Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಹ್ಯಾಟ್ರಿಕ್ ಸೋಲಿನ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ನಟಿ ಪೂಜಾ ಹೆಗಡೆ: ಟ್ರೋಲಿಗರಿಗೆ ಚಾಟಿ ಏಟು?
ಕಾನ್ ಚಿತ್ರೋತ್ಸವದಲ್ಲಿ ಈ ಬಾರಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಪೂಜಾ ಹೆಗಡೆ ಪಾಲ್ಗೊಂಡಿದ್ದಾರೆ. ತಮ್ಮ ವಿಭಿನ್ನ ರೀತಿಯ ಡಿಸೈನರಿ ಡ್ರೆಸ್‌ಗಳ ಮೂಲಕ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಸದ್ಯ ಕಾನ್ ಚಿತ್ರೋತ್ಸವದಲ್ಲಿ ನಟಿ ಪೂಜಾ ಹೆಗಡೆ ಫಿಲ್ಮ್ ಕಂಪ್ಯಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹ್ಯಾಟ್ರಿಕ್ ಸೋಲುಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಪೂಜಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುಂಡಿದ್ದನ್ನು ಟ್ರೋಲ್ ಮಾಡಿದ್ದವರಿಗೆ ನೇರವಾಗಿಯೇ ಖಡಕ್ ಉತ್ತರ ನೀಡಿದ್ದಾರೆ.
ಪೂಜಾ ಹೆಗೆಡೆ ಅಭಿನಯಿಸಿದ ಇತ್ತೀಚಿಗಿನ ಚಿತ್ರಗಳಾದ 'ರಾಧೆ ಶ್ಯಾಮ್', 'ಬೀಸ್ಟ್', 'ಆಚಾರ್ಯ' ಸಿನಿಮಾಗಳು ಅಷ್ಟಾಗಿ ಸಕ್ಸಸ್ ಕಾಣಲಿಲ್ಲ. ಹೀಗಾಗಿ ಈ ಮೂರು ಸಿನಿಮಾಗಳು ಪೂಜಾ ಹೆಗಡೆಗೆ ಈ ವರ್ಷದ ಆರಂಭದಲ್ಲೇ ಪ್ಲಾಪ್ ಸಿನಿಮಾಗಳ ಲಿಸ್ಟ್‌ಗೆ ಸೇರಿದವು. ಸದ್ಯ ಈ ಎಲ್ಲಾ ಸಿನಿಮಾಗಳ ಪ್ಲಾಪ್ ಕುರಿತು ಟ್ರೋಲ್ ಹಾಗೂ ಕಮೆಂಟ್ ಮಾಡುತ್ತಿದ್ದವರಿಗೆ ಪೂಜಾ ಹೆಗಡೆ ಮೊದಲ ಪ್ರತಿಕ್ರಿಯೆ ನೀಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ.

ಕಮೆಂಟ್ ಮಾಡಿದವರಿಗೆ ಮಾತಿನಲ್ಲಿ ಉತ್ತರ ಕೊಟ್ಟ ಪೂಜಾ
ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿರುವ ನಟಿ ಪೂಜಾ ಹೆಗಡೆ ಅಲ್ಲಿನ ಸಂದರ್ಶನವೊಂದರಲ್ಲಿ ತಮ್ಮ ಪ್ಲಾಪ್ ಸಿನಿಮಾಗಳ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ. "ಇದು ಆಟದ ಭಾಗ ಅಷ್ಟೇ, ನಾನು ಆರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದೇನೆ. ಅದರ ಬಗ್ಗೆ ನನಗೆ ಹೆಮ್ಮೆಯಿದೆ. ಆ ರೀತಿಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಪ್ರತಿಯೊಂದು ಚಿತ್ರಕ್ಕೂ ಅದರದ್ದೇ ಆದ ಹಣೆ ಬರಹವಿರುತ್ತದೆ. ಸೂಪರ್ ಹಿಟ್ ಆದ ಸಿನಿಮಾಗಳ ಬಗ್ಗೆ ನಾನು ಸಂತಸ ಪಡುತ್ತೇನೆ. ಅದರ ಬಗ್ಗೆ ನಾನು ಎಷ್ಟು ಹೆಮ್ಮೆ ಪಡುತ್ತೇನೆ ಎಂದರೆ, ಸೋತ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳಬೇಕು.' ಎಂದಿದ್ದಾರೆ.

