For Quick Alerts
  ALLOW NOTIFICATIONS  
  For Daily Alerts

  ಸೋಲಿನಿಂದ ಹೊರಬರಲು ನಗ್ನವಾಗಿ ನಟಿಸಿದ್ರಾ ಸ್ಟಾರ್ ನಟ?

  |

  ಒಂದು ಸಮಯದಲ್ಲಿ ಈ ನಟನ ಚಿತ್ರಕ್ಕೆ ಕಣ್ಣು ಮುಚ್ಕೊಂಡು ದುಡ್ಡು ಹಾಕುತ್ತಿದ್ದರು ನಿರ್ಮಾಪಕರು. ಯಾಕಂದ್ರೆ ಈ ನಟನ ಚಿತ್ರಕ್ಕೆ ಬಂಡವಾಳ ಹಾಕಿದ್ರೆ ಕನಿಷ್ಠ ಲಾಭ ಪಕ್ಕಾ ಎನ್ನುವ ಕಾಲವೊಂದಿತ್ತು. ಆದ್ರೀಗ, ಈ ನಟನ ಚಿತ್ರಗಳು ನಿರೀಕ್ಷೆ ಸಕ್ಸಸ್ ಕಾಣುತ್ತಿಲ್ಲ.

  ಚಿತ್ರೀಕರಣದಲ್ಲಿ ನಟ ಪ್ರಭಾಸ್: ಸಿನಿಮಾ ಸೆಟ್ಟಿಂದ ರಿವೀಲ್ ಆಯ್ತು ಭರ್ಜರಿ ಫೋಟೋಚಿತ್ರೀಕರಣದಲ್ಲಿ ನಟ ಪ್ರಭಾಸ್: ಸಿನಿಮಾ ಸೆಟ್ಟಿಂದ ರಿವೀಲ್ ಆಯ್ತು ಭರ್ಜರಿ ಫೋಟೋ

  ಕಾಮಿಡಿ, ಮಾಸ್, ಕ್ಲಾಸ್ ಎಲ್ಲ ರೀತಿಯ ಕಥೆಗಳನ್ನು ಮಾಡಿದ ಬಳಿಕ ಈಗ ಪ್ರಯೋಗಾತ್ಮಕ ಚಿತ್ರದ ಮೊರೆ ಹೋಗಿದ್ದಾರೆ. ಹೌದು, ತೆಲುಗು ನಟ ಅಲ್ಲರಿ ನರೇಶ್ ಈಗ ಹೊಸ ಸಿನಿಮಾ ಮಾಡ್ತಿದ್ದು, ಈ ಚಿತ್ರದಲ್ಲಿ ನಗ್ನವಾಗಿ ನಟಿಸಿದ್ದಾರೆ ಎಂಬ ಸುದ್ದಿ ಈಗ ವೈರಲ್ ಆಗಿದೆ. ಮುಂದೆ ಓದಿ...

  ನಾಂದಿ ಚಿತ್ರದ ಫಸ್ಟ್ ಲುಕ್!

  ನಾಂದಿ ಚಿತ್ರದ ಫಸ್ಟ್ ಲುಕ್!

  ತೆಲುಗು ನಟ ಅಲ್ಲರಿ ನರೇಶ್ ನಟಿಸುತ್ತಿರುವ ಹೊಸ ಸಿನಿಮಾ ನಾಂದಿ. ಈ ಚಿತ್ರದ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದ್ದು, ಪೋಸ್ಟರ್ ಸಂಚಲನ ಸೃಷ್ಟಿಸುತ್ತಿದೆ. ಈ ಪೋಸ್ಟರ್ ನಲ್ಲಿ ನರೇಶ್ ನಗ್ನವಾಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಒಂದು ಕಡೆಯಾದ್ರೆ, ಹಿಂಸಾತ್ಮಕವಾಗಿ ಹೊಡೆದೆ ತಲೆಕೆಳಗಾಗಿ ನೇತು ಹಾಕಿರುವ ಲುಕ್ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

