Don't Miss!
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನುಷ್ಕಾ ಶೆಟ್ಟಿ , ರಶ್ಮಿಕಾ ಮಂದಣ್ಣ ಇಬ್ಬರದ್ದೂ ಒಂದೇ ಅಪಾರ್ಟ್‌ಮೆಂಟ್!
ಇತ್ತೀಚೆಗೆ ಟಾಲಿವುಡ್‌ನಲ್ಲಿ ಅನುಷ್ಕಾ ಶೆಟ್ಟಿ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರಬಹುದು. ಆದರೆ, ಟಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿಯರಲ್ಲಿ ಇಂದಿಗೂ ಟಾಪ್ ಸ್ಥಾನದಲ್ಲಿ ಇರೋದು ಇವರೇ. ಈಗೀಗ ರಶ್ಮಿಕಾ ಮಂದಣ್ಣ ಆ ಸ್ಥಾನವನ್ನುಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ಹೈದರಾಬಾದ್ ಹಾಗೂ ಬೆಂಗಳೂರು ಎರಡೂ ಕಡೆ ಓಡಾಡಿಕೊಂಡಿರುತ್ತಾರೆ. ಸಿನಿಮಾಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಅನುಷ್ಕಾ ಶೆಟ್ಟಿ ಹೈದರಾಬಾದ್‌ನಲ್ಲಿಯೇ ಹೆಚ್ಚಾಗಿ ಇಟ್ಟುಕೊಳ್ಳುತ್ತಾರೆ. ಈಗ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ ಅನ್ನೋದನ್ನು ಅಂತ ಟಾಲಿವುಡ್ ಮೂಲಗಳು ಹೊರಹಾಕಿವೆ.
ರಶ್ಮಿಕಾ
ವಿರುದ್ಧ
ಕನ್ನಡ,
ತೆಲುಗು
ಮಂದಿ
ಕಿಡಿ:
ರಶ್ಮಿಕಾ
ಬೆಂಬಲಕ್ಕೆ
ನಿಂತ್ರಾ
ಅಲ್ಲು
ಅರ್ಜುನ್
ಆರ್ಮಿ?
ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಬೆಂಗಳೂರಿನಿಂದ ತನ್ನ ಬೇಸ್ ಅನ್ನು ಹೈದರಾಬಾದ್‌ಗೆ ಶಿಫ್ಟ್ ಮಾಡಿದ್ದಾರೆ. ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚು ನಟಿಸುತ್ತಿರೋದ್ರಿಂದ ಹೈದರಾಬಾದ್‌ನಲ್ಲಿಯೇ ಹೆಚ್ಚು ವಾಸ್ತವ್ಯ ಹೂಡುತ್ತಾರೆ. ಅಂದ್ಹಾಗೆ ಈ ಇಬ್ಬರೂ ಕನ್ನಡದ ನಟಿಯರು ಇರುವ ಅಪಾರ್ಟ್‌ಮೆಂಟ್ ಕೂಡ ಒಂದೇ.

ಅನುಷ್ಕಾ-ರಶ್ಮಿಕಾ ಅಪಾರ್ಟ್‌ಮೆಂಟ್ ಒಂದೇ
ಕನ್ನಡ ಇಬ್ಬರು ನಟಿಯರು ಹೈದರಾಬಾದ್‌ನಲ್ಲಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಅಸಲಿಗೆ ಇಬ್ಬರದ್ದೂ ಒಂದೇ ಬ್ಲಾಕ್ ಅಂತಾನೂ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ಅನುಷ್ಕಾ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಹೈದರಾಬಾದ್‌ನ ಗಚಿಬೌಲಿ ಸಮೀಪದ 'ಜಯಭೇರಿ ದಿ ಪೀಕ್' ಅನ್ನೋ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಅಪಾರ್ಟ್‌ಮೆಂಟ್, ಬ್ಲಾಕ್ ಒಂದೇ ಆಗಿದ್ದರೂ, ಫ್ಲೋರ್ ಮಾತ್ರ ಬೇರೆ ಎಂದು ಹೇಳಲಾಗುತ್ತಿದೆ.

