Don't Miss!
- Automobiles
ಭಾರತದಲ್ಲಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಯಾವಾಗ? ಅತಿ ಹೆಚ್ಚು ರೇಂಜ್ ಕೊಡಲಿದೆಯಂತೆ..!
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- News
ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಔಟ್: ಮುಂದುವರಿದ ಷೇರು ಕುಸಿತ- ಇಲ್ಲಿದೆ ಮಾಹಿತಿ
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sai Pallavi: ನಟನೆ ಬಿಟ್ಟು ಕೃಷಿಗೆ ಇಳಿದ ಸಾಯಿ ಪಲ್ಲವಿ!
ಈಗಿನ ಬಹುತೇಕ ನಟಿಯರು ತಮ್ಮ ಸೌಂದರ್ಯದಿಂದ, ಗ್ಲಾಮರಸ್ ಲುಕ್‌ಗಳಿಂದಲೇ ಸೆಳೆವುದು ಹೆಚ್ಚು. ಪ್ರತಿಭೆ ಇದ್ದರೂ ಗ್ಲಾಮರಸ್ ಇಲ್ಲದಿದ್ದರೆ ಅಥವಾ ಗ್ಲಾಮರಸ್ ಆಗಿ ನಟಿಸದಿದ್ದರೆ ಅವಕಾಶವಿಲ್ಲ ಎಂಬ ಪರಿಸ್ಥಿತಿ ಚಿತ್ರರಂಗದಲ್ಲಿದೆ.
ಗ್ಲಾಮರಸ್ ಲುಕ್, ಗ್ಲಾಮರಸ್ ಉಡುಪಿನ ಬದಲಾಗಿ ಕೇವಲ ನಟನೆಯಿಂದಷ್ಟೆ ಹೆಸರು ಗಳಿಸಿದ ನಟಿಯರ ಸಂಖ್ಯೆ ಬಹಳ ಕಡಿಮೆ ಆದರೆ ಕೇವಲ ತಮ್ಮ ನಟನೆಯಿಂದಷ್ಟೆ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿದ ಈಗಿನ ನಟಿಯರಲ್ಲಿ ಮೊದಲ ಸ್ಥಾನದಲ್ಲಿರುವುದು ನಟಿ ಸಾಯಿ ಪಲ್ಲವಿ.
Sai
Pallavi:
ಚಿತ್ರರಂಗ
ತೊರೆದರೇ
'ಪ್ರೇಮಂ'
ಸುಂದರಿ
ಸಾಯಿ
ಪಲ್ಲವಿ!
ಗ್ಲಾಮರಸ್ ಪಾತ್ರ, ಗ್ಲಾಮರಸ್ ಉಡುಪುಗಳಿಂದ ಸದಾ ದೂರವೇ ಇರುವ ಸಾಯಿ ಪಲ್ಲವಿ ಕೇವಲ ತಮ್ಮ ನಟನೆ, ನೃತ್ಯ, ಆಫ್ ದಿ ಕ್ಯಾಮೆರಾ ನಡವಳಿಕೆಯಿಂದಲೇ ದೊಡ್ಡ ನಟಿಯಾಗಿ ಹೆಸರು ಮಾಡುತ್ತಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಬಹಳ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಾಯಿ ಪಲ್ಲವಿ ಸಂಪಾದಿಸಿದ್ದಾರೆ. ಅವರನ್ನು ಲೇಡಿ ಪವನ್ ಕಲ್ಯಾಣ್ ಎನ್ನಲಾಗುತ್ತಿದೆ. ಈಗ ಯಾಕೋ ಹಠಾತ್ತನೆ ಸಾಯಿ ಪಲ್ಲವಿ ಕೃಷಿ ಮಾಡಲು ಇಳಿದುಬಿಟ್ಟಿದ್ದಾರೆ.