'ಪ್ರತಿ ಚಿತ್ರದಲ್ಲಿ ನಾನು ಏನು ಮಾಡಿದ್ದೇನೆ ನನಗೆ ಗೊತ್ತಿದೆ'
"ನನ್ನ ವೃತ್ತಿಯನ್ನು ನಾನು ಅವಮಾನಿಸುವುದಿಲ್ಲ. ಹಾಗೆಯೇ ಪ್ರತಿ ಚಿತ್ರದಲ್ಲೂ ನಾನು ಏನು ಮಾಡಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತಿದೆ. 'ರಾಧೆ ಶ್ಯಾಮ್', ಸಿನಿಮಾದಲ್ಲಿ ಏಕೆ ನಟಿಸಿದೆ ಎಂದರೆ ಅದರಲ್ಲಿ ನನ್ನ ಪಾತ್ರ ಚೆನ್ನಾಗಿತ್ತು. ನಾನು ನಟಿಸಬೇಕಾದ ಸಿನಿಮಾ ಅದು ಹಾಗಾಗಿ ನಟಿಸಿದೆ. ಇನ್ನು 'ಆಚಾರ್ಯ' ಸಿನಿಮಾ, ಅದರಲ್ಲಿ ನನ್ನದು ಅತಿಥಿ ಪಾತ್ರ ಆ ಪಾತ್ರದಲ್ಲಿ ನಾನು ಹಳ್ಳಿ ಹುಡುಗಿಯಾಗಿದ್ದೆ ಆ ಪಾತ್ರವು ನನಗೆ ಇಷ್ಟವಾಯಿತು. 'ಬೀಸ್ಟ್' ಸಿನಿಮಾದ ಸಾಂಗ್‌ಗಳು ಹಿಟ್ ಆಗಿದೆ. ನನಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರ 'ಡಾಕ್ಟರ್' ಸಿನಿಮಾ ಇಷ್ಟವಾಗಿತ್ತು. ಹೀಗಾಗಿ ಈ ಸಿನಿಮಾವನ್ನು ಮಾಡಿದೆ." ಎಂದು ಖಡಕ್ ಉತ್ತರ ನೀಡಿದ್ದಾರೆ.

ಪೂಜಾ ಹೆಗಡೆಯ ಬಿಗ್ ಬಜೆಟ್‌ನ 3 ಪ್ಲಾಪ್ ಚಿತ್ರಗಳು
ನಟಿ ಪೂಜಾ ಹೆಗಡೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಸಿನಿ ಕ್ಷೇತ್ರಕ್ಕೆ ಬಂದು 10 ವರ್ಷಗಳೆ ಕಳೆದಿದ್ದು, ತಮ್ಮ ಸಿನಿ ಪಯಣದಲ್ಲಿ ಹಲವು ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿದ್ದಾರೆ. ಆದರೆ, ಈ ವರ್ಷದ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ರಿಲೀಸ್ ಆದ ಪೂಜಾ ಅಭಿನಯದ ಸಿನಿಮಾಗಳು ಭಾರೀ ಸೋಲು ಕಂಡಿವೆ. ಮಾರ್ಚ್ 11 ರಂದು ತೆರೆಕಂಡ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಸಿನಿಮಾ ಕೂಡ ಪೂಜಾಗೆ ಅಷ್ಟಾಗಿ ಯಶಸ್ಸು ತಂದು ಕೊಡಲಿಲ್ಲ. ಇದಾದ ಬಳಿಕ ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಮಾರ್ಚ್ 13 ರಂದು ರಿಲೀಸ್ ಆಗಿತ್ತು. ಆದರೆ, ಅದು ಕೂಡ ನಿರೀಕ್ಷೆಯಂತೆ ಪಾಸ್ ಆಗದೇ ಪ್ಲಾಪ್ ಆಯಿತು. ಇದಾದ ಬಳಿಕ 'ಆಚಾರ್ಯ' ಸಿನಿಮಾ ಏಪ್ರಿಲ್ 29 ರಂದು ರಿಲೀಸ್ ಆಯ್ತು. ಇದು ಕೂಡ ಸಕ್ಸಸ್ ಮುಖ ಕಾಣಲಿಲ್ಲ. ಈ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಪೂಜಾ ಹೆಗಡೆಯ ಪ್ಲಾಪ್ ಸಿನಿಮಾಗಳ ಪಟ್ಟಿಗೆ ಸೇರಿದವು.

ಗುಲಾಬಿ ಬಣ್ಣದ ಗೌನ್‌ನಲ್ಲಿ ನಟಿ ಪೂಜಾ ಹೆಗಡೆ
2022 ರ ಕಾನ್ ಚಿತ್ರೋತ್ಸವದಲ್ಲಿ ನಟಿ ಪೂಜಾ ಹೆಗಡೆ ಕೂಡ ಭಾಗಿಯಾಗಿದ್ದಾರೆ. ಈಗಾಗಲೇ ಕಾನ್ ಫೆಸ್ಟಿವಲ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಹಾಗೂ ಇಂದು ಭಾರತದ ತಾರೆಯರು ಕಾನ್ ಚಿತ್ರೋತ್ಸವದಲ್ಲಿ ಜಗಮಗಿಸಿದ್ದಾರೆ. ನಟಿ ಪೂಜಾ ಹೆಗಡೆ ಕೂಡ ಗುಲಾಬಿ ಬಣ್ಣದ ಗೌನ್ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ವೈರೈಟಿ ಡ್ರೆಸ್‌ಗಳನ್ನು ಧರಿಸಿ ಕಾನ್ ಚಿತ್ರೋತ್ಸವದಲ್ಲಿ ನಟಿ ಪೂಜಾ ಹೆಗಡೆ ಮಿಂಚಿದ್ದಾರೆ. ಸದ್ಯ ತಮ್ಮೆಲ್ಲಾ ಪೋಟೊಗಳನ್ನು ಪೂಜಾ ಹೆಗಡೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪೋಟೊ ನೋಡಿದ ಅಭಿಮಾನಿಗಳು ಬಗೆ ಬಗೆಯ ಕಮೆಂಟ್‌ಗಳನ್ನು ಹಾಕಿ ಪೂಜಾ ಹೆಗಡೆಯನ್ನು ಕೊಂಡಾಡುತ್ತಿದ್ದಾರೆ.