Don't Miss!
- Sports
ಕಾಮನ್ವೆಲ್ತ್ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?
- News
ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು
- Automobiles
ಇದೇ ತಿಂಗಳು 11ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Technology
ಒನ್ಪ್ಲಸ್ ಏಸ್ ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ?
- Lifestyle
Mangal Gochar 2022: ಆ. 10ಕ್ಕೆ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ದ್ವಾದಶ ಮೇಲೆ ಬೀರಲಿರುವ ಪ್ರಭಾವವೇನು?
- Finance
ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
ಚಿತ್ರಮಂದಿರ, ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಸಿಎಂ ಜಗನ್ ಯೋಜನೆಗೆ ಆರಂಭಿಕ ಹಿನ್ನಡೆ!
ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಸರ್ಕಾರಿ ಆನ್‌ಲೈನ್ ಪೋರ್ಟಲ್ ಮೂಲಕವೇ ಮಾರಾಟ ಮಾಡಲು ಮುಂದಾಗಿದ್ದ ಸಿಎಂ ಜಗನ್ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಂಪೂರ್ಣ ಟಿಕೆಟ್ ಮಾರಾಟ ತನ್ನ ಸುಪರ್ಧಿಗೆ ತೆಗೆದುಕೊಂಡು ಚಿತ್ರರಂಗದ ಮೇಲೆ ಪರೋಕ್ಷ ಹಿಡಿತ ಸಾಧಿಸುವ ಜಗನ್ ಯೋಜನೆಗೆ ಆಂಧ್ರ ಹೈಕೋರ್ಟ್ ಅಲ್ಪವಿರಾಮವಿಟ್ಟಿದೆ.
ಆಂಧ್ರದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಸರ್ಕಾರಿ ಆನ್‌ಲೈನ್ ಪೋರ್ಟಲ್ 'ಯುವರ್ ಸ್ಕ್ರೀನ್' ಅನ್ನು ಆಂಧ್ರದ ಟಿವಿ ಮತ್ತು ಚಿತ್ರಮಂದಿರ ಅಭಿವೃದ್ಧಿ ನಿಗಮ (APSFTTDC) ಮೂಲಕ ಚಾಲನೆಗೆ ತಂದು ರಾಜ್ಯದ ಎಲ್ಲ ಚಿತ್ರಮಂದಿರಗಳ ಟಿಕೆಟ್ ಅನ್ನು ಈ ಪೋರ್ಟಲ್ ಹಾಗೂ ಅಪ್ಲಿಕೇಶನ್ ಮೂಲಕವಷ್ಟೆ ಮಾರಾಟ ಮಾಡಲು ಸರ್ಕಾರ ಮುಂದಾಗಿತ್ತು.
'ಕೆಜಿಎಫ್
2'
ಟಿಕೆಟ್
ನೀಡಿ
'ಕೆಜಿಎಫ್
1'
ಸಿನಿಮಾ
ಪ್ರದರ್ಶಿಸಿದ
ಬೆಂಗಳೂರಿನ
ಚಿತ್ರಮಂದಿರ!
ಆದರೆ ಆಂಧ್ರ ಸರ್ಕಾರದ ಈ ನಿರ್ಧಾರಕ್ಕೆ ಮಲ್ಟಿಫ್ಲೆಕ್ಸ್‌ಗಳು, ಬುಕ್ ಮೈ ಶೋ, ಪೇಟಿಎಂ ಇನ್ನಿತರೆ ಕೆಲವು ಅಪ್ಲಿಕೇಶನ್‌ಗಳು, ಚಿತ್ರಮಂದಿರಗಳ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದವು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸರ್ಕಾರ ಆದೇಶಕ್ಕೆ ತಡೆ ನೀಡಿದೆ.

