For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಬಾಲಿವುಡ್ ಸ್ಟಾರ್ ನಟಿ

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ಪ್ರಭಾಸ್ ಸದ್ಯ 'ಪ್ರಭಾಸ್ 20' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇನ್ನೂ ಚಿತ್ರದ ಟೈಟಲ್ ಫೈನಲ್ ಮಾಡಿಲ್ಲ. ಈ ಸಿನಿಮಾ ಮುಗಿಯೊದರೊಳಗೆ ಪ್ರಭಾಸ್ 21ನೇ ಸಿನಿಮಾ ಸದ್ದು ಮಾಡುತ್ತಿದೆ.

  ಅಣ್ಣಾವ್ರ ಬಗ್ಗೆ ಭಟ್ರು ಆಡೋ ಮಾತು ಕೇಳಿ | Filmibeat Kannada

  ಪ್ರಭಾಸ್ 21ನೇ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪ್ರಭಾಸ್ ಗೆ ನಾಯಕಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಹೆಸರು ಕೇಳಿ ಬರುತ್ತಿದೆ. ಪ್ರಭಾಸ್ ಜೊತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೀಗ ಪ್ರಭಾಸ್ ಜೊತೆ ನಟಿ ಅಲಿಯಾ ಭಟ್ ನಟಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ರಾಜಮೌಳಿ ಸಿನಿಮಾವನ್ನೂ ಮೀರಿಸುತ್ತೆ ಪ್ರಭಾಸ್ ಮುಂದಿನ ಸಿನಿಮಾದ ಬಜೆಟ್ರಾಜಮೌಳಿ ಸಿನಿಮಾವನ್ನೂ ಮೀರಿಸುತ್ತೆ ಪ್ರಭಾಸ್ ಮುಂದಿನ ಸಿನಿಮಾದ ಬಜೆಟ್

  ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಲಿಯಾ

  ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಲಿಯಾ

  ಬಾಲಿವುಡ್ ನಟಿ ಅಲಿಯಾ ಭಟ್ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಅಲಿಯಾ ಜೊತೆ ಚಿತ್ರತಂಡ ಮಾತುಕತೆ ನಡೆಸಿದ್ದು, ಅಲಿಯಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರಿವ ಸಾಧ್ಯತೆ ಇದೆ.

  ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ

  ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ

  ಈಗಾಗಲೆ ಆಲಿಯಾ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತೊಂದು ದಕ್ಷಿಣ ಭಾರತೀಯ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸಂಭಾವನೆ ವಿಚಾರ-ದೀಪಿಕಾ ಔಟ್

  ಸಂಭಾವನೆ ವಿಚಾರ-ದೀಪಿಕಾ ಔಟ್

  ಪ್ರಭಾಸ್ ಜೊತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ ಸಿನಿಮಾತಂಡ ದೀಪಿಕಾ ಅವರನ್ನೇ ನಾಯಕಿಯಾಗಿ ಮಾಡಬೇಕು ಎಂದು ನಿರ್ಧರಿಸಿತ್ತು. ಆದರೆ ದೀಪಿಕಾ ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟ ಕಾರಣ ಸಿನಿಮಾದಿಂದ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

  ಮತ್ತೆ ಪ್ರಭಾಸ್ ಗೆ ವಿಲನ್ ಆಗಲಿದ್ದಾರಾ ನಟ ರಾಣಾ ದಗ್ಗುಬಾಟಿ?ಮತ್ತೆ ಪ್ರಭಾಸ್ ಗೆ ವಿಲನ್ ಆಗಲಿದ್ದಾರಾ ನಟ ರಾಣಾ ದಗ್ಗುಬಾಟಿ?

  ರಾಜಮೌಳಿ ಸಿನಿಮಾಗಿಂತ ಹೆಚ್ಚಿದೆ ಬಜೆಟ್

  ರಾಜಮೌಳಿ ಸಿನಿಮಾಗಿಂತ ಹೆಚ್ಚಿದೆ ಬಜೆಟ್

  ಸದ್ಯ ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಸಿನಿಮಾ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್. ಕೋಟಿ ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾ ಬಜೆಟ್ ಗಿಂತ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾದ ಬಜೆಟ್ ಜಾಸ್ತಿ ಇರಲಿದೆಯಂತೆ. ಮೂಲಗಳ ಪ್ರಕಾರ ಪ್ರಭಾಸ್ ಸಿನಿಮಾ 400ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾಗುತ್ತಿದೆಯಂತೆ. ಬಿಗ್ ಬಜೆಟ್ ಸಿನಿಮಾವನ್ನು ರಾಜಮೌಳಿ ಅಷ್ಟೆ ರಿಚ್ ಆಗಿ, ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದೆ ಕಟ್ಟಿಕೊಡುತ್ತಾರೆ. ಸದ್ಯ ನಾಗ್ ಅಶ್ವಿನ್ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಪ್ರಭಾಸ್ ಗೆ ವಿಲನ್ ಆಗ್ತಾರಾ ರಾಣಾದಗ್ಗುಬಾಟಿ

  ಪ್ರಭಾಸ್ ಗೆ ವಿಲನ್ ಆಗ್ತಾರಾ ರಾಣಾದಗ್ಗುಬಾಟಿ

  ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಟ ರಾಣಾ ದಗ್ಗುಬಾಟಿ, ಪ್ರಭಾಸ್ ಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಸಿನಿಮಾ ಮೂಲಕ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಜೋಡಿ ಸಂಚಲನ ಮೂಡಿಸಿತ್ತು. ಮತ್ತೀಗ ಈ ಜೋಡಿ ಒಟ್ಟಿಗೆ ಅಭಿನಯಿಸಲಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

  English summary
  Bollywood Actress Alia Bhatt as the female lead opposite to Prabhas next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X