For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಹೆಚ್ಚಿಸಿಕೊಂಡ ಸಾಯಿ ಪಲ್ಲವಿ: ನಾನಿ ಜೊತೆ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು?

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 'ಪ್ರೇಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ನಟಿಗೆ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ ಅಭಿನಯಿಸಿರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ.

  ಭಾರಿ ಬೇಡಿಕೆ ಹೊಂದಿರುವ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಇದೀಗ ಸಾಯಿ ಪಲ್ಲವಿ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ. ಹೌದು, 'ಪ್ರೇಮಂ' ಸುಂದರಿ ಮುಂದಿನ ಸಿನಿಮಾಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ತೆಲುಗು ಸ್ಟಾರ್ ನಾನಿ ಜೊತೆ ಅಭಿನಯಿಸಲು ಸಾಯಿ ಪಲ್ಲವಿ ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

  ಪರೀಕ್ಷೆ ಬರೆಯಲು ಕಾಲೇಜಿಗೆ ಹೋದ ಸಾಯಿ ಪಲ್ಲವಿ: ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

  ಕುತೂಹಲ ಹೆಚ್ಚಿಸಿದ 'ಶ್ಯಾಮ್ ಸಿಂಗ ರಾಯ್' ಸಿನಿಮಾ

  ಕುತೂಹಲ ಹೆಚ್ಚಿಸಿದ 'ಶ್ಯಾಮ್ ಸಿಂಗ ರಾಯ್' ಸಿನಿಮಾ

  ನಾನಿ ಅಭಿನಯದ 'ಶ್ಯಾಮ್ ಸಿಂಗ ರಾಯ್' ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ರಾಹುಲ್ ಸಂಕ್ರಿತ್ಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ

  ಸಾಯಿ ಪಲ್ಲವಿ ಪಡೆಯುತ್ತಿರುವ ಸಂಭಾವನೆ

  'ಶ್ಯಾಮ್ ಸಿಂಗ ರಾಯ್' ಚಿತ್ರದಲ್ಲಿನ ನಟನೆಗೆ 2 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ನಟಿಮಣಿಯರು ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಾಮಾನ್ಯ. ಈ ವಿಚಾರದಲ್ಲಿ ಸಾಯಿ ಪಲ್ಲವಿ ಏನು ಹೊರತಾಗಿಲ್ಲ. ಅಭಿಮಾನಿ ಬಳಗ, ಆಕೆಯ ಅಭಿನಯ, ನೃತ್ಯ ಎಲ್ಲವನ್ನು ಆಧರಿಸಿ ನಿರ್ಮಾಪಕರು 2 ಕೋಟಿ ಸಂಭಾವನೆ ನೀಡಲು ಮುಂದಾಗಿದ್ದಾರಂತೆ. ಸಾಯಿ ಪಲ್ಲವಿ ಈಗಾಗಲೇ ನಾನಿ ಜೊತೆ 'ಎಂಸಿಎ' ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಎರಡನೇ ಬಾರಿ ನಾನಿ ಜೊತೆ ನಟಿಸುತ್ತಿದ್ದಾರೆ.

  ರಶ್ಮಿಕಾ ಈ ಸಿನಿಮಾ ತಿರಸ್ಕರಿಸಿದ್ದೇಕೆ?

  ರಶ್ಮಿಕಾ ಈ ಸಿನಿಮಾ ತಿರಸ್ಕರಿಸಿದ್ದೇಕೆ?

  'ಶ್ಯಾಮ್ ಸಿಂಗ ರಾಯ್' ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಈಗಾಗಲೇ ನಡೆಯುತ್ತಿದೆ. ಲಾಕ್ ಡೌನ್ ನಿಂದ ಸ್ಥಗಿತವಾಗಿದ್ದ ಚಿತ್ರೀಕರಣವನ್ನು ಸದ್ಯದಲ್ಲೇ ಪ್ರಾರಂಭಿಸುವ ಸಾಧ್ಯತೆ ಇದೆ. ನವೆಂಬರ್ ನಲ್ಲಿ ಸಿನಿಮಾತಂಡ ಶೂಟಿಂಗ್ ಗೆ ಹೊರಡಲಿದೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಸಿನಿಮಾದಲ್ಲಿ 3 ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡನೇ ನಾಯಕಿಗಾಗಿ ಸಿನಿಮಾತಂಡ ರಶ್ಮಿಕಾ ಮಂದಣ್ಣ ಜೊತೆಗೆ ಮಾತುಕತೆ ನಡೆಸಿದ್ದಾರಂತೆ. ಆದರೆ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಇರುವ ಕಾರಣ ರಶ್ಮಿಕಾ ಈ ಪಾತ್ರವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಸಾಯಿ ಪಲ್ಲವಿ ಬಳಿ ಇರುವ ಸಿನಿಮಾಗಳು

  ಸಾಯಿ ಪಲ್ಲವಿ ಬಳಿ ಇರುವ ಸಿನಿಮಾಗಳು

  ನಟಿ ಸಾಯಿ ಪಲ್ಲವಿ ಸದ್ಯ ನಾಗಚೈತನ್ಯ ಜೊತೆ 'ಲವ್ ಸ್ಟೋರಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸುತ್ತಿರುವ 'ವಿರಾಟ ಪರ್ವಂ' ಚಿತ್ರದಲ್ಲಿ ನಾಯಕಿಯಾಗಿ ಕಾಮಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಕ್ಸಲೈಟ್ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

  English summary
  Actress Sai Pallavi Demands 2 crore remuneration for Nani's Shyam Singha Roy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X