For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್ ನಲ್ಲಿ ತಲೆಯೆತ್ತಲಿದೆ ಅಲ್ಲು ಅರ್ಜುನ್ ಕನಸಿನ ಅರಮನೆ.!

  |

  ಕಳೆದ ವರ್ಷವಷ್ಟೇ ಹೈದರಾಬಾದ್ ನ ಜ್ಯೂಬಿಲಿ ಹಿಲ್ಸ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಒಡೆತನದ ಅರಮನೆಯ ಗೃಹಪ್ರವೇಶ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಇನ್ನೂ ನಟ ರಾಮ್ ಚರಣ್ ತೇಜಾ ಕೂಡ ಬರೋಬ್ಬರಿ 80 ಕೋಟಿ ರೂಪಾಯಿ ಖರ್ಚು ಮಾಡಿ ಬಂಗಲೆಯನ್ನ ನಿರ್ಮಿಸಿರೋದು ನಿಮ್ಗೆ ಗೊತ್ತೇ ಇದೆ. ಇದೀಗ ಅಲ್ಲು ಅರ್ಜುನ್ ಕೂಡ ಅಕ್ಷರಶಃ ಪ್ಯಾಲೆಸ್ ರೀತಿ ತಮ್ಮ ಫ್ಯಾಮಿಲಿಗಾಗಿ ಮನೆ ನಿರ್ಮಿಸುತ್ತಿದ್ದಾರೆ.

  ಹೈದರಾಬಾದ್ ನಲ್ಲಿರುವ ಸಂಬಂಧಿಯೊಬ್ಬರ ಬೃಹತ್ ಬಂಗಲೆ ನೋಡಿ ಇಂಪ್ರೆಸ್ ಆಗಿರುವ ಅಲ್ಲು ಅರ್ಜುನ್, ಅದೇ ರೀತಿ ತಮ್ಮ ಕುಟುಂಬಕ್ಕಾಗಿ ಅರಮನೆ ನಿರ್ಮಿಸಲು ಪ್ಲಾನ್ ರೆಡಿ ಮಾಡಿದ್ದಾರೆ. ಮುಂದೆ ಓದಿರಿ...

  ಕನಸಿನ ಅರಮನೆ

  ಕನಸಿನ ಅರಮನೆ

  ತಂದೆ ಅಲ್ಲು ಅರವಿಂದ್ ರವರ ಹೆಸರಿನಲ್ಲಿರುವ ಜಾಗದಲ್ಲಿ ತಮ್ಮ ಕನಸಿನ ಅರಮನೆಯನ್ನು ನಿರ್ಮಿಸುತ್ತಿದ್ದಾರೆ ಅಲ್ಲು ಅರ್ಜುನ್. ಈಗಾಗಲೇ ಆರ್ಕಿಟೆಕ್ಟ್ ಜೊತೆಗೆ ಮಾತುಕತೆ ನಡೆಸಿರುವ ಅಲ್ಲು ಅರ್ಜುನ್, ಕನಸಿನ ಅರಮನೆಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಸುರಿಯಲು ತಯಾರಿ ಮಾಡಿಕೊಂಡಿದ್ದಾರೆ.

  'ಬಾಹುಬಲಿ' ಪ್ರಭಾಸ್ ರೆಕಾರ್ಡ್ ನ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್.!

  ಇಂಟರ್ ನ್ಯಾಷನಲ್ ಸ್ಟೈಲ್

  ಇಂಟರ್ ನ್ಯಾಷನಲ್ ಸ್ಟೈಲ್

  ಅಲ್ಲು ಅರ್ಜುನ್ ಪ್ಲಾನ್ ಮಾಡಿಕೊಂಡಿರುವ ಪ್ರಕಾರ, ತಮ್ಮ ಪ್ಯಾಲೆಸ್ ನ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ ಅಂತಾರಾಷ್ಟ್ರೀಯ ಶೈಲಿಯಲ್ಲಿರಲಿದೆ. ಅರಮನೆಯ ಬ್ಲೂ ಪ್ರಿಂಟ್ ನಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್, ಟೆನ್ನಿಸ್ ಕೋರ್ಟ್ ಕೂಡ ಇದೆ. ಈಗಾಗಲೇ ಅರಮನೆ ನಿರ್ಮಿಸುವ ಕೆಲಸಕ್ಕೆ ಅಲ್ಲು ಅರ್ಜುನ್ ಕುಟುಂಬ ಚಾಲನೆ ನೀಡಿದೆ.

  ಅಲ್ಲು ಅರ್ಜುನ್ ಜೊತೆಗಿನ ಕದನ: ಪ್ರಿನ್ಸ್ ಮಹೇಶ್ ಬಾಬು ಬಾಯ್ಬಿಟ್ಟಿದ್ದೇನು.?

  ಸಂತಸದಲ್ಲಿ ಅಲ್ಲು ಅರ್ಜುನ್

  ಸಂತಸದಲ್ಲಿ ಅಲ್ಲು ಅರ್ಜುನ್

  ಇನ್ನೂ ಅಲ್ಲು ಅರ್ಜುನ್ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, 'ಅಲಾ ವೈಕುಂಠಪುರಮುಲೋ' ಚಿತ್ರದ ಸಕ್ಸಸ್ ನಿಂದಾಗಿ ಸದ್ಯ ಸ್ಟೈಲಿಶ್ ಸ್ಟಾರ್ ಸಂತಸದಲ್ಲಿ ತೇಲಾಡುತ್ತಿದ್ದಾರೆ. 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 'ಅಲಾ ವೈಕುಂಠಪುರಮುಲೋ' ಬಾಕ್ಸ್ ಆಫೀಸ್ ನಲ್ಲಿ ಮುನ್ನುಗ್ಗುತ್ತಿದೆ.

  ಸೋದರ ಮಾವನನ್ನು ಕಳೆದುಕೊಂಡ ದುಃಖದಲ್ಲಿ ನಟ ಅಲ್ಲು ಅರ್ಜುನ್

  ಅಲ್ಲು ಅರ್ಜುನ್ ಮುಂದಿನ ಚಿತ್ರ.?

  ಅಲ್ಲು ಅರ್ಜುನ್ ಮುಂದಿನ ಚಿತ್ರ.?

  ಹೀಗಿರುವಾಗಲೇ, ನಿರ್ದೇಶಕ ಸುಕುಮಾರ್ ಜೊತೆಗೆ ಚಿತ್ರ ಮಾಡಲು ಅಲ್ಲು ಅರ್ಜುನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲು ಅರ್ಜುನ್ ಅಭಿನಯದ 20ನೇ ಚಿತ್ರ ಇದಾಗಿದ್ದು, ಇಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ಡ್ಯುಯೆಟ್ ಹಾಡಲಿದ್ದಾರೆ.

  ಸ್ಯಾಂಡಲ್ ವುಡ್ ಮಾಫಿಯಾ ಬಗ್ಗೆ ಚಿತ್ರ.?

  ಸ್ಯಾಂಡಲ್ ವುಡ್ ಮಾಫಿಯಾ ಬಗ್ಗೆ ಚಿತ್ರ.?

  ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಶನ್ ನ ಈ ಚಿತ್ರಕ್ಕೆ 'ಶೇಷಾಚಲಂ' ಎಂದು ಹೆಸರಿಡಲಾಗಿದೆ (ಇನ್ನೂ ಅಧಿಕೃತ ಆಗಿಲ್ಲ). ಸ್ಯಾಂಡಲ್ ವುಡ್ (ಗಂಧ) ಮಾಫಿಯಾ ಸುತ್ತ ಚಿತ್ರಕಥೆ ಹೆಣೆಯಲಾಗಿದ್ದು, ಸಿನಿಮಾದಲ್ಲಿ ಲಾರಿ ಡ್ರೈವರ್ ಆಗಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ತೂರು ಮತ್ತು ನೆಲ್ಲೂರಿನ ಶೇಷಾಚಲಂ ಕಾಡಿನಲ್ಲಿ ಚಿತ್ರೀಕರಣ ಮಾಡಲು ನಿರ್ದೇಶಕ ಸುಕುಮಾರ್ ಸಿದ್ಧತೆ ಮಾಡಿಕೊಂಡಿದ್ದಾರೆ.

  English summary
  Tollywood Actor Allu Arjun to build a big palatial residence in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X