For Quick Alerts
  ALLOW NOTIFICATIONS  
  For Daily Alerts

  ಸಮಂತಾ ಸ್ಪೆಷಲ್ ಸಾಂಗ್ ಮೇಲೆ ಸೀನಿಯರ್ ಹೀರೋಯಿನ್ ಗೀಳು: ಪುಷ್ಪ-2ರಲ್ಲಿ ಓ ಅಂತಾವಾ ಬನ್ನಿ?

  |

  ಮಳೆ ನಿಂತರೂ ಹನಿಗಳು ನಿಲ್ಲಲಿಲ್ಲ ಎಂಬಂತಾಗಿದೆ ಪ್ರಸ್ತುತ 'ಪುಷ್ಪ' ಚಿತ್ರದ ಕಥೆ, ಚಿತ್ರ ಈಗಾಗಲೇ ಬಿಡುಗಡೆಯಾಗಿ 50 ದಿನಗಳು ಕಳೆದಿದೆ. ಜೊತೆಗೆ ಸುಮಾರು 350 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಇನ್ನೊಂದೆಡೆ OTTನಲ್ಲಿ ಬಿಡುಗಡೆಯಾಗಿ ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಇದರ ಕ್ರೇಜ್ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಅದರಲ್ಲೂ ಇತ್ತೀಚೆಗೆ ಶ್ರೀವಳ್ಳಿ... ಹಾಡಿಗೆ ಅಂತೂ ಜನ ಹುಚ್ಚೆದ್ದವರಂತೆ ಸ್ಟೆಪ್ ಗಳನ್ನು ಹಾಕಿ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ರವೀಂದ್ರ ಜಡೇಜಾ, ಸುರೇಶ್ ರೈನಾ, ಡೇವಿಡ್ ವಾರ್ನರ್, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟರ್ ಗಳು ಕೂಡ ಪುಷ್ಪ ಮೋಡಿಗೆ ಒಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಷ್ಟು ದೊಡ್ಡ ಮಟ್ಟದ ಯಶಸ್ಸು ಮತ್ತು ಕ್ರೇಜ್ ಹುಟ್ಟಿ ಹಾಕಿಕೊಂಡ ಚಿತ್ರ ಮತ್ತೊಂದು ಇರಲಾರದು.

  ಪುಷ್ಪ-2 ಚಿತ್ರೀಕರಣ ಯಾವಾಗ?

  ಪುಷ್ಪ-2 ಚಿತ್ರೀಕರಣ ಯಾವಾಗ?

  'ಪುಷ್ಪ' ಚಿತ್ರಕ್ಕೆ ಸಿಕ್ಕಿದ ಭಾರಿ ಯಶಸ್ಸು ಮತ್ತು ಅದರ ಹಣದ ಗಳಿಕೆಯಿಂದ ನಿರ್ಮಾಪಕರು ಮತ್ತು ನಿರ್ದೇಶಕರು ಎಕ್ಸೈಟೆಡ್ ಆಗಿದ್ದಾರೆ.

  ಪುಷ್ಪದ ಮುಂದುವರೆದ ಭಾಗವನ್ನು ಮತ್ತಷ್ಟು ಭಾರಿ ತಾರಾಂಗಣದೊಂದಿಗೆ ಮಾಡುವ ಆಲೋಚನೆ ಈಗ ನಿರ್ಮಾಪಕರದಾಗಿದೆ. ಕೇವಲ ತೆಲುಗು ಮಾತ್ರವಲ್ಲದೆ ಹಿಂದಿ ಆಡಿಯನ್ಸ್‌ ಅನ್ನು ಕೂಡ ಮನಸ್ಸಿನಲ್ಲಿಟ್ಟುಕೊಂಡು ಒಂದಷ್ಟು ಬದಲಾವಣೆಗಳನ್ನು ನಿರ್ದೇಶಕರು ಚಿತ್ರದಲ್ಲಿ ಎರಡನೇ ಭಾಗದಲ್ಲಿ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಏಪ್ರಿಲ್ ನಲ್ಲಿ ಚಿತ್ರೀಕರಣಕ್ಕೆ ಬರಲಿದೆ. ಈ ವರ್ಷದ ಕೊನೆಗೆ ಅಥವಾ 2023ರ ಸಂಕ್ರಾಂತಿಯ ಕಾಣಿಕೆಯಾಗಿ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದ್ದಾರೆ.

  ಸಮಂತಾ ಕಂಬ್ಯಾಕ್ ಆಗಿದ್ದು ಪುಷ್ಪ ಮೂಲಕ!

  ಸಮಂತಾ ಕಂಬ್ಯಾಕ್ ಆಗಿದ್ದು ಪುಷ್ಪ ಮೂಲಕ!

