For Quick Alerts
  ALLOW NOTIFICATIONS  
  For Daily Alerts

  ಈ ಫೋಟೊಗಳಲ್ಲಿರುವ ಪುಟಾಣಿ ಈಗ ದಕ್ಷಿಣ ಭಾರತದ ಟಾಪ್ ಹೀರೊಯಿನ್: ಇವರು ಯಾರು ಗೊತ್ತಾ?

  |

  ನಾವು ಚಿಕ್ಕಂದಿನಲ್ಲಿ ಹೇಗಿದ್ವಿ ಅನ್ನೋದು ಗೊತ್ತಾಗೋದು ನಮ್ಮ ಚಿಕ್ಕಂದಿನ ಫೋಟೊಗಳನ್ನು ನೋಡಿದಾಗ ಮಾತ್ರ. ಕೆಲವೊಮ್ಮೆ ನಮ್ಮ ಚಿಕ್ಕಂದಿನ ಫೋಟೊಗಳನ್ನು ನೋಡಿ ಅಯ್ಯೋ ನಾನು ಚಿಕ್ಕಂದಿನಲ್ಲಿ ಹೀಗಿದ್ನಾ ಅನ್ನಿಸಿದ್ರೆ, ಮತ್ತೆ ಕೆಲವೊಮ್ಮೆ ಅಯ್ಯೋ ಅಷ್ಟು ಕ್ಯೂಟ್ ಆಗಿ ಇದ್ದ ನಾನು ಈಗ ಯಾಕೆ ಹೀಗಾಗಿದ್ದೀನಿ ಎಂದುಕೊಳ್ಳುತ್ತಾರೆ.

  ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಟಿಯರ ಚಿಕ್ಕಂದಿನ ಫೋಟೊ ನೋಡುವ ಕುತೂಹಲ ಇದ್ದೇ ಇರುತ್ತದೆ. ಚಿಕ್ಕಂದಿನಲ್ಲಿ ಹೇಗಿದ್ದರು ಎನ್ನುವುದನ್ನು ತಿಳಿಯುವ ಆಸಕ್ತಿ ಹೆಚ್ಚು. ನಟ- ನಟಿಯರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಳೇ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾ ಜಮಾನದಲ್ಲಿ ಅಂತಹ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಕೆಲವೊಮ್ಮೆ ಚಿಕ್ಕಂದಿನ ಫೋಟೊ ನೋಡಿ ಇದು ಯಾರು ಎಂದು ಗುರ್ತಿಸಿಬಿಡಬಹುದು. ಆದರೆ ಕೆಲವೊಮ್ಮೆ ಕಷ್ಟ ಕಷ್ಟ. ಯಾಕಂದರೆ ಕೆಲವೊಮ್ಮೆ ಚಿಕ್ಕಂದಿನಲ್ಲಿ ಇದ್ದಿದ್ದಕ್ಕಿಂತ ದೊಡ್ಡವರಾದ ಮೇಲೆ ಅವರ ಲುಕ್ಸ್ ಬದಲಾಗಿರುತ್ತದೆ.

  ಅನುಷ್ಕಾ ಶೆಟ್ಟಿ ಬರ್ತ್‌ಡೇ: ಅಂದ.. ಅಭಿನಯ.. ಸಕ್ಸಸ್ ಸೀಕ್ರೆಟ್ ಏನು?ಅನುಷ್ಕಾ ಶೆಟ್ಟಿ ಬರ್ತ್‌ಡೇ: ಅಂದ.. ಅಭಿನಯ.. ಸಕ್ಸಸ್ ಸೀಕ್ರೆಟ್ ಏನು?

  ದಕ್ಷಿಣ ಭಾರತದ ನಟಿಯೊಬ್ಬರು ರಕ್ಷಾಬಂಧನ್‌ ಹಬ್ಬಕ್ಕೆ ಸಹೋದರರ ಜೊತೆಗಿನ ಚಿಕ್ಕಂದಿನ ಫೋಟೊಗಳನ್ನು ಶೇರ್ ಮಾಡಿ ಶುಭಾಶಯ ಕೋರುತ್ತಿರುತ್ತಾರೆ. ತಮ್ಮ ತಾಯಿಯ ಹುಟ್ಟುಹಬ್ಬಕ್ಕೂ ಚಿಕ್ಕಂದಿನಲ್ಲಿ ಆಕೆಯ ಜೊತೆ ಕ್ಲಿಕ್ಕಿಸಿದ ಫೋಟೊ ಶೇರ್ ಮಾಡುತ್ತಾರೆ.

  ಈ ಫೋಟೊಗಳಲ್ಲಿರುವ ಪುಟಾಣಿ ಯಾರು?

  ಈ ಫೋಟೊಗಳಲ್ಲಿರುವ ಪುಟಾಣಿ ಯಾರು?

  ಗೊತ್ತಾಯ್ತಾ ಈ ಪುಟಾಣಿ ಯಾರು ಅಂತ? ಈಕೆ ಮತ್ಯಾರು ಅಲ್ಲ. ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ. ಹೌದು ಅಭಿಮಾನಿಗಳ ಪ್ರೀತಿಯ 'ಅರುಂಧತಿ'. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡಿದ ಚೆಲುವೆ ಅನುಷ್ಕಾ ಶೆಟ್ಟಿ ಚಿಕ್ಕಂದಿನ ಫೋಟೊಗಳು ಇವು. ಸ್ವೀಟಿ ಶೆಟ್ಟಿ ಒಂದು ವರ್ಷದ ಮಗುವಾಗಿದ್ದಾಗ ಅಣ್ಣಂದಿರ ಜೊತೆಗೆ ಕ್ಲಿಕ್ಕಿಸಿರುವ ಫೋಟೊಗಳು. ರಕ್ಷಾಬಂಧನ್ ಸಮಯದಲ್ಲಿ ಅನುಷ್ಕಾ ಶೆಟ್ಟಿ ಈ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.

