For Quick Alerts
  ALLOW NOTIFICATIONS  
  For Daily Alerts

  ಫೋಟೋ ವೈರಲ್; ಮಹೇಶ್ ಬಾಬು ಪುತ್ರಿಯನ್ನು ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಅಲಿಯಾ ಭಟ್

  |

  ಬಾಲಿವುಡ್ ನಟಿ ಅಲಿಯಾ ಭಟ್ ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಅಲಿಯಾ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಈಗಾಗಲೇ ಅಲಿಯಾ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದಾರೆ. ಚಿತ್ರೀಕರಣ ನಡುವೆಯೂ ಅಲಿಯಾ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಪುತ್ರಿ ಸಿತಾರಾ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಅಲಿಯಾ ಮತ್ತು ಸಿತಾರಾ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ..

  ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?

  ಅಲಿಯಾ ಭಟ್ ಭೇಟಿಯಾದ ಮಹೇಶ್ ಬಾಬು ಪುತ್ರಿ

  ಅಲಿಯಾ ಭಟ್ ಭೇಟಿಯಾದ ಮಹೇಶ್ ಬಾಬು ಪುತ್ರಿ

  ಇತ್ತೀಚಿಗೆ ಸಿತಾರಾ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಸಿತಾರಾ ಅಲಿಯಾ ಭಟ್ ಅವರ ದೊಡ್ಡ ಅಭಿಮಾನಿಯಂತೆ. ಆರ್ ಆರ್ ಆರ್ ಸಿನಿಮಾ ಚಿತ್ರೀಕರಣಕ್ಕೆಂದು ಹೈದರಾಬಾದ್ ಗೆ ಬಂದಿರುವ ಅಲಿಯಾ ಅವರನ್ನು ಸಿತಾರಾ ಭೇಟಿಯಾಗಿ ಮಾತನಾಡಿದ್ದಾರೆ. ಇಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಸಿತಾರಾಗೆ ವಿಶೇಷ ಉಡುಗೊರೆ ನೀಡಿದ ಅಲಿಯಾ

  ಸಿತಾರಾಗೆ ವಿಶೇಷ ಉಡುಗೊರೆ ನೀಡಿದ ಅಲಿಯಾ

  ಅಂದಹಾಗೆ ಅಲಿಯಾ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ, ಮಾತನಾಡಿಸಿ ಹಾಗೆ ಕಳುಹಿಸಿಲ್ಲ. ಸಿತಾರಾಗಾಗಿ ಸುಂದರವಾದ ಗಿಫ್ಟ್ ಅನ್ನು ನೀಡಿದ್ದಾರೆ. ಸಿತಾರಾಗೆ ಸುಂದರವಾದ ಡ್ರೆಸ್ ಗಿಫ್ಟ್ ಮಾಡಿದ್ದಾರೆ. ಅಲಿಯಾ ಅವರದ್ದೆ ಆದ ಬ್ರಾಂಡ್ ನ ಬಟ್ಟೆಯನ್ನು ಸಿತಾರಾಗೆ ಉಡುಗೊರೆ ನೀಡಿದ್ದಾರೆ. ಸಿತಾರಾ ಅಲಿಯಾ ಕೊಟ್ಟ ಬಟ್ಟೆಯನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ.

  ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?

  ಯೂಟ್ಯೂಬ್ ಚಾನೆಲ್ ಹೊಂದಿರುವ ಸಿತಾರಾ

  ಯೂಟ್ಯೂಬ್ ಚಾನೆಲ್ ಹೊಂದಿರುವ ಸಿತಾರಾ

  ಮಹೇಶ್ ಬಾಬು ಪುತ್ರಿ ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತನ್ನದೆ ಆದ ಯೂ ಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಸ್ಟಾರ್ ಕಲಾವಿದರನ್ನು ಸಂದರ್ಶನ ಮಾಡುತ್ತಾರೆ. ಸಿತಾರ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲಿಯಾ ಭಟ್ ಅವರನ್ನು ಭೇಟಿಯಾಗಿರುವ ಸಿತಾರಾ ಸಂದರ್ಶನ ಮಾಡಿದ್ದಾರಾ ಎನ್ನುವ ಕುತೂಹಲ ಮೂಡಿಸಿದೆ.

  ಸೀತಾ ಪಾತ್ರದಲ್ಲಿ ಅಲಿಯಾ ಅಭಿನಯ

  ಸೀತಾ ಪಾತ್ರದಲ್ಲಿ ಅಲಿಯಾ ಅಭಿನಯ

  ನಟಿ ಅಲಿಯಾ ಭಟ್ ಆರ್ ಆರ್ ಆರ್ ಸಿನಿಮಾದಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ಗೆ ಜೋಡಿಯಾಗಿ ಅಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತರಾಮ ರಾಜು ಪ್ರೇಯಸಿಯ ಪಾತ್ರಕ್ಕೆ ಅಲಿಯಾ ಬಣ್ಣ ಹಚ್ಚುತ್ತಿದ್ದಾರೆ.

  ಆರ್‌ಆರ್‌ಆರ್‌ ಅಭಿಮಾನಿಗಳಿಗೆ ಕಹಿ ಸುದ್ದಿ: ಸನಿಹದಲ್ಲಿಲ್ಲ ಸಿನಿಮಾ ಬಿಡುಗಡೆಆರ್‌ಆರ್‌ಆರ್‌ ಅಭಿಮಾನಿಗಳಿಗೆ ಕಹಿ ಸುದ್ದಿ: ಸನಿಹದಲ್ಲಿಲ್ಲ ಸಿನಿಮಾ ಬಿಡುಗಡೆ

  ಅಲಿಯಾ ಸಿಬ್ಬಂದಿಗೆ 1 ದಿನಕ್ಕೆ 1 ಲಕ್ಷ ಖರ್ಚು

  ಅಲಿಯಾ ಸಿಬ್ಬಂದಿಗೆ 1 ದಿನಕ್ಕೆ 1 ಲಕ್ಷ ಖರ್ಚು

  ಅಲಿಯಾ ಭಟ್ ಜೊತೆ ಹೈದರಾಬಾದ್ ಗೆ 10 ಜನ ಆಗಮಿಸಿದ್ದಾರೆ. ಅವರ ಸಿಬ್ಬಂದಿಗೆ ದಿನ 1 ಲಕ್ಷ ಖರ್ಚು ಮಾಡುತ್ತಿದೆಯಂತೆ ಆರ್ ಆರ್ ಆರ್ ತಂಡ. ಎಲ್ಲರೂ ಹೈದರಾಬಾದ್ ನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದಾರಂತೆ. ಮೇಕಪ್ ಮ್ಯಾನ್, ಕೇಶ ವಿನ್ಯಾಸಕಿ, ಬೌನ್ಸರ್ಸ್ ಸೇರಿದಂತೆ ಒಟ್ಟು 10 ಜನ ಸಿಬ್ಬಂದಿ ಅಲಿಯಾ ಜೊತೆ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದಾರೆ. ಆರ್ ಆರ್ ಆರ್ ತಂಡ ಇವರಿಗಾಗಿ 1 ಲಕ್ಷ ರೂಪಾಯಿಯನ್ನು ಒಂದು ದಿನಕ್ಕೆ ಖರ್ಚು ಮಾಡುತ್ತಿದ್ದಾರಂತೆ.

  English summary
  Bollywood Actress Alia Bhatt meets Mahesh babu's daughter Sitara in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X