For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಈ ಸ್ಟಾರ್ ನಟನಿಗೆ 2ನೇ ಬಾರಿ ಜೋಡಿಯಾಗುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ

  |

  ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮಾತ್ರವಲ್ಲದೆ ರಶ್ಮಿಕಾ ಹಿಂದಿಯಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ರಶ್ಮಿಕಾ ಅವರ ಮತ್ತೊಂದು ಹೊಸ ತೆಲುಗು ಸಿನಿಮಾ ಸದ್ದು ಮಾಡುತ್ತಿದ್ದಾರೆ.

  ತೆಲುಗಿನ ಖ್ಯಾತ ನಟ ನಿತಿನ್ ಜೊತೆ ಎರಡನೇ ಬಾರಿ ನಟಿಸಲು ರಶ್ಮಿಕಾ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಭೀಷ್ಮ ಚಿತ್ರದಲ್ಲಿ ರಶ್ಮಿಕಾ ಮತ್ತು ನಿತಿನ್ ಒಟ್ಟಿಗೆ ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಸಕ್ಸಸ್ ಕಾಣುವ ಜೊತೆಗೆ ನಿತಿನ್ ಮತ್ತು ರಶ್ಮಿಕಾ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು.

  ಇದೀಗ ಮತ್ತೆ ನಿತಿನ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಖ್ಯಾತ ನಿರ್ದೇಶಕ ವಕ್ಕಂತಮ್ ವಂಶಿ ನಿರ್ದೇಶನದ ಹೊಸ ಚಿತ್ರದಲ್ಲಿ ನಿತಿನ್‌ಗೆ ರಶ್ಮಿಕಾ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇದು ಕೂಡ ರೊಮ್ಯಾಂಟಿಕ್ ಸಿನಿಮಾವಾಗಿದ್ದು, ಸಿಕ್ಕಾಪಟ್ಟೆ ಮನರಂಜನೆ ಇರಲಿದೆ ಎನ್ನಲಾಗುತ್ತಿದೆ.

  ಚಿತ್ರತಂಡ ಈಗಾಗಲೇ ರಶ್ಮಿಕಾ ಜೊತೆ ಮಾತುಕತೆ ನಡೆಸಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಡೇಟ್ ಹೊಂದಾಣಿಕೆ ಮಾಡಿಕೊಂಡು ನಿತಿನ್ ಜೊತೆ ನಟಿಸಲು ರಶ್ಮಿಕಾ ಮತ್ತೆ ಗ್ರೀನ್ ಸಿಗ್ನಲ್ ಕೊಡ್ತಾರಾ ಎಂದು ಕಾದು ನೋಡಬೇಕು. ಇನ್ನು ನಟ ನಿತಿನ್ ಸದ್ಯ ಬಹುನಿರೀಕ್ಷೆಯ ಅಂಧಾಧುನ್ ರಿಮೇಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ನಿರ್ದೇಶಕ ವಕ್ಕಂತಮ್ ವಂಶಿ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ.

  ವಿಶ್ವ ಯೋಗ ದಿನದಂದು Pooja Hegde ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.. | Filmibeat Kannada

  ರಶ್ಮಿಕಾ ಸದ್ಯ ತೆಲುಗಿನಲ್ಲಿ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿರುವ ಪುಷ್ಪ ತೆಲುಗಿನ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಇದಲ್ಲದೆ ನಟ ಶರ್ವಾನಂದ್ ಅವರ ಮತ್ತೊಂದು ರಶ್ಮಿಕಾ ಕೈಯಲ್ಲದೆ. ಈ ಎರಡು ಸಿನಿಮಾಗಳ ಜೊತೆೆ ನಿತಿನ್ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.

  English summary
  After Bheeshma Rashmika Mandanna and Nithin to reunite for new project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X