For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶೆಟ್ಟಿ ಬರ್ತ್‌ಡೇ: ಅಂದ.. ಅಭಿನಯ.. ಸಕ್ಸಸ್ ಸೀಕ್ರೆಟ್ ಏನು?

  |

  ಅನುಷ್ಕಾ ಶೆಟ್ಟಿ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದೇ ಇದ್ದರೂ ಕನ್ನಡ ಸಿನಿರಸಿಕರಿಕರಿಗೂ ಅಚ್ಚುಮೆಚ್ಚಿನ ನಟಿ. ಮಂಗಳೂರಿನಲ್ಲಿ ಹುಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಮೋಡಿ ಮಾಡಿದ ಬೆಡಗಿ. 'ಅರುಂಧತಿ' ಆಗಿರಲಿ 'ಬಿಲ್ಲಾ' ಚಿತ್ರದ ಮಾಯಾ ಆಗಿರಲಿ, 'ಬಾಹುಬಲಿ' ಮನದನ್ನೆ ದೇವಸೇನಾ ಆಗಿರಲಿ ಒಟ್ಟಿನಲ್ಲಿ ಪಾತ್ರ ಯಾವುದೇ ಆದರೂ ಅದಕ್ಕೆ ಪರ್ಫೆಕ್ಟ್ ಆಗಿ ಹೊಂದಿಕೊಂಡು ನಟಿಸಿ ಪ್ರೇಕ್ಷಕರನ್ನ ರಂಜಿಸಿದವರು ಅನುಷ್ಕಾ ಶೆಟ್ಟಿ.

  'ಸೈಜ್ ಝೀರೋ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದ ನಟಿ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾಗಳಲ್ಲಿ ನಟಿಸೋದು ಕಷ್ಟ ಆಗಿಬಿಟ್ಟಿದೆ. ಆದರೂ ಸ್ವೀಟಿ ಕ್ರೇಜ್ ಮಾತ್ರ ಕಿಂಚಿತ್ತು ಕಮ್ಮಿ ಆಗಿಲ್ಲ. ಅನುಷ್ಕಾ ಶೆಟ್ಟಿ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಇವತ್ತಿಗೂ ಕ್ಯೂ ನಿಂತಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ಕರಾವಳಿ ಚೆಲುವೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರಿಂದ ಸ್ವೀಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿಗಳು ನೆಚ್ಚಿನ ನಟಿಯನ್ನು ಮತ್ತೆ ತೆರೆಮೇಲೆ ನೋಡೋಕೆ ಕಾತರದಿಂದ ಕಾಯುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆ ಆಗುತ್ತಾ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ.

  ಮತ್ತೆ ಬಿಕಿನಿಯಲ್ಲಿ ತೆರೆಮೇಲೆ ಅನುಷ್ಕಾ ಶೆಟ್ಟಿ ಎಂಟ್ರಿ: ಪೇಪರ್ ತೂರಿ, ಶಿಳ್ಳೆ, ಚಪ್ಪಾಳೆ ಹೊಡೆದ ಪಡ್ಡೆ ಹುಡುಗರು!ಮತ್ತೆ ಬಿಕಿನಿಯಲ್ಲಿ ತೆರೆಮೇಲೆ ಅನುಷ್ಕಾ ಶೆಟ್ಟಿ ಎಂಟ್ರಿ: ಪೇಪರ್ ತೂರಿ, ಶಿಳ್ಳೆ, ಚಪ್ಪಾಳೆ ಹೊಡೆದ ಪಡ್ಡೆ ಹುಡುಗರು!

