ಆಚಾರ್ಯ ಸೆಟ್‌ಗೆ ಬಂದ ಕಾಜಲ್: ನವಜೋಡಿಯನ್ನು ಅಭಿನಂದಿಸಿದ ಮೆಗಾಸ್ಟಾರ್
ಉದ್ಯಮಿ ಗೌತಮ್ ಜೊತೆ ಹೊಸ ಜೀವನ ಆರಂಭಿಸಿದ್ದ ನಟಿ ಕಾಜಲ್ ಅಗರ್‌ವಾಲ್ ಡಿಸೆಂಬರ್ 15 ರಿಂದ ಚಿತ್ರೀಕರಣ ಆರಂಭಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಕಾಜಲ್ ಪಾಲ್ಗೊಂಡಿದ್ದಾರೆ.
ಪತಿ ಗೌತಮ್ ಜೊತೆ ಅಚಾರ್ಯ ಸೆಟ್‌ಗೆ ಆಗಮಿಸಿದ ಕಾಜಲ್ ಅಗರ್‌ವಾಲ್ ಜೋಡಿಯನ್ನು ಮೆಗಾಸ್ಟಾರ್ ಚಿರಂಜೀವಿ ಸ್ವಾಗತಿಸಿ ಅಭಿನಂದಿಸಿದರು. ಇಬ್ಬರಿಗೂ ಹೂಗುಚ್ಛ ನೀಡಿ ಶುಭಾಶಯ ತಿಳಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಜಲ್ ದಂಪತಿಗೆ ಸರ್ಪ್ರೈಸ್ ನೀಡಬೇಕು ಎಂದು ಮೊದಲೇ ನಿರ್ಧರಿಸಿದ್ದ ಆಚಾರ್ಯ ತಂಡ, ಸೆಟ್‌ನಲ್ಲಿ ಕೇಕ್ ಕತ್ತರಿಸಿ ನವಜೋಡಿಗೆ ಶುಭಕೋರಿದರು.

ಮದುವೆ ಬಳಿಕ ಮೊದಲ ಸಿನಿಮಾದ ಚಿತ್ರೀಕರಣ ಆರಂಭಿಸಿರುವ ಕಾಜಲ್‌ಗೆ ಪತಿ ಗೌತಮ್ ಸಾಥ್ ನೀಡಿದರು. ಚಿತ್ರೀಕರಣದ ಸ್ಥಳಕ್ಕೆ ಖುದ್ದು ತಾವೇ ಡ್ರಾಪ್ ಮಾಡಿದರು.
ಅಕ್ಟೋಬರ್ 30 ರಂದು ಗೌತಮ್ ಮತ್ತು ಕಾಜಲ್ ಅಗರ್‌ವಾಲ್ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ವಿವಾಹವಾಗಿದ್ದರು. ಕೊರೊನಾ ಭೀತಿಯಿಂದ ಕೆಲವೇ ಆಪ್ತರು ಮಾತ್ರ ಕಾಜಲ್ ಮದುವೆಯಲ್ಲಿ ಭಾಗಿಯಾಗಿದ್ದರು.

ಮದುವೆ ನಂತರ ನವದಂತಿ ಹನಿಮೂನ್‌ಗಾಗಿ ಮಾಲ್ಡೀವ್ಸ್ ಪ್ರಯಾಣ ಮಾಡಿದ್ದರು. ನಂತರ ಚೆನ್ನೈನ ಲೀಲಾ ಪ್ಯಾಲೇಸ್‌ಗೆ ಭೇಟಿ ಮಾಡಿದರು. ಈ ವೇಳೆ ತಮಿಳಿನಲ್ಲಿ ಹೊಸ ಸಿನಿಮಾವೊಂದಕ್ಕೆ ಸಹಿ ಸಹ ಮಾಡಿದರು.
ಈಗ ಆಚಾರ್ಯ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಕೊರಟಲಾ ಶಿವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ರಾಮ್ ಚರಣ್ ತೇಜ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದ ಪ್ಲಾನ್ ಪ್ರಕಾರ 2021ರ ಬೇಸಿಗೆ ರೆಜೆ ವೇಳೆ ಆಚಾರ್ಯ ತೆರೆಗೆ ಬರಲು ಸಜ್ಜಾಗಿದೆ.


Click it and Unblock the Notifications











