For Quick Alerts
  ALLOW NOTIFICATIONS  
  For Daily Alerts

  ತೀವ್ರ ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾದ ನಟ ಅದ್ವಿ ಶೇಷ್

  |

  ಟಾಲಿವುಡ್ ನಟ ಅದ್ವಿ ಶೇಷ್ ಡೆಂಗ್ಯೂ ಕಾರಣದಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಮೇಜರ್' ಚಿತ್ರದ ನಟ ಕಳೆದ ವಾರ ಡೆಂಗ್ಯೂ ಸೋಂಕಿಗೆ ಒಳಗಾದರು. ರಕ್ತದ ಪ್ಲೇಟ್‌ಲೆಟ್‌ಗಳ ಹಠಾತ್ ಕುಸಿತದಿಂದಾಗಿ, ಅವರನ್ನು ಸೆಪ್ಟೆಂಬರ್ 18 ರಂದು ಆಸ್ಪತ್ರೆಗೆ ಸೇರಿಸಲಾಗಿದೆ.

  ಇತ್ತೀಚಿನ ಅಪ್‌ಡೇಟ್ ಪ್ರಕಾರ, ಅದ್ವಿ ಶೇಷ್ ಅವರ ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ವಹಿಸಿದೆ. ಸದ್ಯಕ್ಕೆ ಹೈದರಾಬಾದ್, ತೆಲಂಗಾಣದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಂತದಲ್ಲಿ ಅದ್ವಿ ಶೇಷ್ ಅವರ ಆರೋಗ್ಯ ಕುರಿತ ಸುದ್ದಿ ನಿಜಕ್ಕೂ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

  ಬಹುನಿರೀಕ್ಷೆಯ 'ಮೇಜರ್' ಸಿನಿಮಾ ಬಿಡುಗಡೆ ಮುಂದೂಡಿಕೆಬಹುನಿರೀಕ್ಷೆಯ 'ಮೇಜರ್' ಸಿನಿಮಾ ಬಿಡುಗಡೆ ಮುಂದೂಡಿಕೆ

  ಈ ವಿಚಾರ ತಿಳಿಯುತ್ತಿದ್ದಂತೆ ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ 'ಆದಷ್ಟೂ ಬೇಗ ಚೇತರಿಸಿಕೊಳ್ಳಲಿ, ಗುಣಮುಖರಾಗಲಿ' ಎಂದು ಪ್ರಾರ್ಥಿಸುತ್ತಿದ್ದಾರೆ.

  ಅದ್ವಿ ಶೇಷ್ ನಟನೆಯ ಮೇಜರ್ ಸಿನಿಮಾ ತೆರೆಗೆ ಬರಬೇಕಿದೆ. ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರ ತೆಲುಗು ಮತ್ತು ಹಿಂದಿಯಲ್ಲಿ ರಿಲೀಸ್ ಆಗಲಿದೆ. 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಶಶಿ ಕಿರಣ್ ಟಿಕ್ಕ ಈ ಚಿತ್ರ ನಿರ್ದೇಶಿಸಿದ್ದು, ಅದ್ವಿ ಶೇಷ್ ಚಿತ್ರಕಥೆ ಮಾಡಿದ್ದಾರೆ.

  ಈ ಹಿಂದೆ ನಿರ್ಧರಿಸಿದಂತೆ ಜುಲೈ ತಿಂಗಳಲ್ಲಿ ಮೇಜರ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಆಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಬಿಡುಗಡೆ ಕುರಿತು ಅಧಿಕೃತ ಮಾಹಿತಿ ನೀಡಿದ್ದ ಚಿತ್ರತಂಡ ಮುಂದಿನ ದಿನಾಂಕ ಘೋಷಿಸುವುದಾಗಿ ಹೇಳಿತ್ತು.

  English summary
  Actor Adivi Sesh has been infected with Dengue last week and due to a sudden drop in blood platelets, he has been hospitalised on 18th Sep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X