ಕೃಷಿಯಲ್ಲಿ ತೊಡಗಿದರಾ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ಬರಿಗಾಲಿನಲ್ಲಿ ಹೊಲಕ್ಕೆ ಇಳಿದು ಕೃಷಿಗೆ ತೊಡಗಿದ್ದಾರೆ. ಯುಗಾದಿ ದಿನ ಅವರು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಾವು ಶುಂಠಿ ಕೃಷಿಯಲ್ಲಿ ತೊಡಗಿಕೊಂಡಿರುವ ಚಿತ್ರಗಳನ್ನು ಸಾಯಿ ಪಲ್ಲವಿ ಹಂಚಿಕೊಂಡಿದ್ದು, ಇತರ ರೈತ ಮಹಿಳೆಯೊಟ್ಟಿಗೆ ಅವರಂತೆ ತಾವೂ ತಲೆಗೆ ಬಟ್ಟೆ ಕಟ್ಟಿಕೊಂಡು ಮಧ್ಯೆ ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ. ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶುಂಠಿ ಕೊಯ್ಲು ಮಾಡಿದ ಸಾಯಿ ಪಲ್ಲವಿ
ತಾವು ಶುಂಠಿ ಕಿತ್ತು ಕೈಯಲ್ಲಿ ಹಿಡಿದಿರುವ ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ. ಬೇರೂರಿದ್ದವು, ಆದರೆ ಬೇರಿನಿಂದ ಬೇರ್ಪಡಿಸಿದೆ ಎಂಬ ಅರ್ಥ ಬರುವ ಕ್ಯಾಪ್ಷನ್ ಒಂದನ್ನು ಈ ಚಿತ್ರಗಳಿಗೆ ನೀಡಿದ್ದಾರೆ. ಸಾಯಿ ಪಲ್ಲವಿಯ ಈ ಚಿತ್ರಗಳು ಸಖತ್ ವೈರಲ್ ಆಗಿವೆ. ಅದರಲ್ಲಿಯೂ ಸಾಯಿ ಪಲ್ಲವಿ, ಕೃಷಿಕ ಮಹಿಳೆಯರೊಟ್ಟಿಗೆ ಅವರಂತೆ ತಲೆಗೆ ಬಟ್ಟೆ ಕಟ್ಟಿಕೊಂಡು ಕುಳಿತಿರುವ ಚಿತ್ರವಂತೂ ಬಹಳ ವೈರಲ್ ಆಗಿದೆ. ಸಾಯಿ ಪಲ್ಲವಿ ಈ ಚಿತ್ರಗಳಿಗೆ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಹಾಗೂ ಮಲಯಾಳಂ ಅನುಪಮಾ ಪರಮೇಶ್ವರನ್ ಇನ್ನೂ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಹಿಟ್ ಆಯ್ತು 'ಶ್ಯಾಮ ಸಿಂಘ ರಾಯ್'
ಸಾಯಿ ಪಲ್ಲವಿ ನಟನೆಯ 'ಶ್ಯಾಮ ಸಿಂಘ ರಾಯ್' ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಆಗಿದೆ. ಸಾಯಿ ಪಲ್ಲವಿ ಪಾತ್ರಕ್ಕಂತೂ ಮೆಚ್ಚುಗೆಗಳ ಸುರಿಮಳೆಯೇ ಬಿದ್ದಿದೆ. ಇದೀಗ ಸಾಯಿ ಪಲ್ಲವಿ ನಟನೆಯ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆ ಆಗಬೇಕಿದೆ. ರಾಣಾ ದಗ್ಗುಬಾಟಿ, ಕನ್ನಡತಿ ಪ್ರಿಯಾಮಣಿ ಇನ್ನಿತರರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವು ನಕ್ಸಲೈಟ್ ಕತೆಯನ್ನು ಹೊಂದಿದ್ದು ಸಿನಿಮಾದ ಟೀಸರ್, ಹಾಡೊಂದು ಬಿಡುಗಡೆ ಆಗಿದ್ದು, ಬಹಳ ಗಮನ ಸೆಳೆದಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿಯ ನಟನೆ ಅತ್ಯದ್ಭುತವಾಗಿದೆ ಎಂದು ಸಿನಿಮಾ ನಾಯಕ ರಾಣಾ ದಗ್ಗುಬಾಟಿ ಹೇಳಿದ್ದಾರೆ.

ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಸಾಯಿ ಪಲ್ಲವಿ
ಪ್ರಸ್ತುತ ಯಾವ ಹೊಸ ಸಿನಿಮಾವನ್ನೂ ಸಾಯಿ ಪಲ್ಲವಿ ಒಪ್ಪಿಕೊಂಡಿಲ್ಲ. ಚಿರಂಜೀವಿ ನಟಿಸುತ್ತಿರುವ 'ಭೋಲಾ ಶಂಕರ್' ಸಿನಿಮಾದ ಪಾತ್ರಕ್ಕಾಗಿ ಸಾಯಿ ಪಲ್ಲವಿಯ ಕೇಳಲಾಗಿತ್ತು. ಆದರೆ ತಾನು ರೀಮೇಕ್‌ನಲ್ಲಿ ನಟಿಸಲಾರೆ ಎಂದು ಸಾಯಿ ಪಲ್ಲವಿ ಅವಕಾಶ ನಿರಾಕರಿಸಿದರು. ಯಾವ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದ ಸಾಯಿ ಪಲ್ಲವಿ ಪ್ರಸ್ತುತ ರಜೆಯಲ್ಲಿ ಮಜೆ ಮಾಡುತ್ತಿದ್ದಾರೆ. ಧನುಶ್‌ರ ಹೊಸ ತೆಲುಗು ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಆದರೆ ಅದಿನ್ನೂ ಖಾತ್ರಿಯಾಗಿಲ್ಲ.