For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಸಿನಿಮಾ ನೋಡಿ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಎಷ್ಟು ಮಾರ್ಕ್ಸ್ ಕೊಟ್ರು?

  |

  ಅಕ್ಕಪಕ್ಕದ ಚಿತ್ರರಂಗದ ಸೂಪರ್‌ ಸ್ಟಾರ್‌ಗಳೇ 'ಕಾಂತಾರ' ಕಿಚ್ಚಿಗೆ ಫಿದಾ ಆಗಿದ್ದಾರೆ. ಪ್ರಭಾಸ್ ಎರಡು ಬಾರಿ ಸಿನಿಮಾ ನೋಡಿ ಬಹುಪರಾಕ್ ಹೇಳಿದ್ದಾರೆ. ತಮಿಳು ನಟ ಕಾರ್ತಿ ಸಿನಿಮಾ ನೋಡಿ ಬಹಳ ಹೊತ್ತು ಮೈ ಜುಮ್ ಎನ್ನಿಸಿಕೊಡ್ತು ಎಂದಿದ್ದರು. ಇದೀಗ ಕರಾವಳಿ ಚೆಲುವೆ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ನೋಡಿ ಕೊಂಡಾಡಿದ್ದಾರೆ.

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಕನ್ನಡದಲ್ಲೇ 2 ವಾರ ದೇಶ ವಿದೇಶಗಳಲ್ಲಿ ಅದ್ಭುತ ಪ್ರದರ್ಶನ ಕಂಡಿದ್ದ ಸಿನಿಮಾ ಇದೀಗ ಬೇರೆ ಭಾಷೆಗಳಿಗೂ ಡಬ್ ಆಗಿ ಧೂಳೆಬ್ಬಿಸಿದೆ. ರಾಣಾ ದಗ್ಗುಬಾಟಿ, ಧನುಷ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ನಟಿ ಅನುಷ್ಕಾ ಶೆಟ್ಟಿ ಕೂಡ 'ಕಾಂತಾರ' ಸಿನಿಮಾ ನೋಡಿ, ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

   ರಿಷಬ್ ಶೆಟ್ಟಿ ಆಡಿದ ಆ ಮಾತು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ? ರಿಷಬ್ ಶೆಟ್ಟಿ ಆಡಿದ ಆ ಮಾತು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ?

  ದೇಶ ವಿದೇಶದಲ್ಲಿರೋ ಪ್ರೇಕ್ಷಕರಿಗೆ 'ಕಾಂತಾರ' ಸಿನಿಮಾ ಅದ್ಭುತ ಅನುಭವ ನೀಡುತ್ತಿದೆ. ಭಾಷೆ ಗೊತ್ತಿಲ್ಲದವರು, ಕರಾವಳಿಯ ಸಂಸ್ಕೃತಿ, ಆಚರಣೆಗಳ ಬಗ್ಗೆ ತಿಳಿಯದವರು ಸಿನಿಮಾ ನೋಡಿ ಹುಬ್ಬೇರಿಸಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಕರಾವಳಿಯವರೇ ಆಗಿರುವುದರಿಂದ ಅವರಿಗೆ ಸಿನಿಮಾ ಮತ್ತಷ್ಟು ಹತ್ತಿರವಾಗಿದೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅನುಷ್ಕಾ ಶೆಟ್ಟಿ ಟಾಲಿವುಡ್, ಕಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿ ಮೆರೆದರು.

  ಥಿಯೇಟರ್‌ನಲ್ಲೇ 'ಕಾಂತಾರ' ನೋಡಿ- ಅನುಷ್ಕಾ

  ಥಿಯೇಟರ್‌ನಲ್ಲೇ 'ಕಾಂತಾರ' ನೋಡಿ- ಅನುಷ್ಕಾ

  'ಕಾಂತಾರ' ಸಿನಿಮಾ ವೀಕ್ಷಿಸಿದೆ. ಸಂಪೂರ್ಣವಾಗಿ ಸಿನಿಮಾ ಇಷ್ಟವಾಯಿತು, ಪ್ರತಿಯೊಬ್ಬ ನಟ, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. 'ಕಾಂತಾರ' ತಂಡ ನಿಜಕ್ಕೂ ನೀವು ಅದ್ಭುತ. ತೆರೆಮೇಲೆ ಇಂತಹ ಅನುಭವ ನೀಡಿದ್ದಕ್ಕೆ ಧನ್ಯವಾದ. ರಿಷಬ್ ಶೆಟ್ಟಿ ನಿಜಕ್ಕೂ ನೀವು ಅದ್ಭುತ. ದಯವಿಟ್ಟು ಚಿತ್ರಮಂದಿರದಲ್ಲೇ ಎಲ್ಲರೂ ಸಿನಿಮಾ ನೋಡಿ. ಮಿಸ್ ಮಾಡಲೇಬೇಡಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ ಶೆಟ್ಟಿ ಬರೆದುಕೊಂಡಿದ್ದಾರೆ.

