For Quick Alerts
  ALLOW NOTIFICATIONS  
  For Daily Alerts

  ರಾಶಿ ಖನ್ನಾ ನನಗೆ ಕಿರಕುಳ ನೀಡಿದ್ದರು: ನಗ್ನಂ ನಟಿಯ ಗಂಭೀರ ಆರೋಪ

  |

  ರಾಮ್‌ ಗೋಪಾಲ್ ವರ್ಮಾ ಸಿನಿಮಾ ನಗ್ನಂ ಸಿನಿಮಾ ಆನ್‌ಲೈನ್‌ನಲ್ಲಿ ಬಹುತೇಕ ಹಿಟ್ ಎನಿಸಿಕೊಂಡಿದೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಸಿನಿಮಾವನ್ನು ನೋಡಿದ್ದಾರೆ.

  Susheel Kumar, ದುರಂತದ ಹಿಂದಿನ ಕಾರಣವೇನು | Filmibeat Kannada

  ನಾಯಕಿಯ ಬೆತ್ತಲೆ ತನುವನ್ನೇ ನೆಚ್ಚಿಕೊಂಡು ನಿರ್ಮಿಸಲಾದ ಈ ಸಿನಿಮಾದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಿರ್ಮಾಪಕರೂ ಅವರೇ.

  ಒರಿಸ್ಸಾದಿಂದ ಅಪ್ಸರೆಯನ್ನು ಕರೆತಂದ ರಾಮ್‌ ಗೋಪಾಲ್ ವರ್ಮಾಒರಿಸ್ಸಾದಿಂದ ಅಪ್ಸರೆಯನ್ನು ಕರೆತಂದ ರಾಮ್‌ ಗೋಪಾಲ್ ವರ್ಮಾ

  ಸಿನಿಮಾದ ನಾಯಕಿ ಶ್ರೀರಪಕಾ ಸಖತ್ ಹಾಟ್ ಆಗಿ, ಚಳಿ ಬಿಟ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ನಟಿಯ ದೇಹದ ಓರೆಗಳ ಮೇಲೆ ವಿಪರೀತವಾಗಿ ಕ್ಯಾಮೆರಾ ಆಡಿಸಿದ್ದಾರೆ ರಾಮ್‌ ಗೋಪಾಲ್ ವರ್ಮಾ. ಸಿನಿಮಾದ ನಾಯಕಿ ಶ್ರೀರಪಕಾ ಮತ್ತೊಬ್ಬ ಖ್ಯಾತ ನಟಿಯ ಮೇಲೆ ಕಿರುಕುಳದ ಆರೋಪ ಹೊರಿಸಿದ್ದಾರೆ.

  ನಗ್ನಂ ಸಿನಿಮಾ ನಟಿಯಿಂದ ಆರೋಪ

  ನಗ್ನಂ ಸಿನಿಮಾ ನಟಿಯಿಂದ ಆರೋಪ

  ನಗ್ನಂ ಸಿನಿಮಾದ ನಾಯಕಿ ಶ್ರೀರಪಕಾ, ತೆಲುಗಿನ ಮತ್ತೊಬ್ಬ ಖ್ಯಾತ ನಟಿ ರಾಶಿ ಖನ್ನಾ ವಿರುದ್ಧ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಶ್ರೀರಪಕಾ, ರಾಶಿ ಖನ್ನಾ ಗೆ ಫ್ಯಾಷನ್ ಡಿಸೈನರ್ ಆಗಿದ್ದರು, ಹಾಗಾಗಿ ಕೆಲವು ಘಟನೆಗಳನ್ನು ಉದಾಹರಣೆಯಾಗಿ ನೀಡಿ ಕಿರುಕುಳದ ಆರೋಪ ಹೊರಿಸಿದ್ದಾರೆ.

  'ಬೆಳಿಗ್ಗೆ 3 ಗಂಟೆಗೆ ಕರೆ ಮಾಡಿ ಕರೆಸಿಕೊಂಡಿದ್ದಳು

  'ಬೆಳಿಗ್ಗೆ 3 ಗಂಟೆಗೆ ಕರೆ ಮಾಡಿ ಕರೆಸಿಕೊಂಡಿದ್ದಳು

  ಸುಪ್ರೀಂ ಸಿನಿಮಾದ ಶೂಟಿಂಗ್ ವೇಳೆ ರಾಶಿ ಖನ್ನಾ ಬೆಳ್ಳಂಬೆಳಿಗ್ಗೆ 3 ಗಂಟೆಗೆ ಶ್ರೀರಪಕಾ ಗೆ ಕರೆ ಮಾಡಿ ಶೀಘ್ರವಾಗಿ ಶೂಟಿಂಗ್‌ ಸ್ಥಳಕ್ಕೆ ಬಂದು ತನಗೆ ಸೀರೆ ಉಡಲು ಸಹಾಯ ಮಾಡುವಂತೆ ಹೇಳಿದರಂತೆ. ಶ್ರೀರಪಕಾ ಎದ್ದು ಬಹಳ ದೂರವಿದ್ದ ಶೂಟಿಂಗ್ ಸ್ಥಳಕ್ಕೆ ಹೋಗಿ ರಾಶಿ ಗೆ ಸೀರೆ ಉಡಿಸಿದರಂತೆ.

  ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!

  ಗಂಟೆ ಗಟ್ಟಲೆ ನನ್ನನ್ನು ಕಾಯಿಸುತ್ತಿದ್ದಳು: ಶ್ರಿರಪಕಾ

  ಗಂಟೆ ಗಟ್ಟಲೆ ನನ್ನನ್ನು ಕಾಯಿಸುತ್ತಿದ್ದಳು: ಶ್ರಿರಪಕಾ

  ಶೂಟಿಂಗ್ ಯುನಿಟ್‌ನಲ್ಲಿ ಸಾಕಷ್ಟು ಮಹಿಳೆಯರು ಇದ್ದರು, ಯಾರಿಗಾದರು ಹೇಳಿದ್ದರೆ ಅವರೇ ರಾಶಿ ಗೆ ಸೀರೆ ಉಡಲು ಸಹಾಯ ಮಾಡುತ್ತಿದ್ದರು ಆದರೆ ರಾಶಿ ಉದ್ದೇಶಪೂರ್ವಕವಾಗಿ ನನ್ನನ್ನು ಅಷ್ಟು ದೂರದಿಂದ ಕರೆಸಿದರು. ನಾನು ಬಂದ ಮೇಲೆ ಸಹ ಗಂಟೆ ಗಟ್ಟಲೆ ನನ್ನನ್ನು ಕಾಯಿಸಿದರು ಎಂದು ಶ್ರೀರಪಕಾ ಹೇಳಿದ್ದಾರೆ.

  'ನಿರ್ದೇಶಕ ಅನಿಲ್ ರವಿಪುಡಿಗೆ ಗೊತ್ತಿತ್ತು'

  'ನಿರ್ದೇಶಕ ಅನಿಲ್ ರವಿಪುಡಿಗೆ ಗೊತ್ತಿತ್ತು'

  ನಟಿ ರಾಶಿ ಖನ್ನಾ ನನ್ನ ಬಳಿ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ವಿಷಯ ಸರಿಲೇರು ನೀಕೆವ್ವರು ನಿರ್ದೇಶಕ ಅನಿಲ್ ರವಿಪುಡಿ ಅವರಿಗೂ ಗೊತ್ತಿತ್ತು. ಹಲವು ಸಂದರ್ಭದಲ್ಲಿ ರಾಶಿ ಖನ್ನಾ ನನ್ನನ್ನು ಗೋಳುಹೊಯ್ದುಕೊಂಡಿದ್ದಳು, ನನ್ನ ಸ್ವಾಭಿಮಾನಕ್ಕೆ ಪೆಟ್ಟಾಗುವಂತೆ ಮಾತನಾಡಿದ್ದಳು ಎಂದು ಶ್ರೀರಪಕಾ ಆರೋಪಿಸಿದ್ದಾರೆ.

  ಖ್ಯಾತ ನಟರೊಂದಿಗೆ ನಟಿಸಿರುವ ರಾಶಿ

  ಖ್ಯಾತ ನಟರೊಂದಿಗೆ ನಟಿಸಿರುವ ರಾಶಿ

  ರಾಶಿ ಖನ್ನಾ ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮನಂ, ರವಿತೇಜ ಅವರ ಬೆಂಗಾಲ್ ಟೈಗರ್, ಎನ್‌ಟಿಆರ್ ನಟನೆಯ ಜೈ ಲವ-ಕುಶ, ವಿಜಯ್ ದೇವರಕೊಂಡ ಜೊತೆ ವರ್ಲ್ಡ್ ಫೇಮಸ್ ಲವ್ವರ್, ವಿಶಾಲ್ ಜೊತೆ ಅಯೋಗ್ಯ, ನಾಗಚೈತನ್ಯ, ವೆಂಕಟೇಶ್ ಜೊತೆ ವೆಂಕಿ ಮಾಮ ಸಿನಿಮಾ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Naked movie heroine Sri Rapaka accused that heroine Raashi Khanna tortured her mentally.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X