಖಳನಟನ ಪಾತ್ರಗಳನ್ನು ಮಾಡಲು ಹಿಂದೇಟುಹಾಕುತ್ತಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುತ್ತಿದ್ದಾರೆ. ಆದರೆ ಇನ್ಮುಂದೆ ವಿಲನ್ ಪಾತ್ರ ಬಿಟ್ಟು, ಹೀರೋ ಆಗಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.

  English summary
  Actor Sonu Sood reveals Chiranjeevi talks about not able to hit Sonu Sood in Action scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X