ಪ್ರಭಾಸ್-ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟನೆ
ತೆಲುಗು ನಟರಾಗಿದ್ದ ಪ್ರಭಾಸ್ ಬಾಹುಬಲಿ ಮೂಲಕ ಗಡಿಗಳನ್ನು ಮುರಿದು ಬಾಲಿವುಡ್ ನಲ್ಲೂ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
ಆದಿಪರುಷ್ ಎಂಬ ದಾಖಲೆಯ ಬಜೆಟ್‌ನ ಸಿನಿಮಾದ ನಾಯಕರಾಗಿರುವ ಪ್ರಭಾಸ್ ಅದರ ಜೊತೆಗೆ ನಾಗ್ ಅಶ್ವಿನ್ ನಿರ್ದೇಶನದ ಮತ್ತೊಂದು ಭಾರಿ ಬಜೆಟ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ.
ಆದರೆ ಇದೇ ಸಿನಿಮಾಕ್ಕೆ ಬಾಲಿವುಡ್‌ನಿಂದ ಮತ್ತೊಬ್ಬ ದಿಗ್ಗಜ ನಟ ಪ್ರಭಾಸ್ ಜೊತೆ ಸೇರಲಿದ್ದಾರೆ. ಹೌದು, ಖ್ಯಾತ ನಟ ಅಮಿತಾಬ್ ಬಚ್ಚನ್ ಸಹ ಪ್ರಭಾಸ್ ರ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ರ 21 ನೇ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾವು ಪೌರಾಣಿಕ-ಥ್ರಿಲ್ಲರ್ ಕತೆಯಾಗಿದ್ದು, ಅಮಿತಾಬ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ವೈಜಯಂತಿ ಮೂವೀಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮೂವೀಸ್ ಮಾಡಿರುವ ಅಧಿಕೃತ ಟ್ವೀಟ್‌ನಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಚಿತ್ರ ತಂಡಕ್ಕೆ ಸ್ವಾಗತಿಸಲಾಗಿದೆ.
Recommended Video
ಅಮಿತಾಬ್ ಬಚ್ಚನ್ ಅವರಿಗೆ ತೆಲುಗು ಸಿನಿಮಾ ಮೊದಲೇನಲ್ಲ, ಈ ಮೊದಲು 'ಮನಂ' ಹಾಗೂ 'ಸೈರಾ ನರಸಿಂಹ ರೆಡ್ಡಿ' ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.


Click it and Unblock the Notifications











