For Quick Alerts
  ALLOW NOTIFICATIONS  
  For Daily Alerts

  ರೆಜಿನಾ '2 ನಿಮಿಷ' ಮ್ಯಾಗಿ ಜೋಕ್: 'ನನಗೆ ಸ್ಟಾಮಿನಾ' ಜಾಸ್ತಿ ಎಂದ 'ಮೇಜರ್'!

  |

  ಇತ್ತೀಚೆಗೆ ಚೆನ್ನೈ ಚೆಲುವೆ ರೆಜಿನಾ ಕಟ್‌ ಮಾಡಿದ ಹಸಿ ಜೋಕ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಪುರುಷರ ಲೈಂಗಿಕ ಸಾಮರ್ಥ್ಯ 'ಮ್ಯಾಗಿ' ತರ ಎರಡು ನಿಮಿಷ ಅಷ್ಟೇ ಎಂದು ರೆಜಿನಾ ಹೇಳಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈ ಬಗ್ಗೆ ತೆಲುಗು ನಟ ಅಡಿವಿ ಶೇಷ್ ಪ್ರತಿಕ್ರಿಯಿಸಿದ್ದು, 'ನನಗೆ ಸ್ಟಾಮಿನಾ ಜಾಸ್ತಿ' ಎಂದಿದ್ದಾರೆ.

  ಸುಧೀರ್ ವರ್ಮಾ ನಿರ್ದೇಶನದ 'ಶಾಕಿನಿ ಡಾಕಿನಿ' ಚಿತ್ರದಲ್ಲಿ ರೆಜಿನಾ ಕಸೆಂದ್ರ ಹಾಗೂ ನಿವೇತಾ ಥಾಮಸ್ ಒಟ್ಟಿಗೆ ನಟಿಸಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸೆಪ್ಟೆಂಬರ್ 16ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಸುರೇಶ್ ಬಾಬು ಡಿ, ಸುನಿತಾ ಮತ್ತು ಥಾಮಸ್ ಕಿನ್ ಚಿತ್ರವನ್ನು ನಿರ್ಮಿಸಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಕಥೆ ಪಕ್ಕಕ್ಕಿಟ್ಟರೆ ರೆಜಿನಾ ಹೇಳಿದ ಜೋಕ್ ಇತ್ತೀಚೆಗೆ ಸಖತ್ ಸದ್ದು ಮಾಡಿತ್ತು.

  "ಮ್ಯಾಗಿ ತರ ಎರಡೇ ನಿಮಿಷ": ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ನಟಿ ರೆಗಿನಾ ಹಸಿ ಜೋಕ್!

  ಫುಡ್‌ ಯೂಟ್ಯೂಬ್‌ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೆಜಿನಾ ಹಾಗೂ ನಿವೇತಾ ಥಾಮಸ್ ಮಾತನಾಡಿದ್ದರು. ಪುರುಷ ಆಂಕರ್ "ಮ್ಯಾಗಿ ಬಗ್ಗೆ ಒಂದು ಜೋಕ್ ಇದೆ ಏನಂದ್ರೆ, ಮ್ಯಾಗಿ 2 ನಿಮಿಷದಲ್ಲಿ ರೆಡಿ ಆಗುತ್ತೆ. ಆದರೆ ಹುಡುಗಿಯರು 2 ನಿಮಿಷಕ್ಕೆ ಮೇಕಪ್ ಹಾಕಿಕೊಂಡು ರೆಡಿ ಆಗುವುದಿಲ್ಲ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ರೆಜಿನಾ "ಹುಡುಗರು, ಮ್ಯಾಗಿ ಎರಡೂ ಒಂದೇ.. 2 ನಿಮಿಷದಲ್ಲಿ ಮುಗಿದು ಹೋಗುತ್ತೆ" ಎಂದಿದ್ದರು.

   'ನನಗೆ ಸ್ಟಾಮಿನಾ ಜಾಸ್ತಿ' ಎಂದ ಅಡಿವಿ ಶೇಷ್

  'ನನಗೆ ಸ್ಟಾಮಿನಾ ಜಾಸ್ತಿ' ಎಂದ ಅಡಿವಿ ಶೇಷ್

  'ಶಾಕಿನಿ ಡಾಕಿನಿ' ಸಿನಿಮಾ ಪ್ರೀರಿಲೀಸ್ ಈವೆಂಟ್‌ ನಿನ್ನೆ(ಸೆಪ್ಟೆಂಬರ್ 12) ರಾತ್ರಿ ನಡೀತು. 'ಮೇಜರ್' ಸಿನಿಮಾ ಖ್ಯಾತಿಯ ಅಡಿವಿ ಶೇಷ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರೆಜಿನಾ ಜೊತೆ ಅಡಿವಿ ಶೇಷ್ ವೇದಿಕೆ ಏರಿದ್ದರು. "ಏನು ಇತ್ತೀಚೆಗೆ ಏನೋ ಹೇಳ್ತಿದ್ದೆ. ಹುಡುಗರು 2 ನಿಮಿಷದ ಮ್ಯಾಗಿ ಅಂತ ಏನೋ ಹೇಳಿದಂತೆ ಇತ್ತು. ನನಗೂ ಹೇಳು. ನಾನು ಬಹಳ ದಿನ ಸಿನಿಮಾ ಮಾಡ್ತೀನಿ, ನನಗೆ ಸ್ಟಾಮಿನಾ ಜಾಸ್ತಿ ಎಂದು ಕೆಲವರು ಹೇಳುತ್ತಿರುತ್ತಾರೆ" ಎಂದಿದ್ದಾರೆ.

  ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್ಒಟ್ಟಿಗೆ ಕಾಣಿಸಿಕೊಂಡು ಸ್ಟೆಪ್ಸ್ ಹಾಕಿದ ಚಿರು, ಸಲ್ಮಾನ್ ಖಾನ್; ಗಾಡ್‌ಫಾದರ್ ಸಾಂಗ್ ಟೀಸರ್ ರಿಲೀಸ್

  ಅಡಿವಿ ಶೇಷ್ ಪ್ರಶ್ನೆಗೆ ರೆಜಿನಾ ಶಾಕ್

  ಅಡಿವಿ ಶೇಷ್ ಪ್ರಶ್ನೆಗೆ ರೆಜಿನಾ ಶಾಕ್

  ಅಷ್ಟು ದೊಡ್ಡ ವೇದಿಕೆಯಲ್ಲಿ ಅಡಿವಿ ಶೇಷ್ ಈ ರೀತಿ ದಿಢೀರನೇ ಕೇಳುತ್ತಾರೆ ಎಂದು ನಟಿ ರೆಜಿನಾ ಎಣಿಸಿರಲಿಲ್ಲ. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ರೆಜಿನಾ "2 ನಿಮಿಷದಲ್ಲಿ ಹೇಳ್ತೀನಿ" ಎಂದು ಜಾರಿಕೊಂಡಿದ್ದಾರೆ.

  ನಿವೇತಾ ಥಾಮಸ್‌ಗೆ 'ಮೇಜರ್‌' ಪ್ರಶ್ನೆ

  ನಿವೇತಾ ಥಾಮಸ್‌ಗೆ 'ಮೇಜರ್‌' ಪ್ರಶ್ನೆ

  ಅಡಿವಿ ಶೇಷ್ ತಮಾಷೆಯಾಗಿ ಮಾತಿನಲ್ಲೇ ನಟಿ ರೆಜಿನಾ ಹಾಗೂ ನಿವೇತಾ ಕಾಲೆಳೆದಿದ್ದಾರೆ. "ನಾನಿ, ಸುಧೀರ್ ಬಾಬು, ಎನ್‌ಟಿಆರ್ ಜೊತೆ ನಟಿಸಿದ್ದೀಯಾ ನನ್ನ ಜೊತೆ ಯಾಕೆ ನಟಿಸಿಲ್ಲ" ಎಂದು ನಿವೇತಾನ ಅಡಿವಿ ಶೇಷ್ ಕೇಳಿದ್ದಾರೆ. "ನಿಮ್ಮ ಡೇಟ್ಸ್ ಸಿಕ್ಕಿಲ್ಲ" ಎಂದು ಆಕೆ ಉತ್ತರಿಸಿದ್ದಾರೆ.

  ಮಹೇಶ್ ಬಾಬು ಸಿನಿಮಾ ಬಗ್ಗೆ ಕೊನೆಗೂ ಬಾಯ್‌ಬಿಟ್ಟ ರಾಜಮೌಳಿ: ಜೇಮ್ಸ್ ಬಾಂಡ್‌ ಶೈಲಿ ಸಿನಿಮಾ!ಮಹೇಶ್ ಬಾಬು ಸಿನಿಮಾ ಬಗ್ಗೆ ಕೊನೆಗೂ ಬಾಯ್‌ಬಿಟ್ಟ ರಾಜಮೌಳಿ: ಜೇಮ್ಸ್ ಬಾಂಡ್‌ ಶೈಲಿ ಸಿನಿಮಾ!

  'ಮಿಡ್ ನೈಟ್ ರನ್ನರ್ಸ್' ಚಿತ್ರದ ರೀಮೆಕ್

  'ಮಿಡ್ ನೈಟ್ ರನ್ನರ್ಸ್' ಚಿತ್ರದ ರೀಮೆಕ್

  'ಮಿಡ್ ನೈಟ್ ರನ್ನರ್ಸ್' ಎನ್ನುವ ಕೊರಿಯನ್ ಚಿತ್ರದ ರೀಮೆಕ್ 'ಶಾಕಿನಿ ಡಾಕಿನಿ'. ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಗಾಗಿ ಹೋದ ಇಬ್ಬರು ಯುವತಿಯರ ಪರಿಚಯ, ಅಕಾಡೆಮಿಯಲ್ಲಿ ಅವರ ಆರ್ಭಟ, ಮುಂದೆ ಇಬ್ಬರು ಸೇರಿ ಏನೆಲ್ಲಾ ಸಾಹಸ ಮಾಡುತ್ತಾರೆ ಅನ್ನುವುದೇ ಸಿನಿಮಾ ಕಥೆ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರಲಿದೆ.

  English summary
  Actor Adivi Sesh On Regina's 2 Minute Adult Joke.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X