For Quick Alerts
  ALLOW NOTIFICATIONS  
  For Daily Alerts

  RRR ಸಿನಿಮಾಕ್ಕಾಗಿ ಪಟ್ಟ ಕಷ್ಟ ಹೇಳಿಕೊಂಡ ಆಲಿಯಾ ಭಟ್

  |

  ಮುಹೂರ್ತ ಆದಾಗಿನಿಂದಲೂ ಸುದ್ದಿಯಲ್ಲಿರುವ ಸಿನಿಮಾ ಆರ್‌ಆರ್‌ಆರ್‌. ಭಾರಿ ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾ, ಬಹುದೊಡ್ಡ ನಿರೀಕ್ಷೆಯನ್ನೂ ಹುಟ್ಟಿಸಿದೆ.

  ಭಾರಿ ದೊಡ್ಡ ನಟರ ದಂಡೇ ಸಿನಿಮಾದಲ್ಲಿದೆ. ಜೂ ಎನ್‌ಟಿಆರ್, ರಾಮ್ ಚರಣ್ ತೇಜಾ, ಅಜಯ್ ದೇವಗನ್, ಒಲಿವಿಯಾ ಮೋರಿಸ್, ಆಲಿಯಾ ಭಟ್, ಶ್ರೆಯಾ ಶಿರಿನ್ ಇನ್ನೂ ಹಲವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

  RRR: ಚಿತ್ರೀಕರಣಕ್ಕಿಂತಲೂ ವಿಎಫ್‌ಎಕ್ಸ್‌ ಗೆ ಹೆಚ್ಚು ಹಣ ಖರ್ಚು!

  ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ತಡವಾಗಿದ್ದರು, ಕಳೆದ ಒಂದು ತಿಂಗಳಿನಿಂದಲೂ ಸತತವಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ ನಿರ್ದೇಶಕ ರಾಜಮೌಳಿ. ಆಲಿಯಾ ಭಟ್ ಸಹ ಇತ್ತೀಚೆಗೆ ಸಿನಿಮಾ ತಂಡವನ್ನು ಸೇರಿಕೊಂಡಿದ್ದು, ತೆಲುಗು-ಹಿಂದಿ ಎರಡೂ ವರ್ಷನ್‌ಗಳ ಚಿತ್ರೀಕರಣವನ್ನು ಒಟ್ಟಿಗೆ ಮಾಡುತ್ತಿದ್ದಾರೆ. ಎರಡಕ್ಕೂ ತಾವೇ ಸ್ವತಃ ಡಬ್ಬಿಂಗ್ ಸಹ ಮಾಡಲಿದ್ದಾರೆ. ಈ ನಡುವೆ, ತಾವು ಆರ್‌ಆರ್‌ಆರ್‌ ಸಿನಿಮಾಕ್ಕಾಗಿ ಪಟ್ಟ ಕಷ್ಟವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಆಲಿಯಾ ಭಟ್.

  ವರ್ಷದಿಂದಲೂ ಆರ್‌ಆರ್‌ಆರ್ ಗಾಗಿ ಆಲಿಯಾ ತಯಾರಿ

  ವರ್ಷದಿಂದಲೂ ಆರ್‌ಆರ್‌ಆರ್ ಗಾಗಿ ಆಲಿಯಾ ತಯಾರಿ

  'ಕಳೆದ ಒಂದು ವರ್ಷದಿಂದಲೂ ಆರ್ಆರ್ಆರ್ ಸಿನಿಮಾಕ್ಕೆ ತಯಾರಿ ಮಾಡುತ್ತಿದ್ದೇನೆ. ಸಿನಿಮಾದ ಡೈಲಾಗ್ ಅನ್ನು ವಿಶೇಷವಾಗಿ ತೆಲುಗು ಡೈಲಾಗ್ ಅನ್ನು ಪ್ರತಿದಿನವೂ ಅಭ್ಯಾಸ ಮಾಡುತ್ತಿದ್ದೇನೆ. ಈಗಲೂ ಅದನ್ನು ಮುಂದುವರೆಸಿದ್ದೇನೆ' ಎಂದಿದ್ದಾರೆ ಆಲಿಯಾ ಭಟ್.