  ನವೆಂಬರ್ 7, 1981ರಲ್ಲಿ ಮಂಗಳೂರಿನಲ್ಲಿ ಹುಟ್ಟಿಬೆಳೆದ ಚೆಲುವೆಗೆ ಹೆತ್ತವರು ಇಟ್ಟು ಹೆಸರು 'ಸ್ವೀಟಿ ಶೆಟ್ಟಿ'. ಮುಂದೆ ಚಿತ್ರರಂಗಕ್ಕೆ ಬಂದ ಮೇಲೆ ಅನುಷ್ಕಾ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡಿದ್ದರು. ಬೆಂಗಳೂರಿನ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಡಿಗ್ರಿ ಪಡೆದುಕೊಂಡಿದ್ದಾರೆ. ಯೋಗ ಕಲಿತು ಯೋಗ ಟೀಚರ್ ಆಗಿದ್ದ ಸ್ವೀಟಿ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  ಸ್ವೀಟಿ ಸಿನಿಎಂಟ್ರಿ 'ಸೂಪರ್'

  ಸ್ವೀಟಿ ಸಿನಿಎಂಟ್ರಿ 'ಸೂಪರ್'

  2005ರಲ್ಲಿ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಕಣ್ಣಿಗೆ ಬಿದ್ದ ಅನುಷ್ಕಾ ಶೆಟ್ಟಿ 'ಸೂಪರ್' ಚಿತ್ರಕ್ಕೆ ಆಯ್ಕೆ ಆಗಿದ್ದರು. ಚಿತ್ರದಲ್ಲಿ ನಾಗಾರ್ಜುನ ಜೋಡಿಯಾಗಿ ಮೋಡಿ ಮಾಡಿದ್ದರು. ಆರಂಭದ ದಿನಗಳಲ್ಲೇ ಸ್ವೀಟಿ ಹೆಚ್ಚು ಗ್ಲಾಮರಸ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. 'ಸೂಪರ್' ನಂತರ ರಾಜಮೌಳಿ ನಿರ್ದೇಶನದ 'ವಿಕ್ರಮಾರ್ಕುಡು' ಚಿತ್ರದಲ್ಲೂ ನಟಿಸಿ ಮೋಡಿ ಮಾಡಿದ್ದರು. ಆರಂಭದ ದಿನಗಳಲ್ಲಿ ಅನುಷ್ಕಾ ಬರೀ ಗ್ಲಾಮರಸ್ ರೋಲ್‌ಗಳಲ್ಲೇ ಹೆಚ್ಚು ನಟಿಸುತ್ತಿದ್ದರು. ಆದರೆ 'ಅರುಂಧತಿ' ಸಿನಿಮಾ ಆಕೆಯ ಇಮೇಜ್ ಬದಲಿಸಿಬಿಡ್ತು.

  ಪವರ್‌ಫುಲ್ ರೋಲ್‌ಗಳಲ್ಲಿ ಸ್ವೀಟಿ

  ಪವರ್‌ಫುಲ್ ರೋಲ್‌ಗಳಲ್ಲಿ ಸ್ವೀಟಿ

  ಕೋಡಿ ರಾಮಕೃಷ್ಣ ನಿರ್ದೇಶನದ ಹಾರರ್ ಫ್ಯಾಂಟಸಿ ಸಿನಿಮಾ 'ಅರುಂಧತಿ'. ಅನುಷ್ಕಾ ಶೆಟ್ಟಿ ಚಿತ್ರದ ಟೈಟಲ್ ರೋಲ್‌ನಲ್ಲಿ ನಟಿಸಿ ಹುಬ್ಬೇರಿಸಿದರು. ಪವರ್‌ಫುಲ್ ರೋಲ್‌ನಲ್ಲಿ ಅಬ್ಬರಿಸಿ ಪ್ರೇಕ್ಷಕರ ಮನಗೆದ್ದರು. ಸೋನು ಸೂದ್ ಹಾಗೂ ಅನುಷ್ಕಾ ಶೆಟ್ಟಿ ಕಾಂಬಿನೇಷನ್‌ ದೃಶ್ಯಗಳು ಮ್ಯಾಜಿಕ್ ಮಾಡಿತ್ತು. ಈ ಸಿನಿಮಾ ನಂತರ 'ರುದ್ರಮದೇವಿ', 'ಭಾಗಮತಿ' ರೀತಿಯ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದರು. ಬಾಹುಬಲಿ ಚಿತ್ರದ ದೇವಸೇನಾ ಪಾತ್ರವೂ ಇದೇ ರೀತಿ ಬಹಳ ಪವರ್‌ಫುಲ್ ಆಗಿತ್ತು. ಹೀರೊಗಳ ರೇಂಜಿಗೆ ಅನುಷ್ಕಾ ಶೆಟ್ಟಿ ಕ್ರೇಜ್ ಸೃಷ್ಟಿಯಾಗಿತ್ತು.

