For Quick Alerts
  ALLOW NOTIFICATIONS  
  For Daily Alerts

  ಸೌಂದರ್ಯ ನಟಿಸಿದ್ದ ಕೊನೆಯ ಸಿನಿಮಾದ ಟ್ರೈಲರ್ ರಿಲೀಸ್: ಚಿತ್ರ ಬಿಡುಗಡೆ ಯಾವಾಗ?

  |

  ಕನ್ನಡದ ಜನಪ್ರಿಯ ನಟಿ ಸೌಂದರ್ಯ ದುರಂತ ಅಂತ್ಯ ಕಂಡು ವರ್ಷಗಳೇ ಕಳೆದಿವೆ. ಆದರೀಗ ಸೌಂದರ್ಯ ಅಭಿನಯಿಸಿದ್ದ ಕೊನೆಯ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ನಟಿ ಸೌಂದರ್ಯ ಕನ್ನಡದ ಜೊತೆಗೆ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲೂ ಖ್ಯಾತಿಗಳಿಸಿದ್ದರು. ಅದರಲ್ಲೂ ಸೌಂದರ್ಯ ತೆಲುಗಿನಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಸೌಂದರ್ಯ ಕನ್ನಡದಲ್ಲಿ ಕೊನೆಯದಾಗಿ ಆಪ್ತಮಿತ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಸೌಂದರ್ಯ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತೆ. ಆದರೆ ಸೌಂದರ್ಯ ಅಭಿನಯದ ಕೊನೆಯ ತೆಲುಗು ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಸೌಂದರ್ಯ ಸಾವಿನಿಂದ ಅರ್ಧಕ್ಕೆ ನಿಂತುಹೋಗಿದ್ದ ಸಿನಿಮಾವನ್ನು ಈಗ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಹೌದು, ಸೌಂದರ್ಯ ಕೊನೆಯದಾಗಿ ತೆಲುಗಿನ 'ನರ್ತನಶಾಲಾ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ದ್ರೌಪದಿ ಪಾತ್ರದಲ್ಲಿ ಸೌಂದರ್ಯ ಮಿಂಚಿದ್ದಾರೆ.

  ಸೌಂದರ್ಯ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ

  ನಂದಮೂರಿ ಬಾಲಕೃಷ್ಣ ಸಿನಿಮಾದಲ್ಲಿ ಅರ್ಜುನ ಮತ್ತು ಕೀಚಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾಗೆ ಬಾಲಯ್ಯ ನಿರ್ದೇಶನ ಮಾಡಿದ್ದಾರೆ. ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ಸದ್ಯ ಈ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ.

  2004ರಲ್ಲಿ ಮಾರ್ಚ್ ನಲ್ಲಿ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಸಿನಿಮಾ ಪ್ರಾರಂಭವಾಗಿ ಒಂದೇ ತಿಂಗಳಲ್ಲೇ ಸೌಂದರ್ಯ ವಿಮಾನ ಅಪಘಾತದಲ್ಲಿ ನಿಧನ ಹೊಂದಿದರು. ಸಿನಿಮಾ ಸಹ ಅಲ್ಲಿಗೆ ನಿಂತುಹೋಗಿದೆ. ಸೌಂದರ್ಯ ಇಲ್ಲದೆ ಈ ಸಿನಿಮಾ ಮಾಡುವುದಿಲ್ಲ ಎಂದು ಬಾಲಯ್ಯ ಈ ಸಿನಿಮಾವನ್ನು ಮುಂದುವರೆಸಲಿಲ್ಲ. ಅಂದ್ಹಾಗೆ ಈ ಸಿನಿಮಾ ಕೇವಲ 17 ನಿಮಿಷ ಮಾತ್ರವಿದೆ.

  17 ನಿಮಿಷಗಳ ಫೂಟೇಜ್ ಅನ್ನು ಆನ್ ಲೈನ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 24ರಂದು ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದಿಂದ ಬರುವ ಹಣವನ್ನು ಚಾರಿಟಿಗೆ ನೀಡಲು ಬಾಲಯ್ಯ ನಿರ್ಧರಿಸಿದ್ದಾರೆ. ಇಂದು ಸೌಂದರ್ಯ ನಮ್ಮೊಂದಿಗೆ ಇಲ್ಲ ಆದರೆ ಅವರ ನಟನೆಯ ಕೊನೆಯ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Actress Soundarya starrer last movie Narthanasala trailer released. This movie set to release october 24th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X