  'ಪುಷ್ಪ' ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಮಿಂಚಲು ಆರಂಭಿಸಿದ್ದಾರೆ.ಇನ್ನೂ ನಿರ್ದೇಶಕರು ಸುಕುಮಾರ್ ಅವರಿಗೆ ಬಾಲಿವುಡ್ ದೊಡ್ಡಮಟ್ಟದ ಆಫರ್ ಗಳನ್ನು ನೀಡುತ್ತಿದೆ. ಇದೇ ಸಮಯದಲ್ಲಿ ಚಿತ್ರದ ಐಟಂ ಸಾಂಗ್ ಒಂದರಲ್ಲಿ ನಟಿಸುವ ಮೂಲಕ ಸಮಂತಾ ಕೂಡ ಭಾರಿ ಸುದ್ದಿಯಾದಳು. ಡಿಸೆಂಬರ್ ಸಮಯದಲ್ಲಿ ನಾಗಚೈತನ್ಯ ಜೊತೆಗಿನ ವಿಚ್ಛೇದನ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವಾಗಲೇ ಚಿತ್ರದಲ್ಲಿನ 'ಊ ಅಂತವಾ ಮಾಮಾ ಊಹೂ ಅಂತವಾ ಮಾಮಾ...' ಹಾಡಿಗೆ ಸ್ಟೆಪ್ ಹಾಕಿದ್ದೆ ತಡ. ಗಣೇಶ್ ಆಚಾರ್ಯ ಕೊರಿಯೋಗ್ರಫಿ ಮಾಡಿದ ಆ ಹಾಡಿನಲ್ಲಿ ಮಾದಕವಾಗಿ ಕುಣಿದ ಸಮಂತಾಳ ಹಾಟ್ ಲುಕ್ಕಿಗೆ ಯುವಕರು ಬಲಿಯಾದರು. ಈ ಹಾಡಿನ ನಂತರ ಸಮಂತಾ ಬಾಲಿವುಡ್ ನಲ್ಲಿ ಕೂಡ ದೊಡ್ಡಮಟ್ಟದ ಬೇಡಿಕೆಯ ನಟಿಯಾದರು. ಈ ಹಾಡಿನ ಕ್ರೇಜ್ ಈಗಲೂ ಕೂಡ ದೊಡ್ಡ ಮಟ್ಟದಲ್ಲೇ ಇದೆ. ಈ ಹಾಡು ಸಮಂತಾಳನ್ನು ನೃತ್ಯಕ್ಕೆ ಫಿದಾ ಆಗಿರುವವರ ಸಾಲಿಗೆ ಹೊಸ ಸೇರ್ಪಡೆ ಅಂದಕಾಲತ್ತಿಲ್ ನಟಿ ಮಾಳವಿಕಾ ಕೂಡ ಈಗ ಸೇರಿಕೊಂಡಿದ್ದಾರೆ.

  ಯಾರು ಈ ಮಾಳವಿಕಾ?

  ಯಾರು ಈ ಮಾಳವಿಕಾ?

  ರವಿಚಂದ್ರನ್ ಅಭಿನಯದ 'ಚೋರ ಚಿತ್ತ ಚೋರ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಮಾಳವಿಕಾ ಆನಂತರ ಕನ್ನಡದಲ್ಲಿ ನಟಿಸಿದ ಮತ್ತೊಂದು ಚಿತ್ರ 'ನೀನೆಂದರೆ ನನಗಿಷ್ಟ' ಆದರೆ ತಮಿಳು- ತೆಲುಗು -ಮಲಯಾಳಂ ನಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಜನಪ್ರಿಯತೆಯನ್ನು ಪಡೆದ ನಟಿ.

  ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಈ ಮಲಯಾಳಿ ಕುಟ್ಟಿ ಸುಕೇಶ್ ಮೆನನ್ ಅವರನ್ನು ಮದುವೆಯಾಗಿದ್ದು ಸುಖಿ ಕುಟುಂಬವನ್ನು ಹೊಂದಿದ್ದಾರೆ.ಸುಮಾರು ಹತ್ತು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಮಾಳವಿಕಾ ಈಗ ತಮಿಳು 'ಗೋಲ್ಮಾಲ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ.

  ಪುಷ್ಪ 2ನಲ್ಲಿ ಕುಣಿಯುವುದಕ್ಕೆ ಅವಕಾಶ ಸಿಕ್ಕಿದರೆ ಸೈ...

  ಪುಷ್ಪ 2ನಲ್ಲಿ ಕುಣಿಯುವುದಕ್ಕೆ ಅವಕಾಶ ಸಿಕ್ಕಿದರೆ ಸೈ...