  ಸುದೀಪ್ ಗೆ ರಾಜಮೌಳಿ ಬುಲಾವ್ ನೀಡಿಲ್ಲ: ಗಾಸಿಪ್ ಗೆ ಸ್ಪಷ್ಟನೆ ಕೊಟ್ಟ ಕಿಚ್ಚ.!ಸುದೀಪ್ ಗೆ ರಾಜಮೌಳಿ ಬುಲಾವ್ ನೀಡಿಲ್ಲ: ಗಾಸಿಪ್ ಗೆ ಸ್ಪಷ್ಟನೆ ಕೊಟ್ಟ ಕಿಚ್ಚ.!

  ಮಹರ್ಷಿ ನಂತರ ಬಂದ ನರೇಶ್

  ಮಹರ್ಷಿ ನಂತರ ಬಂದ ನರೇಶ್

  ನಾಯಕನಾಗಿ ಸೋಲೋ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದ ನರೇಶ್, ಕಳೆದ ವರ್ಷ ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದರು. ಈ ಪಾತ್ರಕ್ಕೆ ಮೆಚ್ಚುಗೆಗೂ ವ್ಯಕ್ತವಾಗಿತ್ತು. ಕಳೆದು ಹೋಗಿದ್ದ ನರೇಶ್ ಮತ್ತೆ ಟಾಲಿವುಡ್ ಪ್ರೇಕ್ಷಕರ ಗಮನ ಸೆಳೆದಿದ್ದರು.

  ನಿರಾಸೆ ಮಾಡಿದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್!ನಿರಾಸೆ ಮಾಡಿದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್!

  ನಿರ್ಮಾಣಕ್ಕೆ ಕೈ ಹಾಕಿದ ನರೇಶ್

  ನಿರ್ಮಾಣಕ್ಕೆ ಕೈ ಹಾಕಿದ ನರೇಶ್

  ಸುಮಾರು 50ಕ್ಕೂ ಅಧಿಕ ಚಿತ್ರಗಳನ್ನ ಮಾಡಿರುವ ನರೇಶ್ ಅವರಿಗೆ ಇದು 57ನೇ ಚಿತ್ರ. ವಿಶೇಷ ಅಂದ್ರೆ ಈ ಚಿತ್ರಕ್ಕೆ ನರೇಶ್ ಸಹ ನಿರ್ಮಾಪಕನಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿರುವ ಚಿತ್ರ, ಇಂದಿನಿಂದ ಚಿತ್ರೀಕರಣವನ್ನು ಆರಂಭಿಸಿದೆ. ವಿಜಯ್ ಕನಕಮೆಡಲಾ ಈ ಚಿತ್ರಕ್ಕೆ ಚಿತ್ರಕಥೆ ಮಾಡಿ ನಿರ್ದೇಶನ ಮಾಡುತ್ತಿದ್ದಾರೆ.

  ವರಲಕ್ಷ್ಮಿ ಶರತ್ ಕುಮಾರ್ ನಟನೆ

  ವರಲಕ್ಷ್ಮಿ ಶರತ್ ಕುಮಾರ್ ನಟನೆ

  ಎಸ್ ವಿ 2 ಪ್ರೊಡಕ್ಷನ್ ಅಡಿ ನಿರ್ಮಾಣ ಆಗುತ್ತಿರುವ ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರವೀಣ್, ಪ್ರಿಯದರ್ಶನಿ, ದೇವಿ ಪ್ರಸಾದ್ ನಟಿಸುತ್ತಿದ್ದಾರೆ. ಶ್ರೀ ಚರಣ್ ಪಾಕ್ಲಾ ಸಂಗೀತ ನೀಡುತ್ತಿದ್ದು, ಇದೇ ವರ್ಷ ತೆರೆಗೆ ಬರಲಿದೆ.

  English summary
  Telugu actor Allari Naresh starrer new movie Naandi first look release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X