For Quick Alerts
  ALLOW NOTIFICATIONS  
  For Daily Alerts

  ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ರಿಷಬ್‌ ಶೆಟ್ಟಿಗೆ ಬಂಪರ್ ಆಫರ್: ಒಂದೇ ಮಾತಲ್ಲಿ ಡೀಲ್ ಕುದುರಿಸಿದ ಅಲ್ಲು ಅರವಿಂದ್!

  |

  'ಕಾಂತಾರ' ಸಿನಿಮಾ ಸಕ್ಸಸ್‌ ನಂತರ ವಾಟ್‌ ನೆಕ್ಸ್ಟ್ ಎನ್ನುವ ಪ್ರಶ್ನೆ ರಿಷಬ್ ಶೆಟ್ಟಿ ಮುಂದಿದೆ. ಅಭಿಮಾನಿಗಳು ಕೂಡ 'ಕಾಂತಾರ' ಸೀಕ್ವೆಲ್ ಬರುತ್ತಾ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಅತ್ತ ಟಾಲಿವುಡ್‌ನಲ್ಲೂ ಸಿನಿಮಾ ಸೂಪರ್ ಹಿಟ್ ಆಗಿದೆ. ಸಕ್ಸಸ್ ಪ್ರೆಸ್‌ಮೀಟ್‌ನಲ್ಲೇ ರಿಷಬ್ ಶೆಟ್ಟಿ ಜೊತೆಗೆ ನಿರ್ಮಾಪಕ ಅಲ್ಲು ಅರವಿಂದ್ ಸಿನಿಮಾ ಘೋಷಿಸಿದ್ದಾರೆ. ಶೆಟ್ರು ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

  ತೆಲುಗಿಗೆ ಡಬ್ ಆಗಿ ಶನಿವಾರ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ನಾಲ್ಕೇ ದಿನಕ್ಕೆ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡ ಸಿನಿಮಾವೊಂದು ಡಬ್ ಆಗಿ ಈ ಪಾಟಿ ಸದ್ದು ಮಾಡ್ತಿರೋದು ಟಾಲಿವುಡ್ ಮಂದಿಗೂ ಅಚ್ಚರಿ ತಂದಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 'ಕಾಂತಾರ' ಸಿನಿಮಾ ವಿತರಣೆಯ ಹಕ್ಕು ಖರೀದಿಸಿದ್ದರು. ಚಿತ್ರದಿಂದ ಒಳ್ಳೆ ಲಾಭವೇ ಬರ್ತಿದೆ. ಇದರ ಬೆನ್ನಲ್ಲೇ ಹೈದರಾಬಾದ್‌ ಪ್ರಸಾದ್ ಲ್ಯಾಬ್‌ನಲ್ಲಿ ಸಕ್ಸಸ್ ಮೀಟ್ ಮಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಇದು ರಿಷಬ್ ಶೆಟ್ಟಿ ಮಾಡಿದ ಚಿತ್ರವಲ್ಲ; ವಿದೇಶದಲ್ಲಿ 'ಕಾಂತಾರ' ವೀಕ್ಷಿಸಿದ ಜಗ್ಗೇಶ್ ಹೇಳಿದ್ದಿಷ್ಟುಇದು ರಿಷಬ್ ಶೆಟ್ಟಿ ಮಾಡಿದ ಚಿತ್ರವಲ್ಲ; ವಿದೇಶದಲ್ಲಿ 'ಕಾಂತಾರ' ವೀಕ್ಷಿಸಿದ ಜಗ್ಗೇಶ್ ಹೇಳಿದ್ದಿಷ್ಟು

  ಸದ್ಯ ರಿಷಬ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 'ರುದ್ರಪ್ರಯಾಗ' ಎನ್ನುವ ಸಿನಿಮಾ ನಿರ್ದೇಶನ ಮಾಡುವುದಾಗಿಯೂ ಘೋಷಿಸಿದ್ದಾರೆ. ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ಜೊತೆಗೆ ಅಲ್ಲು ಅರವಿಂದ್ ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೆ ಶೆಟ್ರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