  ಮತ್ತೆ ಬಿಕಿನಿಯಲ್ಲಿ ತೆರೆಮೇಲೆ ಅನುಷ್ಕಾ ಶೆಟ್ಟಿ ಎಂಟ್ರಿ: ಪೇಪರ್ ತೂರಿ, ಶಿಳ್ಳೆ, ಚಪ್ಪಾಳೆ ಹೊಡೆದ ಪಡ್ಡೆ ಹುಡುಗರು!ಮತ್ತೆ ಬಿಕಿನಿಯಲ್ಲಿ ತೆರೆಮೇಲೆ ಅನುಷ್ಕಾ ಶೆಟ್ಟಿ ಎಂಟ್ರಿ: ಪೇಪರ್ ತೂರಿ, ಶಿಳ್ಳೆ, ಚಪ್ಪಾಳೆ ಹೊಡೆದ ಪಡ್ಡೆ ಹುಡುಗರು!

  ಬರ್ತ್‌ಡೇ ಸಂಭ್ರಮದಲ್ಲಿ ಸ್ವೀಟಿ

  ಬರ್ತ್‌ಡೇ ಸಂಭ್ರಮದಲ್ಲಿ ಸ್ವೀಟಿ

  ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಹಾಗೂ ಆಪ್ತರು ಸ್ವೀಟಿ ಶೆಟ್ಟಿಗೆ ಶುಭಾಶಯ ಕೋರುತ್ತಿದ್ದಾರೆ. ಮಂಗಳೂರಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಕಾಲೇಜು ಮುಗಿಸಿದ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ತೆಲುಗು ಬಿಟ್ಟರೆ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಒಂದು ಮಲಯಾಳಂ ಚಿತ್ರಕ್ಕೂ ಸೈ ಎಂದಿದ್ದಾರೆ. ಆದರೆ ಕನ್ನಡ ಚಿತ್ರದಲ್ಲಿ ಮಾತ್ರ ಸ್ವೀಟಿ ಶೆಟ್ಟಿ ನಟಿಸಲೇ ಇಲ್ಲ.

  ಹೊಸ ಚಿತ್ರದಲ್ಲಿ ಶೆಫ್ ಆದ ಸ್ವೀಟಿ

  ಹೊಸ ಚಿತ್ರದಲ್ಲಿ ಶೆಫ್ ಆದ ಸ್ವೀಟಿ

  ಇತ್ತೀಚಿನ ವರ್ಷಗಳಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. 'ನಿಶಬ್ಧಂ' ಸ್ವೀಟಿ ನಟಿಸಿದ ಕೊನೆಯ ಸಿನಿಮಾ. ಸದ್ಯ ಇನ್ನು ಹೆಸರಿಡದ ಚಿತ್ರವೊಂದರಲ್ಲಿ ಮಂಗಳೂರು ಚೆಲುವೆ ನಟಿಸ್ತಿದ್ದು, ಚಿತ್ರದಲ್ಲಿ ಶೆಫ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅನ್ವಿತಾ ರವಲಿ ಶೆಟ್ಟಿ ಎನ್ನುವ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪೋಸ್ಟರ್ ಸಮೇತ ಚಿತ್ರತಂಡ ಸ್ವೀಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ನವೀನ್ ಪೊಲಿಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದು, ಮಹೇಶ್ ಬಾಬು ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪೋಸ್ಟರ್‌ನಲ್ಲಿ ಅನುಷ್ಕಾ ಶೆಟ್ಟಿ ಕೊಂಚ ಸ್ಲಿಮ್ ಆಗಿ ದರ್ಶನ ಕೊಟ್ಟಿದ್ದಾರೆ.

  ಸ್ವೀಟಿ ದರ್ಬಾರ್ ಕಮ್ಮಿ ಆಯಿತು

  ಸ್ವೀಟಿ ದರ್ಬಾರ್ ಕಮ್ಮಿ ಆಯಿತು

  2005ರಲ್ಲಿ 'ಸೂಪರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್‌ಗಳ ಜೊತೆ ಮಿಂಚಿ ಮೋಡಿ ಮಾಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ಸ್ವೀಟಿ ದರ್ಬಾರ್ ಕಮ್ಮಿ ಆಗಿದೆ. ತೂಕ ಹೆಚ್ಚಿಸಿಕೊಂಡಿದ್ದು ಕೂಡ ಅದಕ್ಕೆ ಒಂದು ಕಾರಣ ಎನ್ನಬಹುದು. ಅನುಷ್ಕಾ ಶೆಟ್ಟಿ ಕ್ರೇಜ್ ಕಮ್ಮಿ ಆಗದೇ ಇದ್ದರೂ ಮೊದಲಿನಂತೆ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಕೊನೆಯದಾಗಿ ಸ್ವೀಟಿ ನಟಿಸಿದ 'ನಿಶಬ್ಧಂ' ಸಿನಿಮಾ ಕೂಡ ಸೋಲುಂಡಿತ್ತು.

  English summary
  Anushka Shetty Birthday Special Sweety Shetty's Cute Childhood Photos. Anushka Shetty turns 41. fans wish Bahubali Actress on her birthday. Know More.
  Monday, November 7, 2022, 20:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X