ಅನುಷ್ಕಾ ಶೆಟ್ಟಿ-ರಶ್ಮಿಕಾ ಮಂದಣ್ಣ ಲೈಫ್ ಸ್ಟೈಲ್
ಅನುಷ್ಕಾ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರಿಗೂ ಈಗಾಗಲೇ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅನುಷ್ಕಾ ಶೆಟ್ಟಿ ಸಿನಿಮಾಗಳು ಭಾರತದ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿವೆ. ಅನುಷ್ಕಾ ಶೆಟ್ಟಿ ನಟಿಸಿದ 'ಬಾಹುಬಲಿ' ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೇ ಸೃಷ್ಟಿಸಿದೆ. ಇತ್ತ ರಶ್ಮಿಕಾ 'ಪುಷ್ಪ' ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಇಬ್ಬರೂ ಬೇಡಿಕೆಯ ನಟಿಯಾಗಿರುವುದರಿಂದ ಐಶಾರಾಮಿ ಸ್ಟಾರ್ ಲೈಫ್ ಅನ್ನು ಲೀಡ್ ಮಾಡುತ್ತಿದ್ದಾರೆ.

ಅನುಷ್ಕಾ ಮುಂದಿನ ಸಿನಿಮಾ ಯಾವುದು?
'ನಿಶ್ಯಬ್ಧಂ' ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಯುವಿ ಕ್ರಿಯೇಷನ್ ನಿರ್ಮಿಸುತ್ತಿರುವ ಸಿನಿಮಾ ಸದ್ದಿಲ್ಲದೆ ಶೂಟಿಂಗ್ ನಡೆಯುತ್ತಿದ್ದು, ಇದರಲ್ಲಿ ಮಾಸ್ಟರ್ ಶೆಫ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನವೀನ್ ಪೋಲಿಶೆಟ್ಟಿ ಈ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಶೂಟಿಂಗ್ ಹಂತದಲ್ಲಿರುವ ಚಿತ್ರ ಬಿಡುಗಡೆಗೆ ಸಮೀಪವಾಗುತ್ತಿರುವಂತೆ ಟೈಟಲ್ ಅನೌನ್ಸ್ ಮಾಡುವ ಸಾಧ್ಯತೆಯಿದೆ. ಅನುಷ್ಕಾ ಶೆಟ್ಟಿ ನಟಿಸಿದ ಸಿನಿಮಾ 'ಭಾಗಮತಿ' 2018ರಲ್ಲಿ ರಿಲೀಸ್ ಆಗಿತ್ತು. ಥಿಯೇಟರ್‌ನಲ್ಲಿ ರಿಲೀಸ್ ಆದ ಕೊನೆಯ ಸಿನಿಮಾ ಕೂಡ ಇದೆನೇ. ಈ ಕಾರಣಕ್ಕೆ ಹೊಸ ಸಿನಿಮಾ ಬಗ್ಗೆ ಕುತೂಹಲವಿದೆ.

ರಶ್ಮಿಕಾ ಫುಲ್ ಬ್ಯುಸಿ
ರಶ್ಮಿಕಾ ಮಂದಣ್ಣ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ 'ಪುಷ್ಪ 2' ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಹಾಗೇ ದಳಪತಿ ವಿಜಯ್ ಜೊತೆ ನಟಿಸುತ್ತಿರುವ ಕೂಡ ಬಿಗ್ ಪ್ರಾಜೆಕ್ಟ್ ಸಿನಿಮಾನೇ. ಅಲ್ಲದೆ ಬಾಲಿವುಡ್‌ನಲ್ಲಿ ಒಂದು ಸಿನಿಮಾಗಳು ರಿಲೀಸ್ ಆಗಬೇಕಿದ್ದು, ಇನ್ನೊಂದು ಸಿನಿಮಾ ಶೂಟಿಂಗ್ ಹಂತದಲ್ಲಿದೆ.