Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಾವೂ ಚಪ್ಪಲಿ ತೋರಿಸಬಲ್ಲೆವು: ಪವನ್ ಕಲ್ಯಾಣ್‌ಗೆ ನಟಿ, ರಾಜಕಾರಣಿ ಎಚ್ಚರಿಕೆ
ಭಾರಿ ಸಂಖ್ಯೆಯ ಅಭಿಮಾನಿ ವರ್ಗ ಹೊಂದಿರುವ ನಟ ಪವನ್ ಕಲ್ಯಾಣ್ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಜನಸೇನಾ ಪಕ್ಷ ಕಟ್ಟಿರುವ ಪವನ್ ಕಲ್ಯಾಣ್, ಇತ್ತೀಚೆಗಷ್ಟೆ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಜೊತೆ ಕೈಜೋಡಿಸಿದ್ದಾರೆ.
ಸಿನಿಮಾದ ಸ್ಟಾರ್ ನಾಯಕ ನಟನಾಗಿರುವ ಪವನ್ ಕಲ್ಯಾಣ್ ರಾಜಕೀಯವನ್ನೂ ತುಸು ಸಿನಿಮೀಯವಾಗಿಯೇ ಮಾಡುತ್ತಿದ್ದಾರೆ. ಹಠಾತ್ ಧರಣಿಗಳು, ಗ್ರಾಮ ಭೇಟಿಗಳು, ಭಾವುಕ ಭಾಷಣಗಳು ಅಥವಾ ವೀರಾವೇಷದ ಭಾಷಣಗಳು, ಸಿನಿಮೀಯ ಶೈಲಿಯಲ್ಲಿ ಎಂಟ್ರಿ ನೀಡುವುದು, ಸಿನಿಮಾ ಮಾದರಿಯಲ್ಲಿಯೇ ವಿರೋಧಿಗಳಿಗೆ ಎಚ್ಚರಿಕೆಗಳನ್ನು ನೀಡುವುದೆಲ್ಲ ಮಾಡುತ್ತಿದ್ದಾರೆ.
ಆಡಳಿತ ಪಕ್ಷದವರು ಸಹ ಪವನ್ ಕಲ್ಯಾಣ್ ಅನ್ನು ಗಂಭೀರವಾಗಿ ಪರಿಗಣಿಸುತ್ತಲೇ ಬಂದಿದ್ದು, ಪವನ್‌ರ ಪ್ರತಿ ಹೇಳಿಕೆಗೂ ಪ್ರತಿಕ್ರಿಯೆಗಳನ್ನು ನೀಡುತ್ತಾ ಬಂದಿದ್ದಾರೆ. ಅದರಲ್ಲಿಯೂ ನಟಿ, ರಾಜಕಾರಣಿ ಎರಡೂ ಆಗಿರುವ ರೋಜಾ ಅಂತೂ ಪವನ್ ಕಲ್ಯಾಣ್ ಮೇಲೆ ಅವಕಾಶ ಸಿಕ್ಕಾಗೆಲ್ಲ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಪವನ್ ಕಲ್ಯಾಣ್, ರಾಜಕಾರಣಿಯೇ ಅಲ್ಲ ಆತನೊಬ್ಬ ರೌಡಿ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಪಕ್ಷದ ಸಭೆಯೊಂದರಲ್ಲಿ ಮಾನಾಡಿದ್ದ ನಟ ಪವನ್ ಕಲ್ಯಾಣ್, ತಮ್ಮನ್ನು ಭ್ರಷ್ಟನೆಂದು ಆಡಳಿತ ಪಕ್ಷದವರು ಮಾಡುವ ಆರೋಪಗಳಿಗೆ ಲೆಕ್ಕ ಸಮೇತ ಉತ್ತರ ನೀಡಿ, ಇನ್ನೊಮ್ಮೆ ನನ್ನನ್ನು ಭ್ರಷ್ಟ ಎಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಧರಿಸಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ತೋರಿಸಿದ್ದರು. ಪವನ್‌ರ ಈ ವರ್ತನೆ ಬಹಳ ಚರ್ಚೆಯಾಗಿತ್ತು. ಇದೀಗ ಆಡಳಿತ ಪಕ್ಷದ ಸದಸ್ಯೆ ನಟಿ, ರಾಜಕಾರಣಿ ರೋಜಾ, ಪವನ್‌ಗೆ ತಿರುಗೇಟು ನೀಡಿದ್ದಾರೆ.