ಜುಲೈ 27 ರವರೆಗೆ ತಡೆ
ಸರ್ಕಾರಿ ಆನ್‌ಲೈಲ್ ಪೋರ್ಟಲ್ ಹಾಗೂ ಅಪ್ಲಿಕೇಶನ್ ಮೂಲಕವಷ್ಟೆ ಚಿತ್ರಮಂದಿರಗಳ ಟಿಕೆಟ್ ಮಾರಾಟ ಮಾಡಬೇಕೆನ್ನುವ ಸರ್ಕಾರದ ಆದೇಶ ಸಂಖ್ಯೆ 69ಕ್ಕೆ ತಡೆ ನೀಡಿರುವ ಆಂಧ್ರ ಪ್ರದೇಶ ಹೈಕೋರ್ಟ್, ಜುಲೈ 27 ರವರೆಗೆ ಸರ್ಕಾರ ತನ್ನ ಪೋರ್ಟಲ್ ಮೂಲಕ ಟಿಕೆಟ್ ಮಾರಾಟ ಮಾಡುವಂತಿಲ್ಲ ಎಂದಿದೆ. ಈ ನಡುವೆ ಪ್ರಕರಣದ ವಿಚಾರಣೆ ನಡೆಸಿ ಆ ಬಳಿಕ ನಿಖರ ಸೂಚನೆ ಹೊರಬೀಳಲಿದೆ.

ಚಿತ್ರಮಂದಿರಗಳ ಮಾಲೀಕರು ಸಹಿ ಹಾಕಿಲ್ಲ
ಆಂಧ್ರ ಸರ್ಕಾರದ ನಿಯಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರಮಂದಿರಗಳ ಮಾಲೀಕರು, ಸರ್ಕಾರ, ನಿರ್ಮಾಪಕರು ಹಾಗೂ ಚಿತ್ರಮಂದಿರಗಳ ಮಾಲೀಕರ ನಡುವೆ ಲಾಭ ಹಂಚಿಕೆ ವಿಚಾರದ ಬಗ್ಗೆ ನಮಗೆ ಒಪ್ಪಿಗೆ ಇಲ್ಲ ಎಂದಿದ್ದಾರೆ. ಅಲ್ಲದೆ ಹಲವು ಸಭೆಗಳ ಬಳಿಕವೂ APSFTTDCಯ ಮೆಮೊರ್ಯಾಂಡಮ್‌ಗೆ ಚಿತ್ರಮಂದಿರಗಳ ಮಾಲೀಕರ ಸಂಘದ ಹಲವು ಸದಸ್ಯರು ಸಹಿ ಹಾಕಿಲ್ಲ. ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಬಿಗ್‌ಟ್ರೀ ಅಸೋಸಿಯೇಷನ್ (ಬುಕ್ ಮೈ ಶೋ) ಹಾಗೂ ವಿಜಯವಾಡ ಎಕ್ಸಿಬಿಟರ್ಸ್ ಅವರುಗಳು ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಪಾರ್ಟಿಗಳಾಗಿದ್ದಾರೆ.