  ಮೊದಲ ದಿನಕ್ಕಿಂತ 2ನೇ ದಿನ ಹೆಚ್ಚು ಗಳಿಕೆ ಮಾಡಿದ ಕಾಂತಾರ ಹಿಂದಿ ವರ್ಷನ್; 2 ದಿನದ ಒಟ್ಟು ಕಲೆಕ್ಷನ್ ಎಷ್ಟು?ಮೊದಲ ದಿನಕ್ಕಿಂತ 2ನೇ ದಿನ ಹೆಚ್ಚು ಗಳಿಕೆ ಮಾಡಿದ ಕಾಂತಾರ ಹಿಂದಿ ವರ್ಷನ್; 2 ದಿನದ ಒಟ್ಟು ಕಲೆಕ್ಷನ್ ಎಷ್ಟು?

  ಮೇಡಂ ನೀವು ನಟಿಸೋದು ಯಾವಾಗ?

  ಮೇಡಂ ನೀವು ನಟಿಸೋದು ಯಾವಾಗ?

  ಇನ್ನು ಅನುಷ್ಕಾ ಶೆಟ್ಟಿ 'ಕಾಂತಾರ' ನೋಡಿ ಮೆಚ್ಚಿಕೊಂಡು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ನೀವು ಬೇಗ ಸಿನಿಮಾ ಮಾಡಿ ಮೇಡಂ ಎಂದು ಕಾಮೆಂಟ್ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ನೀವು ಬೇರೆ ಸಿನಿಮಾ ನೋಡಿದ್ದು ಸರಿ. ನಾವು ನಿಮ್ಮನ್ನು ತೆರೆಮೇಲೆ ನೋಡಬೇಕು ಎಂದಿದ್ದಾರೆ. ಇನ್ನು ಸ್ವೀಟಿ ಪೋಸ್ಟ್‌ಗೆ 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡ ಕಾಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.

  ಆಂಧ್ರ, ತೆಲಂಗಾಣದಲ್ಲಿ 2 ಕೋಟಿ ಕಲೆಕ್ಷನ್

  ಆಂಧ್ರ, ತೆಲಂಗಾಣದಲ್ಲಿ 2 ಕೋಟಿ ಕಲೆಕ್ಷನ್

  ತೆಲುಗು ಹಾಗೂ ಹಿಂದಿ ಪ್ರೇಕ್ಷಕರು 'ಕಾಂತಾರ' ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಮೊದಲ ದಿನವೇ ಸಿನಿಮಾ ತೆಲುಗು ರಾಜ್ಯಗಳಲ್ಲಿ 2 ಕೋಟಿಗೂ ಅಧಿಕ ಕಲೆಕನ್ ಮಾಡಿರುವ ಲೆಕ್ಕಾಚಾರ ನಡೀತಿದೆ. ತೆಲುಗು ಸಿನಿಮಾಗಳಿಗೂ ಕನ್ನಡದ 'ಕಾಂತಾರ' ಸಿನಿಮಾ ಟಕ್ಕರ್ ಕೊಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿ ರಿಷಬ್ ಶೆಟ್ಟಿ ಪರ್ಫಾರ್ಮೆನ್ಸ್‌ಗೆ ಹ್ಯಾಟ್ಸಾಪ್ ಹೇಳ್ತಿದ್ದಾರೆ.

  ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ

  ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ

  'ಕಾಂತಾರ' ಚಿತ್ರವನ್ನು ಎಲ್ಲರೂ KGF ಚಿತ್ರಕ್ಕೆ ಹೋಲಿಸಲು ಶುರು ಮಾಡಿದ್ದಾರೆ. ಬಜೆಟ್ ವಿಚಾರದಲ್ಲಿ ಚಿಕ್ಕ ಸಿನಿಮಾ ಆದರೂ ಕಂಟೆಂಟ್ ವಿಚಾರದಲ್ಲಿ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಸೆಳೀತಿದೆ. ಇಂಗ್ಲೀಷ್ ಸಬ್‌ಟೈಟಲ್ ಜೊತೆಗೆ ಕನ್ನಡದಲ್ಲೇ ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಅವರದ್ದೇ ಭಾಷೆಯಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಕಳೆದೆರಡು ದಿನಗಳಿಂದ ಸಿನಿಮಾ ನೋಡಲು ಪ್ರೇಕ್ಷಕರು ಮುಗುಬಿದ್ದಿದ್ದು ಇಂದು ಮತ್ತಷ್ಟು ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ.

  English summary
  Actress Anushka Shetty is all praise for Rishab shetty and the Kantara team. Rishab Shetty Directed Kannada action drama Kantara is unstoppable at the box office. know More.
  Sunday, October 16, 2022, 13:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X