  ರಿಷಬ್ ಜೊತೆ ಸಿನಿಮಾ ಘೋಷಿಸಿದ ಅರವಿಂದ್

  ರಿಷಬ್ ಜೊತೆ ಸಿನಿಮಾ ಘೋಷಿಸಿದ ಅರವಿಂದ್

  ಹೈದರಾಬಾದ್‌ನಲ್ಲಿ 'ಕಾಂತಾರ' ತೆಲುಗು ಸಕ್ಸಸ್ ಮೀಟ್ ನಡೀತು. ಅಲ್ಲು ಅರವಿಂದ್ ಜೊತೆಗೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಭಾಗವಹಿಸಿ ತೆಲುಗು ಪ್ರೇಕ್ಷಕರು ನೀಡಿದ ಪ್ರೀತಿಗೆ ಧನ್ಯವಾದ ತಿಳಿಸಿದರು. ಅಲ್ಲು ಅರವಿಂದ್ ಮಾತನಾಡಿ ಬನ್ನಿ ವಾಸು ಬಂದು ತಮಗೆ 'ಕಾಂತಾರ' ನೋಡಲು ಹೇಳಿದ್ದು, ಸಿನಿಮಾ ನೋಡಿದ ಅನುಭವ ಹೇಗಿತ್ತು. ನಂತರ ರಿಷಬ್ ಶೆಟ್ಟಿ ಜೊತೆ ಸಿನಿಮಾ ಬಗ್ಗೆ ಚರ್ಚಿಸಿದ್ದು, ಮುಂದೆ ಡಬ್ ಮಾಡಿ ರಿಲೀಸ್ ಮಾಡಿದ್ದು ಎಲ್ಲದರ ಬಗ್ಗೆಯೂ ಮಾತನಾಡಿದರು. ಕೊನೆಗೆ ರಿಷಬ್ ಶೆಟ್ಟಿ ಜೊತೆ ತಮ್ಮ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದೇನೆ, ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ.

  'ಕಾಂತಾರ' ಚಿತ್ರದಲ್ಲಿ ಭೂತಕೋಲದ ಬಗ್ಗೆ ಸುಳ್ಳು ಹೇಳಲಾಗಿದೆ, ಸತ್ಯಾಂಶ ತೋರಿಸಿ ಎಂದ ನಟ ಚೇತನ್!'ಕಾಂತಾರ' ಚಿತ್ರದಲ್ಲಿ ಭೂತಕೋಲದ ಬಗ್ಗೆ ಸುಳ್ಳು ಹೇಳಲಾಗಿದೆ, ಸತ್ಯಾಂಶ ತೋರಿಸಿ ಎಂದ ನಟ ಚೇತನ್!

  ಮುಂದಿನ ಸಿನಿಮಾ ಬಗ್ಗೆ ರಿಷಬ್ ಏನಂದ್ರು?

  ಮುಂದಿನ ಸಿನಿಮಾ ಬಗ್ಗೆ ರಿಷಬ್ ಏನಂದ್ರು?

  ಇನ್ನು ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಭಾರೀ ಕುತೂಹಲ ಇದೆ. 'ಕಾಂತಾರ' ಸೀಕ್ವೆಲ್ ಬರುತ್ತೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ರಿಷಬ್ ಶೆಟ್ಟಿ ಮಾತನಾಡಿ ಸದ್ಯಕ್ಕೆ ಸೀಕ್ವೆಲ್ ಬಗ್ಗೆ ಯಾವುದೇ ಆಲೋಚನೆ ಇಲ್ಲ. ನಾನೊಂದು ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತೇನೆ ಮುಂದೆ ನೋಡಬೇಕು ಯಾವ ಸಿನಿಮಾ ಮಾಡುವುದು ಹೇಳಿದ್ದಾರೆ.