ಅತ್ಯಂತ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ
ಆದರೆ ಅಪ್ಲಿಕೇಶನ್ ಹಾಗೂ ಪೋರ್ಟಲ್ ಬಗ್ಗೆ ಸರ್ಕಾರ ಹೇಳುತ್ತಿರುವುದೇ ಬೇರೆ, ಬದಲಿಗೆ ತೆಲುಗು ಚಿತ್ರರಂಗದ ಆದಾಯದ ಮೇಲೆ ನಿಗಾ ಇಡುವ ಹಾಗೂ ತೆರಿಗೆಗಳ್ಳತನ ತಪ್ಪಿಸುವ ಉದ್ದೇಶದಿಂದ ತರಲಾಗಿದೆ ಎಂದಿದೆ. ಆಂಧ್ರದಲ್ಲಿ ಸಿನಿಮಾ ಟಿಕೆಟ್ ದರ ನಿರ್ಣಯಿಸುವ ಹಕ್ಕು ರಾಜ್ಯ ಸರ್ಕಾರದ ಬಳಿ ಇದ್ದು (ಆಂಧ್ರ ಪ್ರದೇಶ ಸಿನಿಮಾ ರೆಗ್ಯುಲೇಟರಿ ಆಕ್ಟ್ 1955). ಇನ್ನು ಮುಂದೆ ಸರ್ಕಾರವೇ ಸಿನಿಮಾಗಳ ಟಿಕೆಟ್ ಬೆಲೆ ನಿಗದಿಪಡಿಸಲಿದೆ. ಟಿಕೆಟ್ ಅನ್ನು ಸರ್ಕಾರವೇ ಮಾರಾಟ ಮಾಡಲಿವೆ. 'ಅಪ್ಲಿಕೇಶನ್ ಮೂಲಕ ರಾಜ್ಯದ ಯಾವುದೇ ಚಿತ್ರಮಂದಿರಗಳ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದ್ದು, ಟಿಕೆಟ್ ಬುಕ್ ಮಾಡಲು ಕೇವಲ 1.90 ರುಪಾಯಿ ಮಾತ್ರವೇ ಸೇವಾ ಶುಲ್ಕ ಇರಲಿದೆ'' ಎಂದಿದ್ದಾರೆ. ಅಲ್ಲದೆ ಆನ್‌ಲೈನ್‌ನಿಂದ ಮಾರಾಟವಾದ ಟಿಕೆಟ್‌ನ ಹಣವನ್ನು ಅದೇ ದಿನ ಚಿತ್ರಮಂದಿರಗಳ ಮಾಲೀಕರ ಖಾತೆಗೆ ವರ್ಗ ಮಾಡಲಾಗುತ್ತದೆ ಎಂದಿದೆ ಸರ್ಕಾರ.

ತೆರಿಗೆ ಕಳ್ಳತನ ತಡೆಯಲು ಈ ಯೋಜನೆ
ಸರ್ಕಾರ ಹೊರತರಲು ಹೊರಟಿಸಿರುವ 'ಯುವರ್ ಸ್ಕ್ರೀನ್' ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಆಂಧ್ರದಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿನಿಮಾ ಟಿಕೆಟ್ ಮಾರಾಟವಾಗಲಿದೆ. ಸಿನಿಮಾಗಳ ಒಟ್ಟು ಕಲೆಕ್ಷನ್ ಲೆಕ್ಕಾಚಾರ ಸರಿಯಾಗಿ ಸಿಗಲಿದೆ. ಯಾವ ಸಿನಿಮಾ ಎಷ್ಟು ಗಳಿಸಿದೆ ಎಂಬ ಮಾಹಿತಿ ಸರ್ಕಾರದ ಬಳಿ ಪಕ್ಕಾ ಆಗಿರಲಿದ್ದು, ಇದರಿಂದ ತೆರಿಗೆ ಗಳ್ಳತನ ಹಾಗೂ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ತಪ್ಪಲಿದೆ. ಚಿತ್ರಮಂದಿರಗಳ ಕೌಂಟರ್‌ನಲ್ಲಿಯೂ ಟಿಕೆಟ್ ಖರೀದಿ ಮಾಡಬಹುದು ಆದರೆ ಚಿತ್ರಮಂದಿರಗಳ ಮಾಲೀಕರು 'ಯುವರ್ ಸ್ಕ್ರೀನ್' ವೆಬ್‌ಸೈಟ್ ಮೂಲಕವೇ ಕೌಂಟರ್‌ನಲ್ಲಿ ಟಿಕೆಟ್ ಕೊಡಬೇಕಾಗಿರುತ್ತದೆಯಾದ್ದರಿಂದ, ಮಾರಾಟವಾಗುವ ಪ್ರತಿ ಟಿಕೆಟ್‌ನ ಲೆಕ್ಕ ಸರ್ಕಾರದ ಬಳಿ ಇರಲಿದೆ. ಯಾವ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ, ಯಾವ ನಿರ್ಮಾಪಕ ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎಂಬಿತ್ಯಾದಿ ಮಾಹಿತಿಗಳು ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗಲಿದೆ.