For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್‌ಗೆ ಬರುತ್ತಿರುವ ಆಲಿಯಾ ಭಟ್, ಚಿತ್ರತಂಡದಿಂದ ವಿಶೇಷ ವ್ಯವಸ್ಥೆ!

  |

  ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಹೈದರಾಬಾದ್‌ ಗೆ ಆಗಮಿಸುತ್ತಿದ್ದಾರೆ. ನವೆಂಬರ್ 2 ರಂದು ಆಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  ಆಲಿಯಾ ಭಟ್ ಅಭಿನಯಿಸುತ್ತಿರುವ ಬಹುತೇಕ ದೃಶ್ಯಗಳ ಚಿತ್ರೀಕರಣ ರಾಮೋಜಿ ಫಿಲಂ ಸಿಟಿಯಲ್ಲಿಯೇ ನಡೆಯಲಿದೆ, ಹಾಗೂ ಸುಮಾರು ಒಂದು ತಿಂಗಳ ಕಾಲ ಸತತವಾಗಿ ಆಲಿಯಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

  ಹಾಗಾಗಿ ಆಲಿಯಾ ಭಟ್ ಉಳಿದುಕೊಳ್ಳಲು ವಿಶೇಷ ವ್ಯವಸ್ಥೆಯನ್ನು ಚಿತ್ರತಂಡ ಮಾಡಿದೆ ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ, ಆಲಿಯಾ ಭಟ್, ರಾಮೋಜಿ ಫಿಲಂ ಸಿಟಿಯಲ್ಲಿಯೇ ಉಳಿದುಕೊಳ್ಳಲಿದ್ದಾರಂತೆ, ಹಾಗಾಗಿ ಕೆಲವು ವೀಶೆಷ ವ್ಯವಸ್ಥೆಗಳು ಮತ್ತು ಭದ್ರತೆಗಳನ್ನು ಚಿತ್ರತಂಡ ಆಲಿಯಾಗೋಸ್ಕರ ಮಾಡಲಿದೆ.

  ಗುಜರಾತ್, ಪುಣೆಗಳಲ್ಲಿ ಚಿತ್ರೀಕರಣ ಯೋಜಿಸಲಾಗಿತ್ತು

  ಗುಜರಾತ್, ಪುಣೆಗಳಲ್ಲಿ ಚಿತ್ರೀಕರಣ ಯೋಜಿಸಲಾಗಿತ್ತು

  ಈ ಮೊದಲಿಗೆ ಆಲಿಯಾ ಭಟ್ ಅಭಿನಯದ ದೃಶ್ಯಗಳನ್ನು ಹೈದರಾಬಾದ್, ಪುಣೆ, ಗುಜರಾತ್‌ ನಲ್ಲಿ ಚಿತ್ರೀಕರಿಸಲು ರಾಜಮೌಳಿ ನಿರ್ದೇಶಿಸಿದ್ದರು. ಆದರೆ ಕೊರೊನಾ ನಂತರ ಆಲಿಯಾ ಭಟ್ ಜೊತೆಗೆ ಇತರ ನಟರ ಕಾಲ್‌ಶೀಟ್‌ನಲ್ಲಿ ವ್ಯತ್ಯಾಸವಾದ ಕಾರಣ ಎಲ್ಲಾ ದೃಶ್ಯಗಳನ್ನೂ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿಯೇ ಚಿತ್ರೀಕರಿಸಲು ನಿರ್ಧರಿಸಿದ್ದಾರೆ ನಿರ್ದೇಶಕ ರಾಜಮೌಳಿ.

  ಒಂದು ತಿಂಗಳಲ್ಲಿ ಆಲಿಯಾ ಭಟ್ ಚಿತ್ರೀಕರಣ ಪೂರ್ಣ?

  ಒಂದು ತಿಂಗಳಲ್ಲಿ ಆಲಿಯಾ ಭಟ್ ಚಿತ್ರೀಕರಣ ಪೂರ್ಣ?

  ಒಟ್ಟಿಗೆ ಹಲವು ದಿನಗಳ ಕಾಲ್‌ಶೀಟ್ ಅನ್ನು ಆಲಿಯಾ ಭಟ್, ಆರ್‌ಆರ್‌ಆರ್ ತಂಡಕ್ಕೆ ನೀಡಿದ್ದಾರೆ. ಹಾಗಾಗಿ ಒಂದೇ ಷೆಡ್ಯೂಲ್‌ನಲ್ಲಿ ಸತತವಾಗಿ ಚಿತ್ರೀಕರಣ ಮುಗಿಸಲಿದ್ದಾರೆ ರಾಜಮೌಳಿ. ನವೆಂಬರ್ ತಿಂಗಳ ಅಂತ್ಯಕ್ಕೆ ಆಲಿಯಾ ಭಟ್ ಅವರ ಎಲ್ಲಾ ದೃಶ್ಯಗಳ ಚಿತ್ರೀಕರಣವೂ ಮುಗಿದುಹೋಗಲಿದೆಯಂತೆ.

  ಸೀತಾ ಪಾತ್ರದಲ್ಲಿ ಆಲಿಯಾ ಭಟ್

  ಸೀತಾ ಪಾತ್ರದಲ್ಲಿ ಆಲಿಯಾ ಭಟ್

  ಆರ್‌ಆರ್‌ಆರ್ ಸಿನಿಮಾದಲ್ಲಿ ಆಲಿಯಾ ಭಟ್, ರಾಮ್ ಚರಣ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಪಾತ್ರದ ಹೆಸರು ಸೀತಾ. ರಾಮ್ ಚರಣ್, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada
  ಇತಿಹಾಸ ತಿರುಚುತ್ತಿದ್ದಾರೆಯೇ ರಾಜಮೌಳಿ

  ಇತಿಹಾಸ ತಿರುಚುತ್ತಿದ್ದಾರೆಯೇ ರಾಜಮೌಳಿ

  ಇನ್ನುಳಿದಂತೆ ಆರ್‌ಆರ್‌ಆರ್‌ ನಿರ್ದೇಶಕ ರಾಜಮೌಳಿ ಮೇಲೆ ಇತಿಹಾಸ ತಿರುಚಿರುವ ಆರೋಪ ಕೇಳಿಬಂದಿದೆ. ಬುಡಕಟ್ಟು ನಾಯಕನಾಗಿದ್ದ ಕೋಮರಂ ಭೀಮ್ ಅನ್ನು ಸಿನಿಮಾದಲ್ಲಿ ಮುಸ್ಲಿಂ ವ್ಯಕ್ತಿಯಂತೆ ತೋರಿಸಲಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  English summary
  Actress Alia Bhatt will start shooting for RRR movie from November first week. She will be in Hyderabad till month end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X