For Quick Alerts
  ALLOW NOTIFICATIONS  
  For Daily Alerts

  'RRR' ಸಿನಿಮಾದ ಡೈಲಾಗ್ ಕಲಿಯಲು ಇಷ್ಟು ಸಮಯ ತೆಗೆದುಕೊಂಡಿದ್ರಾ ಅಲಿಯಾ ಭಟ್?

  |

  ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾದಲ್ಲಿ ಅಲಿಯಾ ಭಟ್ ಸೀತಾ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

  ಜೂ. ಎನ್ ಟಿ ಆರ್ ಮತ್ತು ರಾಮ್ ಚರಣ್ ನಟನೆಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಎರಡು ವರ್ಷಗಳಾಗಿದೆ. ಆದರೆ ಅಲಿಯಾ ಭಟ್ ಇತ್ತೀಚಿಗಷ್ಟೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಅಲಿಯಾ ಹೈದರಾಬಾದ್ ಗೆ ಆಗಮಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅಲಿಯಾ ಎಂಟ್ರಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಇದೀಗ ಅಲಿಯಾ ಚಿತ್ರಕ್ಕಾಗಿ ಎಷ್ಟು ಶ್ರಮಿಸಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.

  ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?

  ವಿಭಿನ್ನವಾದ ಅನುಭವವಾಗಿತ್ತು

  ವಿಭಿನ್ನವಾದ ಅನುಭವವಾಗಿತ್ತು

  ಮೊದಲ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅಲಿಯಾ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಲಿಯಾ, ತೆಲುಗು ಸಿನಿಮಾದ ಚಿತ್ರೀಕರಣದ ಅನುಭವ ತುಂಬಾ ವಿಭಿನ್ನವಾಗಿತ್ತು ಎಂದು ಹೇಳಿದ್ದಾರೆ. 'ಈ ಚಿತ್ರದ ಚಿತ್ರೀಕರಣ ನನಗೆ ತುಂಬಾ ವಿಭಿನ್ನವಾದ ಅನುಭವವಾಗಿತ್ತು. ಏಕೆಂದರೆ ಹಿಂದಿಯ ಜೊತೆಗೆ ನಾನು ತೆಲುಗಿನಲ್ಲೂ ಚಿತ್ರೀಕರಣ ಮಾಡಬೇಕಾಗಿತ್ತು. ಇದು ನನಗೆ ಗೊತ್ತಿಲ್ಲದ ಭಾಷೆ' ಎಂದಿದ್ದಾರೆ.

  18 ತಿಂಗಳಿಂದ ಡೈಲಾಗ್ ಅಭ್ಯಾಸ ಮಾಡಿದ್ದೀನಿ- ಅಲಿಯಾ

  18 ತಿಂಗಳಿಂದ ಡೈಲಾಗ್ ಅಭ್ಯಾಸ ಮಾಡಿದ್ದೀನಿ- ಅಲಿಯಾ

  'ನಾನು ಸುಮಾರು ಒಂದೂವರೆ ವರ್ಷಗಳಿಂದ ಈ ಸಿನಿಮಾಗಾಗಿ ತಯಾರಿ ನಡೆಸಿದ್ದೀನಿ. ನಾನು ನಿದ್ರೆಯಲ್ಲೂ ಸಹ ಈ ಸಿನಿಮಾದ ಸಾಲುಗಳನ್ನೇ ಹೇಳುತ್ತಿದ್ದಾರೆ. ಜೊತೆಗೆ ಪ್ರತಿ ದಿನ ತೆಲುಗು ಮಾತನಾಡಲು ಪ್ರಯತ್ನಿಸುತ್ತಿದ್ದೆ, ಬೆಳಗ್ಗೆ ಎದ್ದಾಗ, ತಿಂಡಿ, ಊಟದ ಸಮಯದಲ್ಲೂ ನನ್ನ ಸಾಲುಗಳನ್ನು ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೆ. ಈ ಸಿನಿಮಾದ ಒಂದು ಭಾಗವಾಗಿರುವುದು ನಾನು ತುಂಬಾ ರೋಮಾಂಚನಗೊಂಡಿದ್ದೀನಿ' ಎಂದಿದ್ದಾರೆ.

  ಈ ತಂಡದ ಜೊತೆ ಕೆಸ ಮಾಡಿದ್ದು ತುಂಬಾ ಖುಷಿ ಇದೆ

  ಈ ತಂಡದ ಜೊತೆ ಕೆಸ ಮಾಡಿದ್ದು ತುಂಬಾ ಖುಷಿ ಇದೆ

  'ರಾಜಮೌಳಿ ಸರ್ ನಿರ್ದೇಶನದಲ್ಲಿ ಮತ್ತು ಅತ್ಯಂತ ಪ್ರತಿಭಾನ್ವಿತ ನಟರಾದ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ' ಎಂದು ಹೇಳಿದ್ದಾರೆ. ಚಿತ್ರಕ್ಕೆ ಸ್ವತಹ ಅಲಿಯಾ ಭಟ್ ಆವರೇ ಬ್ ಮಾಡಲಿದ್ದಾರಂತೆ. ಹಾಗಾಗಿ ತುಂಬಾ ಕಷ್ಟಪಟ್ಟು ತೆಲುಗು ಕಲಿತಿದ್ದಾರೆ ಎಂದು ಎನ್ನಲಾಗುತ್ತಿದೆ.

  ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada
  ಅಲಿಯಾ ಬಳಿ ಇರುವ ಸಿನಿಮಾಗಳು

  ಅಲಿಯಾ ಬಳಿ ಇರುವ ಸಿನಿಮಾಗಳು

  ಅಂದಹಾಗೆ ಅಲಿಯಾ ಭಟ್ ಆರ್ ಆರ್ ಆರ್ ಸಿನಿಮಾದ ಜೊತೆಗೆ ಬಹುನಿರೀಕ್ಷೆಯ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಕೂಡ ಕೈಯಲ್ಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಬ್ರಹ್ಮಾಸ್ತ್ರ ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

  English summary
  Bollywood Actress Alia Bhatt reveals experience of her RRR movie shooting. She says worked on RRR Dialogue for 18 months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X