ನಮಗೂ ಚಪ್ಪಲಿ ತೋರಿಸಲು ಬರುತ್ತೆ: ರೋಜಾ
ನಾವು, ಪವನ್ ಕಲ್ಯಾಣ್ ಮಾಡುತ್ತಿರುವ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದೇವೆ ಅದಕ್ಕೆ ಪವನ್ ಕಲ್ಯಾಣ್‌ಗೆ ನಮ್ಮ ಮೇಲೆ ಕೋಪ. ಎರಡು ಕಡೆ ಚುನಾವಣೆಗೆ ನಿಂತು ಎರಡೂ ಕಡೆಯುವ ಸೋತಿರುವ ಅವರಿಗೇ ಅಷ್ಟು ಸಿಟ್ಟಿದ್ದರೆ, 150 ಕ್ಕೂ ಹೆಚ್ಚು ಕಡೆ ಗೆದ್ದಿರುವ ನಮಗೆ ಎಷ್ಟು ಕೋಪ ಬರಬಹುದು. ನಮಗೂ ಚಪ್ಪಲಿ ಕೈಗೆತ್ತಿಕೊಳ್ಳಲು ಬರುತ್ತದೆ. ನಾವೂ ಚಪ್ಪಲಿ ತೋರಿಸಬಲ್ಲೆವು. ಹಾಗೆ ಮಾಡಿದರೆ ಪವನ್ ಕಲ್ಯಾಣ್ ಪರಿಸ್ಥಿತಿ ಏನಾಗಬಹುದು'' ಎಂದಿದ್ದಾರೆ ನಟಿ, ರಾಜಕಾರಣಿ ರೋಜ.

'ಪವನ್ ಕಲ್ಯಾಣ್‌ಗೆ ರಾಜಕೀಯದಲ್ಲಿ ದೂರದೃಷ್ಟಿ ಇಲ್ಲ'
ಪವನ್ ಕಲ್ಯಾಣ್‌ಗೆ ರಾಜಕೀಯದಲ್ಲಿ ದೂರದೃಷ್ಟಿ ಎಂಬುದಿಲ್ಲ. ಆತ ಮಾಡುವ ಕೆಲಸಗಳು ಯಾರಿಗೂ ಅರ್ಥವಾಗುವುದಿಲ್ಲ. ಚಂದ್ರಬಾಬು ಪವನ್ ಮೇಲೆ ಮೋಡಿ ಮಾಡಿದ್ದಾನೆ. ಯಾವುದೇ ಕೆಲವು ಚಾನೆಲ್‌ಗಳು ಪವನ್‌ಗೆ ಪಬ್ಲಿಸಿಟಿ ಕೊಡುತ್ತಿವೆ ಹಾಗಾಗಿ ಹೀಗೆಯೇ ಮುಂದುವರೆದುಬಿಡೋಣ ಎಂದು ಪವನ್ ಅಂದುಕೊಂಡಿದ್ದಾನೆ. ಮೊನ್ನೆ ಅವನ ಪರ್ಯಟನೆ ನೋಡಿದೆ. ಕೆಟ್ಟದಾಗಿ ಹೇರ್‌ಸ್ಟೈಲ್, ರೌಡಿಗಳ ರೀತಿ ಬಟ್ಟೆ ಹಾಕಿಕೊಂಡು, ಕಾರಿನ ಮೇಲೆ ಎರಡು ಕಾಲು ಚಾಚಿಕೊಂಡು ಕೂತಿದ್ದಾನೆ. ರಾಜಕೀಯ ನಾಯಕರು ಇರುವ ರೀತಿಯಾ ಇದು?'' ಎಂದು ರೋಜಾ ಪ್ರಶ್ನಿಸಿದ್ದಾರೆ.

