For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಟೆನ್ನಿಸ್ ಆಟಗಾರನ ಜೊತೆ ನಟಿ ಕಾಜಲ್ ಆಗರಲ್ ವಾಲ್ ಡೇಟಿಂಗ್?

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗಲ್ ವಾಲ್ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚಿಗೆ ಕಾಜಲ್ ಗೆ ಸಿನಿಮಾ ಅವಕಾಶಗಳು ಕಮ್ಮಿ ಆಗಿವೆ, ಸ್ಟಾರ್ ನಟರ ಜೊತೆ ಅಭಿನಯಿಸಲು ಸಿನಿಮಾ ಸಿಗುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೆ ಈಗ ಕಾಜಲ್ ಡೇಟಿಂಗ್ ವಿಚಾರ ಚರ್ಚೆಯಾಗುತ್ತಿದೆ.

  ಅಂದ್ಹಾಗೆ ಕಾಜಲ್ ಭಾರತದ ಖ್ಯಾತ ಟೆನ್ನಿಸ್ ಆಟಗಾರನ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಖ್ಯಾತ ಟೆನ್ನಿಸ್ ಆಟಗಾರ ಮತ್ಯಾರು ಅಲ್ಲ ಲಿಯಾಂಡರ್ ಪೇಸ್. ಹೌದು, ಲಿಯಾಂಡರ್ ಪೇಸ್ ಮತ್ತು ಕಾಜಲ್ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.ಮುಂದೆ ಓದಿ...

  ಮದುವೆ ಕುರಿತು ಖಚಿತ ಪಡಿಸಿದ ಕಾಜಲ್ ಅಗರ್ ವಾಲ್!ಮದುವೆ ಕುರಿತು ಖಚಿತ ಪಡಿಸಿದ ಕಾಜಲ್ ಅಗರ್ ವಾಲ್!

  46 ವರ್ಷದ ಲಿಯಾಂಡರ್ ಜೊತೆ 34ರ ಕಾಜಲ್ ಡೇಟಿಂಗ್

  46 ವರ್ಷದ ಲಿಯಾಂಡರ್ ಜೊತೆ 34ರ ಕಾಜಲ್ ಡೇಟಿಂಗ್

  46 ವರ್ಷದ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಇತ್ತೀಚಿಗಷ್ಟೆ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. 30 ವರ್ಷಗಳು ಭಾರತೀಯ ಕ್ರೀಡಾ ಜಗತ್ತಿನಲ್ಲಿ ಸೇವೆ ಸಲ್ಲಿಸಿರುವ ಲಿಯಾಂಡರ್ ಪೇಸ್ ಸದ್ಯ ಪ್ರೀತಿ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಕಾಜಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ. ಅಂದ್ಹಾಗೆ ಲಿಯಾಂಡರ್ ಪೇಸ್ ರಾಜಧಾನಿ ಎಕ್ಸ್ ಪ್ರೆಸ್ ಎನ್ನುವ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

  ಕಮಲ್ ಹಾಸನ್ ಚಿತ್ರದಲ್ಲಿ 80 ವರ್ಷದ ಮುದುಕಿಯಾದ ಸ್ಟಾರ್ ನಟಿಕಮಲ್ ಹಾಸನ್ ಚಿತ್ರದಲ್ಲಿ 80 ವರ್ಷದ ಮುದುಕಿಯಾದ ಸ್ಟಾರ್ ನಟಿ

  ಇಬ್ಬರು ಉತ್ತಮ ಸ್ನೇಹಿತರು

  ಇಬ್ಬರು ಉತ್ತಮ ಸ್ನೇಹಿತರು

  ಕಾಜಲ್ ಮತ್ತು ಲಿಯಾಂಡರ್ ಪೇಸ್ ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿದ್ದಾರೆ. ಅಂದ್ಹಾಗೆ ಇಬ್ಬರು ಅನೇಕ ವರ್ಷಗಳಿಂದ ಉತ್ತಮ ಸ್ನೇಹಿತರು. ಸ್ನೇಹವನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರಂತೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

  ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಲಿಯಾಂಡರ್

  ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಲಿಯಾಂಡರ್

  ಲಿಯಾಂಡರ್ ಪೇಸ್ ಅನೇಕ ವರ್ಷಗಳಿಂದ ರಿಯಾ ಪಿಳ್ಳೈ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಆದರೆ ಇಬ್ಬರು ದೂರ ದೂರ ಆಗಿ ಅನೇಕ ವರ್ಷಗಳೆ ಆಗಿವೆ. ಲಿಯಾಂಡರ್ ಮತ್ತು ರಿಯಾ ಜೋಡಿಗೆ ಅಯ್ಯನ್ ಎನ್ನುವ ಮಗಳು ಇದ್ದಾರೆ. ಮಗಳಿಗಾಗಿ ಇಬ್ಬರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ ರಿಯಾ, ಲಿಯಾಂಡರ್ ಪೇಸ್ ಮತ್ತು ಕುಟುಂಬದ ಮೇಲೆ 2014ರಲ್ಲಿ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದಾರೆ.

  ಇಂಡಿಯನ್-2 ಸಿನಿಮಾದಲ್ಲಿ ಕಾಜಲ್

  ಇಂಡಿಯನ್-2 ಸಿನಿಮಾದಲ್ಲಿ ಕಾಜಲ್

  ಕಾಜಲ್ ಸದ್ಯ ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಮತ್ತು ಅದಿತಿ ರಾವ್ ಅಭಿನಯದ ಹೊಸ ತಮಿಳು ಸಿನಿಮಾದಲ್ಲೂ ಕಾಜಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರಕ್ಕೂ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  South Film industry famous Actress Kajal Aggarwal dating with Leander paes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X