Just In
Don't Miss!
- Finance
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 31 ಸ್ಮಾರ್ಟ್ಫೋನ್ ಬೆಲೆ ಕಡಿಮೆಯಾಗಿದೆ!
- News
ತೈಲ ಬೆಲೆ ಏರಿಕೆ ಖಂಡಿಸಿ ಎಎಪಿಯಿಂದ ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆ
- Lifestyle
ಮಾರ್ಚ್ ೨೦೨೧: ಇಲ್ಲಿದೆ ಶುಭ ಸಮಾರಂಭಕ್ಕೆ ಉತ್ತಮ ದಿನಾಂಕಗಳು
- Sports
ಐಎಸ್ಎಲ್: ಕೊನೆಯ ಪಂದ್ಯದಲ್ಲಿ ಒಡಿಶಾ ಮತ್ತು ಬೆಂಗಾಲ್ ಸೆಣಸು
- Automobiles
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏಪ್ರಿಲ್‌ನಲ್ಲಿ RRR ಹಾಡಿನ ಚಿತ್ರೀಕರಣ ಆರಂಭಿಸಲಿದ್ದಾರೆ ಆಲಿಯಾ ಭಟ್
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿರುವ ಚಿತ್ರ ಇದಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಎಲ್ಲ ದಾಖಲೆ ಉಡೀಸ್ ಮಾಡುವ ನಿರೀಕ್ಷೆ ಇದೆ.
ಸೌತ್ ಸೂಪರ್ ಸ್ಟಾರ್‌ಗಳ ಜೊತೆ ಬಾಲಿವುಡ್ ಇಂಡಸ್ಟ್ರಿಯಿಂದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಸಾಥ್ ನೀಡಿದ್ದಾರೆ. ರಾಮ್ ಚರಣ್‌ಗೆ ಜೋಡಿಯಾಗಿರುವ ಆಲಿಯಾ ಭಟ್ ಈಗಾಗಲೇ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಆಲಿಯಾ ಭಟ್ ಆರ್‌ಆರ್‌ಆರ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಜಯ್ ದೇವಗನ್ ಸಹ ರಾಜಮೌಳಿ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ.
ಇದೀಗ, ಆಲಿಯಾ ಭಟ್ ಮತ್ತೊಮ್ಮೆ ಆರ್‌ಆರ್‌ಆರ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಟಾಕಿ ಪೋಷನ್ ಶೂಟಿಂಗ್ ಮುಗಿಸಿದ್ದ ಆಲಿಯಾ ಎರಡು ಹಾಡುಗಳನ್ನು ಬಾಕಿ ಉಳಿಸಿಕೊಂಡಿದ್ದರು. ಈಗ, ಸಾಂಗ್ ಶೂಟಿಂಗ್‌ಗಾಗಿ ಮತ್ತೆ ಸೌತ್ ಇಂಡಸ್ಟ್ರಿಗೆ ಕಡೆ ಬರಲಿದ್ದಾರೆ.
ಆರ್‌ಆರ್‌ಆರ್ ಚಿತ್ರದ ವಿತರಣೆ ಹಕ್ಕು ಖರೀದಿಸಿದ ಲೈಕಾ ಪ್ರೊಡಕ್ಷನ್
ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಆಲಿಯಾ ಭಟ್ ಹೈದರಾಬಾದ್‌ಗೆ ಬರಲಿದ್ದಾರೆ. ರಾಮ್ ಚರಣ್ ತೇಜ ಜೊತೆಗಿನ ಎರಡು ಹಾಡುಗಳಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ. ಈ ಎರಡು ಹಾಡುಗಳು ಬಹಳ ವಿಶೇಷವಾಗಿರಲಿದ್ದು, ಹಿಂದೆಂದೂ ಕಾಣದ ರೀತಿಯಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಆರ್‌ಆರ್‌ಆರ್ ಚಿತ್ರ ಹೊರತುಪಡಿಸಿ 'ಗಂಗುಬಾಯಿ' ಸಿನಿಮಾದಲ್ಲಿ ಆಲಿಯಾ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಅಯನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾದಲ್ಲೂ ಇದ್ದಾರೆ.
ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13 ರಂದು ರಿಲೀಸ್ ಆಗಲಿದೆ. ತೆಲುಗು, ಹಿಂದಿ, ತೆಲುಗು, ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.