For Quick Alerts
  ALLOW NOTIFICATIONS  
  For Daily Alerts

  ಅಕಸ್ಮಾತ್ ಆಗಿ RRR ಚಿತ್ರದ ರಿಲೀಸ್ ದಿನಾಂಕ ಬಿಟ್ಟುಕೊಟ್ಟ ನಟಿ ಅಲಿಸನ್

  |

  ಬಾಹುಬಲಿ ಚಿತ್ರದ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡ್ತಿರುವ ಚಿತ್ರ ಆರ್ ಆರ್ ಆರ್. ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿ ಆರ್ ಒಟ್ಟಿಗೆ ಈ ಮೆಗಾ ಸಿನಿಮಾ ತಯಾರಿಸುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿದೆ.

  ಬಾಹುಬಲಿ ಸಿನಿಮಾವನ್ನು ಮೀರಿಸುವಂತೆ ರಾಜಮೌಳಿ ಆರ್‌ಆರ್‌ಆರ್ ಸಿನಿಮಾ ಮಾಡಲಿದ್ದಾರೆ ಎಂಬ ಅಭಿಪ್ರಾಯ ಇದೆ. ಈಗಾಗಲೇ ಟೀಸರ್‌ಗಳ ಮೂಲಕ ಸಂಚಲನ ಸೃಷ್ಟಿಸಿರುವ ಈ ಚಿತ್ರ ಯಾವಾಗ ರಿಲೀಸ್ ಆಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ಲಾಕ್‌ಡೌನ್ ಕಾರಣದಿಂದ ಬಿಡುಗಡೆ ವಿಚಾರದಲ್ಲಿ ಯೋಜನೆಗಳು ಉಲ್ಟಾಪಲ್ಟ ಆಗಿದೆ. ಸದ್ಯಕ್ಕೆ RRR ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಆರ್ ಆರ್ ಆರ್ ಚಿತ್ರದ ನಟಿ ಅಲಿಸನ್ ಅಕಸ್ಮಾತ್ ಆಗಿ ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಆರ್ ಆರ್ ಆರ್

  ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಆರ್ ಆರ್ ಆರ್

  ಇತ್ತೀಚಿಗಷ್ಟೆ ನಿರ್ದೇಶಕ ರಾಜಮೌಳಿ ಆರ್ ಆರ್ ಆರ್ ಸಿನಿಮಾ ಕುರಿತು ಮಾಹಿತಿ ನೀಡಿದ್ದರು. ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಆರಂಭವಾಗಿದೆ ಎಂದು ಫೋಟೋವೊಂದನ್ನು ಹಂಚಿಕೊಂಡಿದ್ದರು. ಆದ ಕಾರಣ ಸಹಜವಾಗಿ ರಿಲೀಸ್ ದಿನಾಂಕದ ಮೇಲೆ ಹೆಚ್ಚಿನ ಕುತೂಹಲ ಹುಟ್ಟಿಕೊಂಡಿತ್ತು.

  RRR ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣ: ಚಿತ್ರ ಹಂಚಿಕೊಂಡ ರಾಜಮೌಳಿ

  ರಿಲೀಸ್ ದಿನಾಂಕ ಹೇಳಿದ ನಟಿ ಅಲಿಸನ್

  ರಿಲೀಸ್ ದಿನಾಂಕ ಹೇಳಿದ ನಟಿ ಅಲಿಸನ್

  ಆರ್ ಆರ್ ಆರ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಐರೀಷ್ ನಟಿ ಅಲಿಸನ್ ಡೂಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಕಸ್ಮಾತ್ ಆಗಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ನಂತರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.

  ಅಕ್ಟೋಬರ್ 8ಕ್ಕೆ ಆರ್ ಆರ್ ಆರ್ ರಿಲೀಸ್?

  ಅಕ್ಟೋಬರ್ 8ಕ್ಕೆ ಆರ್ ಆರ್ ಆರ್ ರಿಲೀಸ್?

  ಆರ್ ಆರ್ ಆರ್ ಚಿತ್ರದ ನಟಿ ಅಲಿಸನ್ ಡೂಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪ್ರಕಾರ, ಅಕ್ಟೋಬರ್ 8 ರಂದು ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. ಈ ಸುದ್ದಿಯನ್ನು ನಟಿ ಅಕಸ್ಮಾತ್ ಆಗಿ ಪ್ರಕಟಿಸಿಬಿಟ್ಟಿದ್ದಾರೆ. ಚಿತ್ರದ ನಟಿಯೇ ಡೇಟ್ ಹೇಳಿದ್ಮೇಲೆ ಅಭಿಮಾನಿಗಳು ಇದೇ ರಿಲೀಸ್ ದಿನಾಂಕ ಎಂದು ಫಿಕ್ಸ್ ಆಗಿದ್ದಾರೆ.

  KGF-2 ಟೀಸರ್ ರಿಲೀಸ್ ಆದ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆದ 'RRR' ಸಿನಿಮಾ: ಕಾರಣವೇನು?

  ಅಂತಾರಾಷ್ಟ್ರೀಯ ಕಲಾವಿದರು ನಟನೆ

  ಅಂತಾರಾಷ್ಟ್ರೀಯ ಕಲಾವಿದರು ನಟನೆ

  ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಜೊತೆ ಆಲಿಯಾ ಭಟ್, ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಅಂತಾರಾಷ್ಟ್ರೀಯ ಕಲಾವಿದರಾದ ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಸಹ ತಾರಬಳಗದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಇನ್ನಿಲ್ಲಾ | Filmibeat Kannada
  English summary
  RRR actress Alison Doody posted on Instagram that The RRR movie will be released on October 8th 2021. Later She deleted that post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X