For Quick Alerts
  ALLOW NOTIFICATIONS  
  For Daily Alerts

  ಲಕ್ ಇಲ್ಲ ಎಂದು ಹೆಸರು ಬದಲಿಸಿಕೊಂಡ ನಟ ವಿಜಯ್ ದೇವರಕೊಂಡ

  |

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿರುವ ನಟ ವಿಜಯ್ ದೇವರಕೊಂಡ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ವಿಜಯ್ ಸದ್ಯ 'ವರ್ಲ್ಡ್ ಫೇಮಸ್ ಲವರ್' ಆಗಿ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿಗಷ್ಟೆ 'ವರ್ಲ್ಡ್ ಫೇಮಸ್ ಲವರ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಅರ್ಜುನ್ ರೆಡ್ಡಿ' ಸ್ಟೈಲ್ ನಲ್ಲಿಯೆ ಟೀಸರ್ ಇದೆ ಅನೇಕರು ಬೇಸರ ಹೊರಹಾಕುತ್ತಿದ್ದಾರೆ.

  ಇದರ ಜೊತೆಗೀಗ ವಿಜಯ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. 'ವರ್ಲ್ಡ್ ಫೇಮಸ್ ಲವರ್' ಚಿತ್ರಕ್ಕಾಗಿ ವಿಜಯ್ ಹೆಸರು ಬದಲಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'ದೇವರಕೊಂಡ ವಿಜಯ್ ಸಾಯಿ' ಎಂದು ಹೆಸರು ಬದಲಾಸಲಾಗಿದೆ. ಅಂದ್ಹಾಗೆ ದಿಢೀರ್ ಹೆಸರು ಬದಲಾಗಲು ಕಾರಣ ಹಿಂದಿನ ಸಿನಿಮಾಗಳ ಸೋಲು ಎನ್ನುವ ಮಾತು ಕೇಳಿಬರುತ್ತಿದೆ.

  ದೇವರಕೊಂಡ ಹೊಸ ಟೀಸರ್ ನೋಡಿ ಬೇಸರಗೊಂಡ ಪ್ರೇಕ್ಷಕರು: ಅಂತಹದ್ದೇನಿದೆ?ದೇವರಕೊಂಡ ಹೊಸ ಟೀಸರ್ ನೋಡಿ ಬೇಸರಗೊಂಡ ಪ್ರೇಕ್ಷಕರು: ಅಂತಹದ್ದೇನಿದೆ?

  'ಅರ್ಜುನ್ ರೆಡ್ಡಿ' ನಂತರ 'ಗೀತಾ ಗೋವಿಂದಂ' ಸಿನಿಮಾ ಬಿಟ್ಟರೆ ವಿಜಯ್ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ನೋಟಾ, ಟ್ಯಾಕ್ಸಿವಾಲ, ಡಿಯರ್ ಕಾಮ್ರೇಡ್ ಹೀಗೆ ಸಾಲು ಸಾಲು ಸಿನಿಮಾಗಳು ಸೋಲುಂಡಿವೆ. ಹಾಗಾಗಿ ವಿಜಯ್ ದೇವರಕೊಂಡ ಎನ್ನುವ ಹೆಸರಿನಲ್ಲಿ ಲಕ್ ಇಲ್ಲ ಎಂದು ಮುಂದಿನ ಸಿನಿಮಾಗೆ ಹೆಸರು ಬದಲಾಯಿಸಿಕೊಂಡಿದ್ದಾರೆ.

  ಅಂದ್ಹಾಗೆ ವಿಜಯ್ ಹೆಸರು ಬದಲಾಯಿಸಿಕೊಂಡಿದ್ದು ಈಗಲ್ಲ. ಅರ್ಜುನ್ ರೆಡ್ಡಿ ಸಿನಿಮಾ ಸಮಯದಲ್ಲೆ ವಿಜಯ್ ಹೆಸರು ಬದಲಾಗಿತ್ತು. ಅರ್ಜುನ್ ರೆಡ್ಡಿ ಚಿತ್ರದಲ್ಲಿ ವಿಜಯ್ ಹೆಸರು ದೇವರಕೊಂಡ ವಿಜಯ್ ಸಾಯಿ ಅಂತಾನೆ ಇದೆ. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಹಾಗಾಗಿ ವರ್ಲ್ಡ್ ಫೇಮಸ್ ಲವರ್ ಚಿತ್ರದ ನಿರ್ದೇಶಕ ಕ್ರಾಂತಿ ಮಾಧವ್ ಕೂಡ ತಮ್ಮ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೂ ಇದೆ ಹೆಸರು ಹೆಸರು ಇರಲಿ ಎಂದು ಇಟ್ಟಿದ್ದಾರಂತೆ.

  ಇನ್ನು ಹೆಸರು ಬದಲಾದರೆ ಲಕ್ ಬದಲಾಗುತ್ತೆ ಎನ್ನುವ ನಂಬಿಕೆ ನಟ ವಿಜಯ್ ದೇವರಕೊಂಡಗೆ ಇಲ್ಲವಂತೆ. ಆದರೆ ಇದು ನಿರ್ದೇಶಕರ ನಿರ್ಧಾರವಂತೆ. ಅದೇನೆ ಇರಲಿ ಅರ್ಜುನ್ ರೆಡ್ಡಿಯಂತೆ ವರ್ಲ್ಡ್ ಫೇಮಸ್ ಲವರ್ ಸಿನಿಮಾ ಸೂಪರ್ ಹಿಟ್ ಆಗುತ್ತಾ ಕಾದು ನೋಡಬೇಕು.

  English summary
  Telugu famous Actor Vijay Devarakonda changed his name for World Famous Lover. His is now Devarakonda Vijay Sai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X