  ನಿದ್ದೆಯಲ್ಲೂ ಡೈಲಾಗ್‌ ಗುನುಗುತ್ತಿದ್ದೆ: ಆಲಿಯಾ

  ನಿದ್ದೆಯಲ್ಲೂ ಡೈಲಾಗ್‌ ಗುನುಗುತ್ತಿದ್ದೆ: ಆಲಿಯಾ

  ಡೈಲಾಗ್‌ಗಳನ್ನು ಎಷ್ಟು ಅಭ್ಯಾಸ ಮಾಡಿದ್ದೇನೆಂದರೆ, ನಾನು ನಿದ್ದೆ ಹೋಗುತ್ತಿರುವಾಗಲೂ ಆರ್‌ಆರ್ಆರ್ ಸಿನಿಮಾದ ಡೈಲಾಗ್ ಗುನುಗುತ್ತಿರುತ್ತೇನೆ. ಊಟ ಮಾಡುವಾಗ, ತಿಂಡಿ ತಿನ್ನುವಾಗ ಸಣ್ಣ ಬಿಡುವು ದೊರೆತರೂ ಸಿನಿಮಾ ಡೈಲಾಗ್ ಅನ್ನು ಉರುಹೊಡೆಯಲು ಆರಂಭಿಸುತ್ತಿದ್ದೆ' ಎಂದಿದ್ದಾರೆ ಆಲಿಯಾ.

  ಫೋಟೋ ವೈರಲ್; ಮಹೇಶ್ ಬಾಬು ಪುತ್ರಿಯನ್ನು ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ ಅಲಿಯಾ ಭಟ್

  ಭಾಷೆ ಕಲಿಯುವುದು ಸುಲಭವಾಗಿರಲಿಲ್ಲ: ಆಲಿಯಾ ಭಟ್

  ಭಾಷೆ ಕಲಿಯುವುದು ಸುಲಭವಾಗಿರಲಿಲ್ಲ: ಆಲಿಯಾ ಭಟ್

  'ಆರ್‌ಆರ್ಆರ್ ಸಿನಿಮಾದ ಚಿತ್ರೀಕರಣ ನನಗೆ ಅದ್ಭುತವಾದ ಅನುಭವ. ಇದೇ ನನ್ನ ಮೊದಲ ಹಿಂದಿಯೇತರ ಸಿನಿಮಾ. ರಾಜಮೌಳಿ ಅವರೊಟ್ಟಿಗೆ ಕೆಲಸ ಮಾಡಲು ಸಾಕಷ್ಟು ಉತ್ಸುಕಳಾಗಿದ್ದೆ ಆದರೆ ತೆಲುಗು ಕಲಿಯುವುದು ಅಷ್ಟು ಸುಲಭವಾಗಿರಲಿಲ್ಲ ಹೆಚ್ಚು ಕಷ್ಟಪಡಬೇಕಾಯಿತು' ಎಂದಿದ್ದಾರೆ ಆಲಿಯಾ.

  ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಬಗ್ಗೆ ಸಿನಿಮಾ

  ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಬಗ್ಗೆ ಸಿನಿಮಾ

  ರಾಜಮೌಳಿ ನಿರ್ದೇಶನದ ಈ ಸಿನಿಮಾ ತೆಲುಗಿನ ವೀರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಬಗ್ಗೆ ಆಗಿದೆ. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸುತ್ತಿದ್ದರೆ, ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ನಟಿಸುತ್ತಿದ್ದಾರೆ. ಸೀತಾ ಪಾತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ.

  ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?

  English summary
  Alia Bhatt said she preparing herself from last one year for RRR movie. She said from last one year i daily practicing my Telugu lines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X