'ಯಾರಿಗಾದರೂ ಅಪಘಾತವಾಗಿದ್ದರೆ ಏನು ಗತಿ?'
ಪರ್ಯಟನೆ ವೇಳೆ ಪವನ್ ಕಲ್ಯಾಣ್ ಬಹಳ ಬೇಜವಾಬ್ದಾರಿ ತೋರಿಸಿದ್ದಾರೆ. ಅಷ್ಟು ವೇಗವಾಗಿ ಕಾರಿನಲ್ಲಿ ಹೋದರೆ ಹೇಗೆ? ಯಾರಿಗಾದರೂ ಅಪಘಾತವಾದರೆ ಏನು ಪರಿಸ್ಥಿತಿ? ಎಷ್ಟು ಜೀವಗಳು ಬಲಿಯಾಗುತ್ತವೆ. ಈಗ ಏನಾದರೂ ನಿಜವಾದ ಸಮಸ್ಯೆ ಇದೆಯೇ? ಸರಕಾರಿ ಜಾಗ ಒತ್ತುವರಿ ಮಾಡಿ ಗೋಡೆ ನಿರ್ಮಿಸಿದರೆ ನೋಟಿಸ್ ನೀಡಿ ಕೆಡವುತ್ತಾರೆ. ಇದೆಲ್ಲವನ್ನೂ ಪ್ರದರ್ಶಿಸುವ ಅಗತ್ಯವಿದೆಯೇ? ಸಂತ್ರಸ್ಥರಿಗೆ 1 ಲಕ್ಷ ಕೊಡಬೇಕಾಗಿತ್ತಾ? ಎಂದು ರೋಜಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ಯಾಕೇಜ್‌ಗೋಸ್ಕರ ಪವನ್ ಹೀಗೆ ಮಾಡುತ್ತಿದ್ದಾರೆ: ರೋಜಾ
ಪವನ್ ಕಲ್ಯಾಣ್ ಜವಬ್ದಾರರಾಗಿದ್ದರೆ, ಕಂದುಕೂರು ಸಭಾಭವನದಲ್ಲಿ ಮಡಿದವರ ಕುಟುಂಬಸ್ಥರ ಬೆಂಬಲಕ್ಕೆ ನಿಲ್ಲಲಿ. ಚಂದ್ರಬಾಬು ಆಡಳಿತದಿಂದ ಎಂಟು ಜನ ಸತ್ತರೆ ಅವರ ಬಗ್ಗೆ ಒಂದೇ ಒಂದು ಮಾತೂ ಆಡುವುದಿಲ್ಲ. ಆ ಎಂಟು ಕುಟುಂಬಗಳನ್ನು ಭೇಟಿ ಮಾಡಿ. ಅವರಿಗೆ ಆರ್ಥಿಕ ನೆರವು ನೀಡಿ ಬೆಂಬಲಿಸಿ. ಅಕ್ರಮ ಕಟ್ಟಡಕ್ಕೆ ಕೊಡುವ ಮೌಲ್ಯ, ಮನುಷ್ಯರ ಪ್ರಾಣಕ್ಕೆ ಕೊಡಬೇಕಲ್ಲವೇ? ಕೇವಲ ಪ್ಯಾಕೇಜ್‌ಗಾಗಿ ಪವನ್ ಕಲ್ಯಾಣ್ ನಾಟಕ ಆಡುತ್ತಿದ್ದಾರೆ ಎಂದು ರೋಜಾ ಟೀಕೆ ಮಾಡಿದ್ದಾರೆ. ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದಾಗಿನಿಂದಲೂ ಆಂಧ್ರದ ಆಡಳಿತ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯುತ್ತಿದ್ದು, ಸತತ ಪ್ರತಿಭಟನೆಗಳು, ಕಟು ಟೀಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಆಡಳಿತ ಪಕ್ಷದ ಸದಸ್ಯರೂ ಸಹ ಪವನ್ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.