  ಅಲ್ಲು ಅರವಿಂದ್ 2 ಕನ್ನಡ ಚಿತ್ರಗಳು

  ಅಲ್ಲು ಅರವಿಂದ್ 2 ಕನ್ನಡ ಚಿತ್ರಗಳು

  ನಿರ್ಮಾಪಕ ಅಲ್ಲು ಅರವಿಂದ್‌ಗೆ ಕನ್ನಡ ಚಿತ್ರರಂಗ ಹೊಸದೇನು ಅಲ್ಲ. ಕಳೆದ 45 ವರ್ಷಗಳಿಂದ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಾಕಷ್ಟು ಸಿನಿಮಾಗಳನ್ನು ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ. ಹಲವು ಸಿನಿಮಾಗಳನ್ನು ಡಿಸ್ಟ್ರಿಬ್ಯೂಷನ್ ಮಾಡಿದ್ದಾರೆ. ವಿಶೇಷ ಅಂದರೆ ಕನ್ನಡದಲ್ಲೂ 2 ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ರವಿಚಂದ್ರನ್ ನಟನೆಯ 'ಮಾಂಗಲ್ಯಂ ತಂತುನಾನೇನ' ಚಿತ್ರವನ್ನು ಅಲ್ಲು ಅರವಿಂದ್ ನಿರ್ಮಿಸಿದ್ದರು. ರಾಕ್‌ಲೈನ್ ವೆಂಕಟೇಶ್ ಜೊತೆ ಸೇರಿ 'ಸುಂದರಾಂಗ ಜಾಣ' ಚಿತ್ರಕ್ಕೂ ಬಂಡವಾಳ ಹಾಕಿದ್ದರು. ಹಾಗಾಗಿ ಕನ್ನಡದಲ್ಲೇ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಾ ನೋಡಬೇಕು.

  'ಕಾಂತಾರ' ತೆಲುಗು ವರ್ಷನ್ ಸೂಪರ್ ಹಿಟ್

  'ಕಾಂತಾರ' ತೆಲುಗು ವರ್ಷನ್ ಸೂಪರ್ ಹಿಟ್

  ತೆಲುಗು ರಾಜ್ಯಗಳಲ್ಲಿ 'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. 4 ದಿನಕ್ಕೆ ಅಂದಾಜು 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ. ಬಹಳ ಕಡಿಮೆ ಮೊತ್ತಕ್ಕೆ ವಿತರಣೆಯ ಹಕ್ಕು ಖರೀದಿಸಿದ್ದ ಅಲ್ಲು ಅರವಿಂದ್ ಭರ್ಜರಿ ಲಾಭ ಮಾಡುತ್ತಿದ್ದಾರೆ. ಚಿರಂಜೀವಿ ನಟನೆಯ 'ಗಾಡ್‌ಫಾದರ್' ಚಿತ್ರಕ್ಕೂ ಟಕ್ಕರ್ ಕೊಟ್ಟಿದೆ. ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಈ ವೀಕೆಂಡ್‌ನಿಂದಲೇ ದೀಪಾವಳಿ ಸಂಭ್ರಮ ಶುರುವಾಗಲಿದೆ. ದೀಪಾವಳಿ ಹಬ್ಬದ ರಜೆಯಲ್ಲಿ ಸಿನಿಮಾ ಮತ್ತಷ್ಟು ಸದ್ದು ಮಾಡುವ ಸುಳಿವು ಸಿಕ್ತಿದೆ. ದೇಶ ವಿದೇಶಗಳಲ್ಲಿ 'ಕಾಂತಾರ' ಸಿನಿಮಾ ದರ್ಬಾರ್ ಜೋರಾಗಿದೆ.

  English summary
  Allu Aravind announces a film with Rishab Shetty at the Success meet of Kantara. Rishab Shetty clarified that nothing was planned about a possible Kantara sequel and he will be taking a short break. know More.
  Wednesday, October 19, 2022, 17:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X