Don't Miss!
- News
Bengaluru-Mysuru Bypass open: ಬಣಗುಡುತ್ತಿರುವ ಮಂಡ್ಯ, ಹೆದ್ದಾರಿ, ವ್ಯಾಪಾರ ವಹೀವಾಟು ಕುಸಿತ
- Finance
Economic Survey: ನವೆಂಬರ್ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ
- Sports
IND vs NZ 3rd T20: ಪ್ರಮುಖ ವೇಗಿಯನ್ನು ತಂಡದಿಂದ ಬಿಡುಗಡೆ ಮಾಡಿದ ಟೀಂ ಇಂಡಿಯಾ
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೀರ್ತಿ ಸುರೇಶ್ ಅಲ್ಲ, ನಿತ್ಯಾ ಅಲ್ಲ..'ಮಹಾನಟಿ' ಸಿನಿಮಾಗೆ ಮೊದಲು ಆಯ್ಕೆ ಆಗಿದ್ದು ಈ ಸ್ಟಾರ್ ನಟಿ
'ಮಹಾನಟಿ' ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ. ಈ ಸಿನಿಮಾ ಮೂಲಕ ನಟಿ ಕೀರ್ತಿ ಸುರೇಶ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಖ್ಯಾತಿಗಳಿಸಿದರು. ಮಹಾನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕೀರ್ತಿ ಅಭಿನಯಕ್ಕೆ ಚಿತ್ರಪ್ರಿಯರು ಫಿದಾ ಆಗಿದ್ದಾರೆ.
Recommended Video
ಈ ಪಾತ್ರಕ್ಕಾಗಿ ನಟಿ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಒಲಿದು ಬಂದಿದೆ. ದಕ್ಷಿಣ ಭಾರತದ ಲೆಜೆಂಡರಿ ನಟಿ ಸಾವಿತ್ರಿ ಅವರ ಜೀವನದ ಆಧಾರದ ಸಿನಿಮಾ ಇದಾಗಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ.
ಅಮಲೇರಿಸುವ
ಬೆಡಗಿ
ಅಮಲಾ
ಪೌಲ್
ಬಿಕಿನಿ
ಫೋಟೋ
ವೈರಲ್
ಅಂದ್ಹಾಗೆ ಮಹಾನಟಿ ಸಿನಿಮಾಗೆ ಕೀರ್ತಿ ಸುರೇಶ್ ಆಯ್ಕೆಯಾಗುವ ಮೊದಲು ನಟಿ ನಿತ್ಯಾ ಮೆನನ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ನಿತ್ಯಾ ಈ ಸಿನಿಮಾ ಮಾಡಲು ಮನಸ್ಸು ಮಾಡಲಿಲ್ಲ ಆದರೆ ಅದಕ್ಕು ಮೊದಲು ಸಿನಿಮಾಗೆ ಆಯ್ಕೆಯಾಗಿದ್ದು ನಟಿ ಅಮಲಾ ಪೌಲ್. ಮುಂದೆ ಓದಿ...

ಅಮಲಾ ಪೌಲ್ ಮಾಡಬೇಕಿದ್ದ ಸಿನಿಮಾವಿದು
ಮಹಾನಟಿ ಸಿನಿಮಾ ಆಯೋಜಕರು ಮೊದಲು ಆಯ್ಕೆ ಮಾಡಿದ್ದು ನಟಿ ಅಮಲಾ ಪೌಲ್ ಅವರನ್ನು. ಚಿತ್ರತಂಡ ಮೊದಲು ಅಮಲಾ ಪೌಲ್ ಬಳಿ ಹೋಗಿದ್ದಾರೆ. ಆದರೆ ಅಮಲಾ ಈ ಸಿನಿಮಾ ಮಾಡಲು ನಿರಾಕರಿಸಿದ್ದಾರೆ ಎನ್ನುವ ಸತ್ಯ ಈಗ ರಿವೀಲ್ ಆಗಿದೆ. ಈ ಬಗ್ಗೆ ನಟಿ ಅಮಲಾ ವೆಬ್ ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
'ಹೆಬ್ಬುಲಿ'
ನಾಯಕಿ
ಅಮಲಾ
ಪೌಲ್
ಮಾಜಿ
ಪತಿಗೆ
ಗಂಡು
ಮಗು

ವೈಯಕ್ತಿಕ ಸಮಸ್ಯೆಯಿಂದ ಸಿನಿಮಾ ರಿಜೆಕ್ಟ್
"ನಾನು ಆಗ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಹಾಗಾಗಿ ಮಹಾನಟಿ ಸಿನಿಮಾ ಮಾಡಲು ಸಾಧ್ಯವಾಗಿಲ್ಲ. ಮಹಾನಟಿ ಸಿನಿಮಾತಂಡ ಮೊದಲು ನನ್ನನ್ನು ಸಂಪರ್ಕ ಮಾಡಿದ್ದು ನಿಜ" ಎಂದು ಹೇಳಿದ್ದಾರೆ. ಅಮಲಾ ವೃತ್ತಿ ಜೀವನದಲ್ಲಿ ಅತ್ಯುತ್ತಮ ಸಿನಿಮಾವನ್ನು ಕಳೆದುಕೊಂಡರು, ಉತ್ತಮ ಪಾತ್ರಗಳನ್ನು ಮಾಡುತ್ತ ಅಭಿಮಾನಿಗಳ ಮನಗೆದ್ದಿದ್ದಾರೆ.

ಮಹಾನಟಿ ಸಿನಿಮಾ ನಿರಾಕರಿಸಿದ್ದ ನಿತ್ಯಾ
ಅಮಲಾ ರಿಜೆಕ್ಟ್ ಮಾಡಿದ ನಂತರ ಆಯೋಜಕರು ನಿತ್ಯಾ ಮೆನನ್ ಬಳಿ ಹೋಗಿದ್ದಾರೆ. ಆದರೆ ನಿತ್ಯಾ ಕೂಡ ಈ ಸಿನಿಮಾವನ್ನು ನಿರಾಕರಿಸಿದ್ದಾರೆ. ಡೇಟ್ ಸಮಸ್ಯೆಯಿಂದ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಎಂದು ನಿತ್ಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇನ್ನೊಂದುಕಡೆ ಸಿನಿಮಾಗಾಗಿ ತೂಕ ಇಳಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಈ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಅಂತನೂ ಹೇಳಲಾಗುತ್ತಿತ್ತು.

ಮಹಾನಟಿ ಸಿನಿಮಾ ಬಗ್ಗೆ
ಮಹಾನಟಿ ಖ್ಯಾತ ನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ. ಚಿತ್ರದಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇನ್ನೂ ಮಲಯಾಳಂ ಖ್ಯಾತ ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ, ಸಮಂತಾ ಅಕ್ಕಿನೇನಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.