Just In
Don't Miss!
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- News
ಭ್ರಷ್ಟಾಚಾರ ಮುಕ್ತ ಅಸ್ಸಾಂ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 24ರ ಚಿನ್ನ, ಬೆಳ್ಳಿ ದರ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟಿ ಸಮಂತಾ ಬಗ್ಗೆ ಶ್ರೀರೆಡ್ಡಿ ಕೀಳು ಹೇಳಿಕೆ
ನಟಿ ಸಮಂತಾ ಅಕ್ಕಿನೇನಿ ಬಗ್ಗೆ ವಿವಾದಾತ್ಮಕ ನಟಿ ಶ್ರೀ ರೆಡ್ಡಿ ಕೀಳಾದ ಕಮೆಂಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಸಮಂತಾ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಪ್ರವಾಸದ ಚಿತ್ರಗಳನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸಮಂತಾ ಬಿಕಿನಿ ಫೋಟೋ: ಮಾಲ್ಡೀವ್ಸ್‌ನಲ್ಲಿ ಸ್ಯಾಮ್ ಸಖತ್ ಹಾಟ್
ಸಮಂತಾ ಬಿಕಿನಿ ತೊಟ್ಟು ನೀರಿನಲ್ಲಿ ಈಜುತ್ತಿರುವ ಚಿತ್ರ ಸೇರಿದಂತೆ ಇನ್ನೂ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇವುಗಳಲ್ಲಿ ಒಂದು ಚಿತ್ರವನ್ನು ತಮ್ಮ ಫೇಸ್‌ಬುಕ್ ಖಾತೆಯಿಂದ ಹಂಚಿಕೊಂಡಿರುವ ಶ್ರೀ ರೆಡ್ಡಿ, 'ಇನ್ನೂ ನಿನ್ನ ದೇಹ ಪ್ರದರ್ಶಿಸಿ ಸಿನಿಮಾರಂಗದಲ್ಲಿ ವ್ಯಾಪಾರ ಮಾಡಬೇಕಾ?' ಎಂದು ಕೀಳಾಗಿ ಪ್ರಶ್ನೆ ಮಾಡಿದ್ದಾರೆ.
'ನಿನ್ನ ಬೆತ್ತಲೆ ದೇಹ ತೋರಿಸಿ ಸಿನಿಮಾ ರಂಗದಲ್ಲಿ ವ್ಯಾಪಾರ ಏಕೆ ಮಾಡುತ್ತೀಯಾ? ನಿನ್ನ ಬಳಿ ಈಗಾಗಲೇ ಸಾಕಷ್ಟು ಹಣ ಇದೆ, ನಿನ್ನ ನಂತರದ 100 ತಲೆಮಾರುಗಳು ತಿನ್ನುವಷ್ಟ ಹಣ ಸಂಪಾದನೆ ಮಾಡಿದ್ದೀಯಾ' ಎಂದು ಶ್ರೀರೆಡ್ಡಿ ಕಮೆಂಟ್ ಮಾಡಿದ್ದಾರೆ.
ಸಮಂತಾ ಅಭಿಮಾನಿಗಳು ಶ್ರೀರೆಡ್ಡಿ ವಿರುದ್ಧ ಉರಿದು ಬಿದ್ದಿದ್ದಾರೆ. ಕೆಲವರು ಶ್ರೀರೆಡ್ಡಿಯನ್ನು ಬೈದು ಕಮೆಂಟ್ ಮಾಡಿದ್ದಾರೆ ಸಹ. ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಹಲವರು ಒತ್ತಾಯಿಸಿದ್ದಾರೆ. ಶ್ರೀರೆಡ್ಡಿಯ ಹಳೆಯ ಗ್ಲಾಮರಸ್ ಫೋಟೊಗಳನ್ನು ಕಮೆಂಟ್ ಮಾಡಿದ್ದಾರೆ.
ಮಾಲ್ಡೀವ್ಸ್ ಪ್ರವಾಸದಲ್ಲಿ ಸಮಂತಾ; ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ
ಶ್ರೀರೆಡ್ಡಿ ಸದಾ ವಿವಾದಗಳನ್ನು ಸೃಷ್ಟಿಸುವ ನಟಿಯೆಂದೇ ಗುರುತಿಸಿಕೊಂಡಿದ್ದಾರೆ. ಹಲವು ಖ್ಯಾತ ನಟ-ನಟಿಯರ ವಿರುದ್ಧ ಮೀಟೂ ಆರೋಪವನ್ನು ಮಾಡಿದ್ದರು ಶ್ರೀರೆಡ್ಡಿ. ಅವರೊಮ್ಮೆ ತಮ್ಮ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ್ದರು.