  'ಪುಷ್ಪ' ಚಿತ್ರದ 'ಉ ಅಂತಾವಾ ಮಾವಾ .. ಊಹೂ ಅಂತಾವಾ ಮಾವ' ಹಾಡು ಸೂಪರ್ ಹಿಟ್ ಆಗಿರುವುದು ಗೊತ್ತೇ ಇದೆ. ಹಿರಿಯ ಮಾಳವಿಕಾ ಇತ್ತೀಚೆಗೆ ಈ ಹಾಡಿನ ಬಗ್ಗೆ ತಮ್ಮ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಉ ಅಂತಾವಾ ಮಾವ .. ಊಹೂ ಅಂತಾವಾ ಮಾವ' ಹಾಡು ಯಾವ ಹಂತದಲ್ಲಿ ಮೂಡಿತ್ತೋ ಗೊತ್ತಿಲ್ಲ ಆದರೆ ಈ ಹಾಡು ಇಡೀ ಸಿನಿ ಲೋಕವನ್ನೇ ಸೂರೆಗೊಂಡಿದೆ. ಪ್ರತ್ಯೇಕಿಸಿ ಯಾವುದೇ ವರ್ಗ ಅಥವಾ ಮಾಸ್ ಅನ್ನು ಲೆಕ್ಕಿಸದೆ ಎಲ್ಲಾ ಹಂತಗಳ ಪ್ರೇಕ್ಷಕರಿಗೆ ಸಂಪರ್ಕ ಹೊಂದಿದೆ. ತೆಲುಗು ಅಲ್ಲದೆ ಇತರ ಭಾಷೆಯ ಪ್ರೇಕ್ಷಕರೂ ಈ ಹಾಡಿಗೆ ಪುಳಕಿತರಾಗಿದ್ದಾರೆ. ಸೆಲೆಬ್ರಿಟಿಗಳು 'ಉ ಅಂತಾವಾ ಮಾವಾ .. ಊಹೂ ಅಂತಾವಾ ಮಾವಾ' ಎಂದು ಸ್ಪೂಫ್ ವಿಡಿಯೋ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

  ಸಮಂತಾ ಸ್ಪೆಷಲ್ ಸಾಂಗ್ ಮೇಲೆ ಹಿರಿಯ ನಾಯಕಿ ಗೀಳು

  ಸಮಂತಾ ಸ್ಪೆಷಲ್ ಸಾಂಗ್ ಮೇಲೆ ಹಿರಿಯ ನಾಯಕಿ ಗೀಳು

  ಆದರೆ, ಈ ಹಾಡಿನ ಕ್ರೇಜ್‌ನೊಂದಿಗೆ ಸಮಂತಾ ಮಾದಕತೆ, ಗ್ಲಾಮರ್ ಡೋಸ್ ನಿಂದ ಐಟಂ ಸಾಂಗ್‌ಗೆ ಆಕರ್ಷಿತರಾಗಿ ರುವ ಪಡ್ಡೆ ಹುಡುಗರು ಪದೇಪದೇ ಥಿಯೇಟರ್ ಕಡೆ ಹೋಗಿ ಹಾಡನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಇಂಥ ಬಂಪರ್ ಕ್ರೇಜ್ ಹೊಂದಿರುವ ಈ ಹಾಡಿನ ಮೇಲೆ ನಾಯಕಿ ಮಾಳವಿಕಾ ಕಣ್ಣು ಕೂಡ ಬಿದ್ದಿದೆ.

  ಒಂದು ಕಾಲದಲ್ಲಿ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಮಾಳವಿಕಾಳ ಅಂದಚೆಂದಕ್ಕೆ, ಸೌಂದರ್ಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದರು. ಇತ್ತೀಚೆಗೆ ತೆಲುಗಿನ 'ಅಲಿತೋ ಸರದಾಗ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಳವಿಕಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ "ತಾನು ಉ ಅಂತಾವಾ ಮಾವಾ ಹಾಡಿಗೆ ಫಿದಾ ಆಗಿರುವುದಾಗಿ" ಹೇಳಿದ್ದಾರೆ. ಅಲ್ಲದೆ "ಪುಷ್ಪ 2ನಲ್ಲಿ ಇಂತಹದೇ ಗ್ಲಾಮರಸ್ ಹಾಡಿನಲ್ಲಿ ಆಡುವ ಅವಕಾಶ ಸಿಕ್ಕಿದರೆ ತಾನು ಕುಣಿಯುವುದಕ್ಕೆ ಸಿದ್ಧಳಾಗಿದ್ದೇನೆ" ಅಂತ ಅದೇ ವೇದಿಕೆ ಮೇಲೆ ಆಕೆ ಹೇಳಿದ್ದಾಳೆ. ಒಟ್ಟಿನಲ್ಲಿ ಹೊಸ ನಟಿಯರು ಮಾತ್ರವಲ್ಲ ಹಳೆಯ ನಟಿಯರು ಕೂಡ ಈಗ ತಮ್ಮ ಗ್ಲಾಮರ್ ಡೋಸ್ ಇಂದ ಪಡ್ಡೆಗಳ ಮನಸ್ಸು ಗೆಲ್ಲಲು ಸೈ ಎನ್ನುತ್ತಿದ್ದಾರೆ.

  English summary
  Actress Malavika expressed her desire to dance for puspha-2 item song.After getting married she stopped acting, but now after 10 years she returned to silver screen with Tamil movie and now acting in many movies.
  Saturday, February 12, 2022, 12:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X