For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿಯ ಜೀವನ ಶೀಘ್ರ ತೆರೆಗೆ

  |

  ದಕ್ಷಿಣ ಭಾರತದ ಹಲವು ನಟಿಯರ ಜೀವನ ಸಿನಿಮಾ ಆಗಿದೆ. ಸಿನಿಮಾ ಆಗಿ ಸೂಪರ್ ಹಿಟ್ ಆಗಿವೆ. ಈಗ ಮತ್ತೊಬ್ಬ ನಟಿಯ ಜೀವನ ಸಿನಿಮಾ ಆಗಲಿಕ್ಕಿದೆ.

  ರನ್ನನ ರಕ್ಷಾಬಂದನ. | Kiccha Sudeep Raksha Bhandan Wishes | Filmibeat Kannada

  ತೆಲುಗು ಸಿನಿರಂಗದಲ್ಲಿ ಒಂದು ಕಾಲದಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ಆದರೆ ಕೇವಲ 30 ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟಿ ಅಗರ್ವಾಲ್ ಜೀವನ ತೆರೆಗೆ ಬರುತ್ತಿದ್ದು, ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

  ದಕ್ಷಿಣ ಭಾರತದ ನಟಿಯರಾದ ಸಾವಿತ್ರಿ, ಸಿಲ್ಕ್ ಸ್ಮಿತಾ ಜೀವನ ಈಗಾಗಲೇ ಸಿನಿಮಾಗಳಾಗಿವೆ. ಸಾವಿತ್ರಿ ಜೀವನ 'ಮಹಾನಟಿ', ಸಿಲ್ಕ್ ಸ್ಮಿತಾ ಜೀವನ ದಿ ಡರ್ಟಿ ಪಿಕ್ಚರ್ ಆಗಿ ತೆರೆ ಕಂಡು ಎರಡೂ ಸಿನಿಮಾಗಳು ಭಾರಿ ದೊಡ್ಡ ಯಶಸ್ಸು ಗಳಿಸಿದವು. ಇದೀಗ ಆರತಿ ಅಗರ್ವಾಲ್ ಜೀವನ ತೆರೆಗೆ ಬರಲಿದೆ.

  ಹಿಂದಿ ಸಿನಿಮಾ ಮೂಲಕ ನಟನೆ ಆರಂಭ

  ಹಿಂದಿ ಸಿನಿಮಾ ಮೂಲಕ ನಟನೆ ಆರಂಭ

  2001 ರಲ್ಲಿ ಹಿಂದಿ ಸಿನಿಮಾ ಮೂಲಕ ನಟನೆ ಆರಂಭಿಸಿದ ಆರತಿ ಅಗರ್ವಾಲ್ ಮಿಂಚಿದ್ದು, ಮೆರೆದಿದ್ದೆಲ್ಲಾ ತೆಲುಗು ಸಿನಿಮಾ ರಂಗದಲ್ಲಿಯೇ. 16 ವರ್ಷದ ನಟನಾ ಜೀವನದಲ್ಲಿ ಒಮ್ಮೆ ಮಾತ್ರ ಅವರು ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ.

  ಎಲ್ಲಾ ಸ್ಟಾರ್ ನಟರಿಗೂ ಆರತಿ ನಾಯಕಿ

  ಎಲ್ಲಾ ಸ್ಟಾರ್ ನಟರಿಗೂ ಆರತಿ ನಾಯಕಿ

  ಆರತಿ ಅಗರ್ವಾಲ್ ನಟನೆ ಪ್ರಾರಂಭಿಸಿದಾಗ ಉಚ್ರಾಯದಲ್ಲಿದ್ದ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್, ನಾಗಾರ್ಜುನ. ಮಹೇಶ್ ಬಾಬು ಗೆ ನಾಯಕಿಯಾಗಿದ್ದವರು, ಬೆಳವಣಿಗೆ ಹಂತದಲ್ಲಿದ್ದ ಪ್ರಭಾಸ್, ಜೂ.ಎನ್‌ಟಿಆರ್, ತರುಣ್, ಉದಯ್ ಕಿರಣ್ ಅವರಿಗೂ ನಾಯಕಿಯಾಗಿದ್ದರು. ಆರತಿ ಅಗರ್ವಾಲ್ ತೆಲುಗಿನ ಅತ್ಯಂತ ಬೇಡಿಕೆಯ ನಟಿಯಾಗಿದ್ದರು.

  ಪ್ರೀತಿಯಲ್ಲಿ ನಿರಾಸೆ ಅನುಭವಿಸಿದ್ದ ಆರತಿ

  ಪ್ರೀತಿಯಲ್ಲಿ ನಿರಾಸೆ ಅನುಭವಿಸಿದ್ದ ಆರತಿ

  ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ, ಸಿನಿಮಾ ರಂಗದಲ್ಲಿ ಸಾಕಷ್ಟು ಬೇಡಿಕೆಯಲ್ಲಿದ್ದ ಆರತಿ ಅಗರ್ವಾಲ್ ಜೀವನ ಕೇವಲ 31 ವಯಸ್ಸಿಗೆ ಅಂತ್ಯವಾಗಿಬಿಟ್ಟಿತು. ಪ್ರೀತಿಯಲ್ಲಿ ನಿರಾಸೆ ಅನುಭವಿಸಿದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಮದುವೆಯಾಗಿ ಅಲ್ಲಿಯೂ ವಿಫಲವಾದರು.

  ಆಪರೇಷನ್‌ಗೆ ಒಳಗಾಗಿದ್ದ ಆರತಿ ಅಗರ್ವಾಲ್

  ಆಪರೇಷನ್‌ಗೆ ಒಳಗಾಗಿದ್ದ ಆರತಿ ಅಗರ್ವಾಲ್

  ಆದರೆ 2015 ರಲ್ಲಿ ತಮ್ಮ ದೇಹತೂಕ ಹೆಚ್ಚಾಗಿದೆಯಂತೆ ಅಮೆರಿಕದ ನ್ಯೂಜೆರ್ಸಿಗೆ ತೆರಳಿ ಲಿಪೋಸಕ್ಷನ್ ಎಂಬ ಆಪರೇಷನ್‌ಗೆ ಒಳಗಾದರು. ಆದರೆ ಆಪರೇಷನ್‌ನಂತರ ಅವರಿಗೆ ಉಸಿರಾಟದ ಸಮಸ್ಯೆ ಉಂಟಾಯಿತು. ಆಪರೇಷನ್ ಆದ ಒಂದೇ ವಾರದಲ್ಲಿ ಹೃದಯಾಘಾತದಿಂದ ಕೇವಲ 31 ವಯಸ್ಸಿಗೆ ಆರತಿ ಜೀವನ ಮುಗಿಸಿದರು.

  English summary
  Actress Arthi Agarwal's life is going to be movie in Tollywood very soon. She was a very successful heroine then she lost life very soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X