For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ ಮಾತಿಗೆ ನಾಚಿ ನೀರಾದ ನಟಿ ರೇಖಾ

  |

  ನಿನ್ನೆ ಎ ಎನ್ ಆರ್ ನ್ಯಾಷನಲ್ ಅವಾರ್ಡ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ರೇಖಾ ಭಾಗಿಯಾಗಿದ್ದರು. ಈ ಪ್ರಶಸ್ತಿಯನ್ನು ಅಕ್ಕಿನೇನಿ ಕುಟುಂಬದಿಂದ ನೀಡಲಾಗುತ್ತಿದ್ದು, ಜೀವಮಾನ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ಈ ಗೌರವ ನೀಡಲಾಗುತ್ತಿದೆ.

  ಈ ಬಾರಿ ಈ ಪ್ರಶಸ್ತಿಯನ್ನು ನಟಿ ರೇಖಾ ಹಾಗೂ ಶ್ರೀದೇವಿರಿಗೆ ಕೊಡಲಾಗಿದೆ. ಶ್ರೀದೇವಿ ಪರವಾಗಿ ಅವರ ಪತಿ ಬೋನಿ ಕಪೂರ್ ಈ ಪ್ರಶಸ್ತಿ ಸ್ವೀಕರಿದ್ದಾರೆ. ಈ ಇಬ್ಬರು ನಟಿಯರು ತೆಲುಗು ಚಿತ್ರರಂಗದಿಂದ ತಮ್ಮ ಸಿನಿ ಪಯಣ ಶುರು ಮಾಡಿ, ನಂತರ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದಾರೆ.

  ನಾಗಾರ್ಜುನ ಮಗನ ಜೊತೆ ಸಿನಿಮಾ ಮಾಡಲ್ಲ ಎಂದ ಪೂಜಾ ಹೆಗ್ಡೆನಾಗಾರ್ಜುನ ಮಗನ ಜೊತೆ ಸಿನಿಮಾ ಮಾಡಲ್ಲ ಎಂದ ಪೂಜಾ ಹೆಗ್ಡೆ

  ಈ ಕಾರ್ಯಕ್ರಮದಲ್ಲಿ ನಟ ಅಕ್ಕಿನೇನಿ ನಾಗಾರ್ಜುನ ಎರಡು ಪ್ರಶ್ನೆ ಕೇಳಿದರು. ಎರಡನೇ ಪ್ರಶ್ನೆ ತುಂಬ ಕಷ್ಟ ಅಂತ ಹೇಳಿ ರೇಖಾ ಮುಂದೆ ಆ ಪ್ರಶ್ನೆ ಇಟ್ಟರು. ''ನೀವು ಇಷ್ಟೊಂದು ಅಂದವಾಗಿ ಹೇಗಿದ್ದೀರಿ.?'' ಇದು ಅನೇಕರ ಪ್ರಶ್ನೆಯಾಗಿದೆ ಎಂದರು.

  ನಾಗಾರ್ಜುನ ಮಾತಿಗೆ ಏನು ಉತ್ತರ ಹೇಳಬೇಕು ತಿಳಿಯದ ರೇಖಾ ನಾಚಿ ನೀರಾದರು. ತಮ್ಮ ಕೈನಿಂದ ಮುಖ ಮುಚ್ಚಿಕೊಂಡರು. ಬಳಿಕ ರೇಖಾ ಸೌಂದರ್ಯವನ್ನು ವರ್ಣಿಸಿದ ನಾಗಾರ್ಜುನ ನೀವು ಇಂಡಿಯನ್ ಸಿನಿಮಾದ ದೀವಾ. ವಯಸ್ಸಿನ ಮಿತಿ ಇಲ್ಲದ ಸೌಂದರ್ಯವತಿ. ಎಂದರು.

  ನಟ ನಾಗಾರ್ಜುನ ಫಾರ್ಮ್ ಹೌಸಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆನಟ ನಾಗಾರ್ಜುನ ಫಾರ್ಮ್ ಹೌಸಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

  ಭಾರತ ಚಿತ್ರರಂಗದ ಅಂದದ ನಟಿಯರಲ್ಲಿ ರೇಖಾ ಪ್ರಮುಖರು. ವಯಸ್ಸು 65 ದಾಟಿದರೂ, ಅವರ ಸೌಂದರ್ಯ ಕಡಿಮೆ ಆಗಿಲ್ಲ.

  English summary
  Actress Rekha got Akkineni Nageswara Rao national award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X