  'ಸೈಜ್ ಜೀರೊ' ಚಿತ್ರದಲ್ಲಿ ಎಡವಟ್ಟು

  'ಸೈಜ್ ಜೀರೊ' ಚಿತ್ರದಲ್ಲಿ ಎಡವಟ್ಟು

  'ಬಾಹುಬಲಿ' ಮೊದಲ ಭಾಗ ಮುಗಿದ ಮೇಲೆ ಪ್ರಕಾಶ್ ಕೊವೆಲಮುಡಿ ನಿರ್ದೇಶನದ 'ಸೈಜ್ ಜೀರೊ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ದಪ್ಪಗಿರುವ ಯುವತಿಯ ಕುರಿತಾದ ಸಿನಿಮಾ ಅದು. ಚಿತ್ರಕ್ಕಾಗಿ ಕರಾವಳಿ ಚೆಲುವೆ ತೂಕ ಹೆಚ್ಚಿಸಿಕೊಂಡು ನಟಿಸುವ ಸಾಹಸ ಮಾಡಿದ್ದರು. ಆದರೆ ಸಿನಿಮಾ ಮುಗಿದ ಮೇಲೆ ಮೊದಲಿನ ಪಿಜಿಕ್ ವಾಪಸ್ ಪಡೆಯಲು ವಿಫಲರಾದರು. ಯೋಗ ಪಟು ಆಗಿದ್ದರಿಂದ ಸರ್ಜರಿಯ ಮೊರೆ ಹೋಗದೇ ತೂಕ ಇಳಿಸುವ ಪ್ರಯತ್ನ ಮಾಡಿ ಮಾಡಿ ಸುಸ್ತಾದರು. ಏನೇ ಮಾಡಿದರು ಅನುಷ್ಕಾ ಬಳಕುವ ಬಳ್ಳಿ ಆಗಲೇಯಿಲ್ಲ. ಹಾಗಾಗಿ ನಿಧಾನವಾಗಿ ಅವಕಾಶಗಳು ಕಮ್ಮಿ ಆಗಿತ್ತು. ಸ್ವೀಟಿ ಕೂಡ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮನಸು ಮಾಡಲಿಲ್ಲ.

  ಪದೇ ಪದೇ ಕೇಳಿಬರ್ತಿದೆ ಮದುವೆ ಸುದ್ದಿ

  ಪದೇ ಪದೇ ಕೇಳಿಬರ್ತಿದೆ ಮದುವೆ ಸುದ್ದಿ

  ವಯಸ್ಸು 40 ದಾಟಿದರೂ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಯೋಚಿಸಿದಂತೆ ಕಾಣಿಸುತ್ತಿಲ್ಲ. ಇನ್ನು ನಟ ಪ್ರಭಾಸ್ ಜೊತೆ ಸ್ವೀಟಿ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿಬರ್ತಾನೇ ಇದೆ. ಆದರೆ ಇಬ್ಬರು ಇದನ್ನು ಒಪ್ಪಿಕೊಳ್ಳಲಿಲ್ಲ. ತೆಲುಗಿನ ನವೀನ್ ಪೊಲಿಶೆಟ್ಟಿ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ 'ಒಟ್ಟಕೊಂಬನ್' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅನುಷ್ಕಾ ಶೆಟ್ಟಿ ಕನ್ನಡ ಚಿತ್ರದಲ್ಲಿ ಯಾವಾಗ ನಟಿಸುತ್ತಾರೋ ಕಾದು ನೋಡಬೇಕು.

  English summary
  Anushka shetty birthday special: Know about her personal and professional life. Anushka Shetty is an Indian Film Actress. She was also a Yoga Instructor. know more.
  Monday, November 7, 2022, 12:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X