For Quick Alerts
  ALLOW NOTIFICATIONS  
  For Daily Alerts

  'ವಿ' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಅಮೇಜಾನ್ ಪ್ರೈಮ್

  |

  ತೆಲುಗು ನಟ ನಾನಿ ಮತ್ತು ಸುಧೀರ್ ಬಾಬು ಅಭಿನಯದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ವಿ' ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಸೆಪ್ಟೆಂಬರ್ 5 ರಂದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ವಿ ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಮುಂಚೆ ಚಿತ್ರದ ಟ್ರೈಲರ್‌ನ್ನು ಅಮೇಜಾನ್ ಪ್ರೈಂ ವೆಬ್‌ಸೈಟ್‌ ಅಧಿಕೃತವಾಗಿ ರಿಲೀಸ್ ಮಾಡಿದೆ.

  ಅಮೇಜಾನ್ ಪ್ರೈಂನಲ್ಲಿ ತೆಲುಗು ನಟ ನಾನಿಯ 25ನೇ ಚಿತ್ರ ಬಿಡುಗಡೆ

  'ವಿ' ಸಿನಿಮಾ ಕಳ್ಳ-ಪೋಲಿಸ್ ನಡುವಿನ ರೋಚಕ ಆಟ ಎನ್ನುವಂತೆ ಕಾಣುತ್ತಿದೆ. ಸೂಪರ್ ಕಾಪ್ ಮತ್ತು ಸೀರಿಯಲ್ ಕಿಲ್ಲರ್ ನಡುವಿನ ರೋಚಕ ಮುಖಾಮುಖಿಯ ಕಥಾಹಂದರ ಹೊಂದಿರುವ ಚಿತ್ರ 'ವಿ'. ಮೋಹನ ಕೃಷ್ಣ ಇಂದ್ರಗಂತಿ ನಿರ್ದೇಶನದ ಮತ್ತು ಬರೆದಿರುವ ಈ ಚಿತ್ರದಲ್ಲಿ 'ನ್ಯಾಚುರಲ್ ಸ್ಟಾರ್' ನಾನಿ ಮತ್ತು ಸುಧೀರ್ ಬಾಬು ಮುಖ್ಯ ಪಾತ್ರಗಳಲ್ಲಿದ್ದಾರೆ. ಜೊತೆಗೆ ನಿವೇತಾ ಥಾಮಸ್ ಮತ್ತು ಅದಿತಿ ರಾವ್ ಹೈದರಿ ನಾಯಕಿಯಾಗಿದ್ದಾರೆ.

  'ಈ ಚಲನಚಿತ್ರವು ನನಗೆ ವಿಶೇಷವಾಗಿದೆ - ಏಕೆಂದರೆ ಇದು ನನ್ನ 25ನೇ ಚಿತ್ರವಾಗಿದೆ. ನನ್ನ ಎಲ್ಲ ಅಭಿಮಾನಿಗಳನ್ನು ಗೌರವಿಸಲು ಇಂತಹ ಆಸಕ್ತಿದಾಯಕ ಮಾರ್ಗವನ್ನು ಕಂಡುಕೊಂಡಿರುವುದು ನಿಜಕ್ಕೂ ರೋಮಾಂಚನಕಾರಿಯಾಗಿದೆ. ಟ್ರೈಲರ್ ಆಕ್ಷನ್-ಪ್ಯಾಕ್ಡ್, ಎಡ್ಜ್-ಆಫ್-ದಿ-ಸೀಟ್ ಥ್ರಿಲ್ ಅನ್ನು ಒಳಗೊಂಡಿದ್ದು, ಆಕ್ಷನ್ ಚಲನಚಿತ್ರದ ಭರವಸೆ ನೀಡುತ್ತದೆ' ಎಂದು ನಾನಿ ತಿಳಿಸಿದ್ದಾರೆ.

  ಇನ್ನು ಸುದೀರ್ ಬಾಬು ಮಾತನಾಡಿ 'ಟ್ರೈಲರ್ ಲಾಂಚ್‌ನಲ್ಲಿ ಅಭಿಮಾನಿಗಳು ಭಾಗವಹಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಅವರು ಯಾವಾಗಲೂ ನನ್ನ ಶಕ್ತಿಯಾಗಿದ್ದಾರೆ. 'ವಿ' ಒಂದು ಆಕ್ಷನ್ ಡ್ರಾಮಾ ಆಗಿದ್ದು, ಪ್ರೇಕ್ಷಕರ ನಿರೀಕ್ಷೆಗೆ ಯೋಗ್ಯವಾಗಿದೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ಇನ್ನುಳಿದಂತೆ ದಿಲ್ ರಾಜು, ಶಿರೀಶ್ ಮತ್ತು ಹರ್ಷಿತ್ ರೆಡ್ಡಿ ನಿರ್ಮಿಸಿದ ವಿ ಅನ್ನು ಮೋಹನ ಕೃಷ್ಣ ಇಂದ್ರಗಂತಿ ನಿರ್ದೇಶಿಸಿದ್ದಾರೆ, ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದಾರೆ.

  English summary
  Amazon Prime Video’s has released much-awaited action thriller 'V' trailer starring Nani and Sudheer Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X